Advertisement

ಬೆಂಗಳೂರು ಲಕ್ಷ್ಮೀ, ಧಾರವಾಡ ಶಾರದೆ: ಡಾ|ಚಿಮೂ

01:16 PM Sep 11, 2017 | Team Udayavani |

ಧಾರವಾಡ: ಬೆಂಗಳೂರು ನನಗೆ ಲಕ್ಷ್ಮೀ ಪುರವಾದರೆ ಧಾರವಾಡ ಶಾರದೆಪುರ ಇದ್ದಂತೆ ಎಂದು ಹಿರಿಯ ಸಂಶೋಧಕ ನಾಡೋಜ ಡಾ| ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.  ಕರ್ನಾಟಕ ಕಲಾ ಮಹಾವಿದ್ಯಾಲಯದ ಫ್ಯಾರೇನ್‌ ಸಭಾಂಗಣದಲ್ಲಿ ಕರ್ನಾಟಕ ಕಲಾ ಮಹಾವಿದ್ಯಾಲಯದ ಕರ್ನಾಟಕ ಸಂಘ ಹಮ್ಮಿಕೊಂಡಿದ್ದ “ಶತಮಾನೋತ್ಸವದ ಶುಭ ಹಾರೈಕೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

Advertisement

ಉತ್ತರ ಕರ್ನಾಟಕದ ಜನರ ಶಿಕ್ಷಣ ಪೂರೈಸಲು ಕರ್ನಾಟಕ ಕಲಾ ಮಹಾವಿದ್ಯಾಲಯ ಸ್ಥಾಪನೆಯಾಗಿದ್ದು, ಇದೊಂದು ದೇಶದಲ್ಲಿ ಐತಿಹಾಸಿಕ ಶಿಕ್ಷಣ ಕೇಂದ್ರವಾಗಿದೆ. ದಕ್ಷಿಣ ಕರ್ನಾಟಕ ಮೈಸೂರು ವಿದ್ಯಾಕೇಂದ್ರವಾದರೆ ಉತ್ತರ ಕರ್ನಾಟಕಕ್ಕೆ ಧಾರವಾಡ ಶಿಕ್ಷಣ ಕಾಶಿ ಆಗಿದೆ ಎಂದರು. 12 ಶತಮಾನದಲ್ಲಿ ಬಸವಣ್ಣನ ಕಾಲದಲ್ಲಿ ಕೆಳ ಹಂತದ ಜನಸಮುದಾಯಕ್ಕೆ ಸಮಾನತೆ ನೀಡಲು ಕ್ರಾಂತಿಯಾಯಿತು.

ಅಲ್ಲಿ ಎಲ್ಲ ಜಾತಿಯ ಪುರುಷ ಮತ್ತು ಸ್ತ್ರೀಯರನ್ನು ಒಳಗೊಂಡಂತೆ ದೇವದಾಸಿಯರಿಗೂ ಸಮಾನತೆ ಕಲ್ಪಿಸಲಾಗಿತ್ತು ಎಂದರು. ಇತಿಹಾಸ ನಮಗೆ ಬಹಳಷ್ಟು ಕಲಿಸುತ್ತದೆ. ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಇತಿಹಾಸ ಅರಿಯಬೇಕಾದರೆ ಹಂಪಿಗೆ ಭೇಟಿ ನೀಡಬೇಕು. ಹಂಪಿಯು ಎಲ್ಲ ರೀತಿಯಿಂದಲೂ ಸಾಕಷ್ಟು ಐತಿಹಾಸಿಕ ಮಾಹಿತಿ ಒದಗಿಸುತ್ತದೆ.

ಆದ್ದರಿಂದ ದೇಶದಲ್ಲಿ ಸಿಗದ ಅಪರೂಪದ ಕಲಾ ವೈಶಿಷ್ಟತೆಯನ್ನು ಹಂಪಿ ಹೊಂದಿದೆ ಎಂದರು. ಕೆಸಿಡಿ ಕಾಲೇಜಿನಲ್ಲಿ ಪ್ರವೇಶ ಪಡೆದ ನೀವು ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕು. ಕಾಲೇಜಿಗೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು. ಪ್ರಾಚಾರ್ಯರಾದ ಡಾ| ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಡಿ.ಬಿ.ಕರಡೋಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಡಾ| ಶರಣು ಮುಷ್ಠಿಗೇರಿ ನಿರೂಪಿಸಿ, ವಂದಿಸಿದರು. ಕರ್ನಾಟಕ ಸಂಘದ ಸಂಯೋಜಕರಾದ ಡಾ| ವಾಮದೇವ ತಳವಾರ, ಪ್ರಾಧ್ಯಾಪಕರಾದ ಡಾ| ಎಂ.ಆರ್‌.ಹಿರೇಮಠ, ಡಾ| ಬಿ.ಎಸ್‌. ಭಜಂತ್ರಿ, ಡಾ|ಸುರೇಶ ಹುಲ್ಲನ್ನವರ, ಡಾ|ಮಹೇಶ ಪಾಟೀಲ, ಡಾ|ಮಂಜುನಾಥ ಅಸುಂಡಿ, ಡಾ| ವಿ.ಪಿ ಸುಣಗಾರ, ಸೋಮು ದೊಡಮನಿ, ಡಾ| ಬಸವರಾಜ ನಾಗಮ್ಮನವರ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next