Advertisement
ಪ್ರಸ್ತುತ ವಾರದ ದಿನಗಳಲ್ಲಿ ಸ್ಲೀಪರ್ ದರ್ಜೆ ಬೋಗಿಗಳಲ್ಲಿ ಬೆಂಗಳೂರಿನಿಂದ ಪ್ರತೀದಿನ 80ರಿಂದ 85 ಮಂದಿ ವೈಟಿಂಗ್ ಲಿಸ್ಟ್‌ನಲ್ಲಿರುತ್ತಾರೆ. ವಾರಾಂತ್ಯ ದಿನಗಳಲ್ಲಿ 150 ಮೀರುತ್ತಿದೆ. ಅದೇ ರೀತಿ 3 ಟೈರ್ ಎಸಿ ದರ್ಜೆಯಲ್ಲಿ ವಾರದ ದಿನಗಳಲ್ಲಿ 20ಕ್ಕೂ ಅಧಿಕ ಹಾಗೂ ವಾರಾಂತ್ಯ ದಿನಗಳಲ್ಲಿ 50 ಮೀರುತ್ತಿದೆ. ಮಾ. 18ರಂದು ಬೆಂಗಳೂರಿನಿಂದ 143 ಮಂದಿ ವೈಟಿಂಗ್ ಲಿಸ್ಟ್‌ನಲ್ಲಿದ್ದರು. ಮಾ. 20ಕ್ಕೆ ಈಗಾಗಲೇ 75 ಮಂದಿ ವೈಟಿಂಗ್ಲಿಸ್ಟ್ನಲ್ಲಿದ್ದು 150 ಮೀರುವ ಸಾಧ್ಯತೆಗಳಿವೆ. ಮಂಗಳೂರಿನಿಂದ ಶನಿವಾರ 44 ಮಂದಿ ವೈಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಸೋಮವಾರ ಈಗಾಗಲೇ 49 ಮಂದಿ ವೈಟಿಂಗ್ ಲಿಸ್ಟ್‌ನಲ್ಲಿದ್ದು ಇದು ಇನ್ನೂ ಹೆಚ್ಚಾಗಲಿದೆ.
ಕಣ್ಣೂರು-ಮಂಗಳೂರು- ಬೆಂಗಳೂರು ರೈಲು ರಾತ್ರಿ ಸಂಚರಿಸುತ್ತದೆ. ಮಂಗಳೂರು ಸೆಂಟ್ರಲ್ ಮೂಲಕ ಸಂಚರಿಸುತ್ತಿರುವುದು ಹಾಗೂ ಇದರ ವೇಳಾಪಟ್ಟಿ ಸೂಕ್ತವಾಗಿರುವುದು ಹೆಚ್ಚಿನ ಬೇಡಿಕೆಗೆ ಕಾರಣ. ಬೆಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ಬೆಳಗ್ಗೆ 7.30ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬರುತ್ತದೆ. 10.10ಕ್ಕೆ ಕಣ್ಣೂರು ತಲುತ್ತದೆ. ಇದೇ ರೀತಿ ಸಂಜೆ 5.05ಕ್ಕೆ ಕಣ್ಣೂರಿನಿಂದ ಹೊರಟು ರಾತ್ರಿ 7.50ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬಂದು 8.10ಕ್ಕೆ ಹೊರಟು ಬೆಳಗ್ಗೆ 6.50ಕ್ಕೆ ಬೆಂಗಳೂರು ತಲುಪುತ್ತದೆ.
Related Articles
– ಅನೀಶ್ ಹೆಗಡೆ, ಮುಖ್ಯ
ಪಿಆರ್‌ಒ, ನೈಋತ್ಯ ರೈಲ್ವೇ
Advertisement