ನಗರದ ಸಾಹಿತ್ಯಾಸಕ್ತರ ಅಚ್ಚುಮೆಚ್ಚಿನ “ಬೆಂಗಳೂರು ಲಿಟರೇಚರ್ ಫೆಸ್ಟಿವಲ್’ ಮರಳಿ ಬಂದಿದೆ. ದೇಶದ ಉದಯೋನ್ಮುಖ ಬರಹಗಾರರು, ಪಬ್ಲಿಷರ್‌ಗಳು ಮತ್ತು ಓದುಗರನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದೇ ಈ ಹಬ್ಬದ ಪ್ರಮುಖ ಉದ್ದೇಶ. 5 ವರ್ಷಗಳಿಂದ ಬೇರೆ ಬೇರೆ ಥೀಮ್‌ಗಳನ್ನಿಟ್ಟುಕೊಂಡು ಯಶಸ್ವಿಯಾಗಿ ನಡೆದುಕೊಂಡು ಬಂದ ಸಾಹಿತ್ಯ ಹಬ್ಬದ ಈ ಬಾರಿಯ ಮುಖ್ಯ ವಿಷಯ “ಸ್ಪೀಕ್ ಅಪ್, ಸ್ಪೀಕ್ ಔಟ್’.
ಮಕ್ಕಳಿಗಾಗಿ ಸಿ.ಎಲ್.ಎಫ್: ಈ ಬಾರಿಯ ವಿಶೇಷವೆಂದರೆ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗವನ್ನು ರಚಿಸಲಾಗಿದೆ. ಅದುವೇ “ಚಿಲ್ಡ್ರನ್- ಲಿಟರೇಚರ್- ಫನ್’ (ಸಿಎಲ್‌ಎಫ್). ಅಲ್ಲಿ ಎಳೆಯರಿಗಾಗಿ ಕಾರ್ಯಾಗಾರ, ಕಥೆ ಹೇಳುವುದು, ಕ್ರಿಯೇಟಿವ್ ಆಟ ಮುಂತಾದವುಗಳನ್ನು ನಡೆಸಲಾಗುವುದು.
ಕನ್ಹಯ್ಯ ಕುಮಾರ್ ಆಕರ್ಷಣೆ: ನಿಮ್ಮ ನೆಚ್ಚಿನ ಬರಹಗಾರರನ್ನು ಭೇಟಿ ಮಾಡಲು “ಬೆಂಗಳೂರು ಸಾಹಿತ್ಯ ಹಬ್ಬ’ ಸುವರ್ಣಾವಕಾಶ ಕಲ್ಪಿಸಿದೆ. ರಾಮಚಂದ್ರ ಗುಹಾ, ಪೆರುಮಾಳ್ ಮುರುಗನ್, ಪೌಲ್ ಝಕರಿಯಾ, ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಸಾಹಿತಿ ಗಿರೀಶ್ ಕಾರ್ನಾಡ್, ಅಕ್ಷಯ್ ಕುಮಾರ್ ಪತ್ನಿ ನಟಿ ಟ್ವಿಂಕಲ್ ಖನ್ನಾ, ಪತ್ರಕರ್ತರಾದ ಮನು ಜೋಸೆಫ್, ರಾಜ್‌ದೀಪ್ ಸರ್ದೇಸಾಯಿ, ನಿಧಿ ರಜ್‌ದಾಣ್, ಸಾಗರಿಕಾ ಘೋಷ್ ಮತ್ತು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್, ಸವಿ ಶರ್ಮಾ, ವರುಣ್ ಅಗರ್‌ವಾಲ್ ಭಾಗವಹಿಸಲಿದ್ದಾರೆ.
ಕನ್ನಡದ ಬರಹಗಾರರಾದ ಶಾಂತಿ ಕೆ. ಅಪ್ಪಣ್ಣ, ವಿಕ್ರಂ ಹತ್ವಾರ್, ಅಬ್ದುಲ್ ರಶೀದ್ ಮತ್ತು ಇತಿಹಾಸ ತಜ್ಞ ಎಸ್.ಶೆಟ್ಟರ್, ಭಾರ್ಗವಿ ನಾರಾಯಣ್, ಇಂದಿರಾ ಲಂಕೇಶ್ ಮುಂತಾದವರೂ ಜೊತೆಯಾಗಲಿದ್ದಾರೆ. ಪ್ರವೇಶ ಉಚಿತವಾಗಿದ್ದು, ಮುಂಚಿತ ನೋಂದಣಿ ಕಡ್ಡಾಯ.
ಎಲ್ಲಿ?: ಹೋಟೆಲ್ ಲಲಿತ್ ಅಶೋಕ್, ಕುಮಾರಕೃಪಾ ರಸ್ತೆ
ಯಾವಾಗ?: ಅಕ್ಟೋಬರ್ 28-29, ಬೆಳಗ್ಗೆ 10
ನೋಂದಣಿ ಮತ್ತು ಮಾಹಿತಿಗೆ: bangaloreliteraturefestival.org
9844167547 / 9448701953