Advertisement

ಬೆಂಗಳೂರು ತಂಡಕ್ಕೆ ಪ್ರಥಮ ಸ್ಥಾನ

02:14 PM Oct 16, 2017 | Team Udayavani |

ಧಾರವಾಡ: ಕವಿವಿಯ ಸರ್‌ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜು ಹಮ್ಮಿಕೊಂಡಿದ್ದ ಎರಡು ದಿನಗಳ ಸಿ.ಎಸ್‌. ಜವಳಿ ಸ್ಮಾರಕ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಗೆ  ತೆರೆ ಬಿದ್ದಿದ್ದು, ಆತಿಥೇಯ ಕರ್ನಾಟಕ ತಂಡ ಪ್ರಥಮ ಸ್ಥಾನ ಉಳಿಸಿಕೊಂಡಿದೆ. 

Advertisement

ರಾಜ್ಯ ಪ್ರತಿನಿಧಿಸಿದ್ದ ಬೆಂಗಳೂರಿನ ಕಾನೂನು ವಿವಿ ಕಾಲೇಜು ತಂಡ ಪ್ರಥಮ ಸ್ಥಾನ  ಗಳಿಸಿದರೆ, ಕೇರಳದ ಎರ್ನಾಕುಲಂ ಕಾನೂನು ಕಾಲೇಜು ತಂಡ ದ್ವಿತೀಯ ಹಾಗೂ ನೋಯ್ಡಾ ಶಾರದಾ ವಿವಿ ತಂಡ ತೃತೀಯ ಸ್ಥಾನ ಪಡೆಯಿತು. ಕೇರಳದ ಎರ್ನಾಕುಲಂನ  ಸರಕಾರಿ ಕಾನೂನು ಮಹಾವಿದ್ಯಾಲಯದ ಜಿಯೋ ಎಸ್‌. ಆಧೀಕರನ್‌ ಅತ್ಯುತ್ತಮ ಪುರುಷ ನ್ಯಾಯವಾದಿ ಹಾಗೂ ಬೆಂಗಳೂರು ಕಾನೂನು ವಿವಿಯ ಪ್ರತೀಕಾ ಅವರು ಅತ್ಯುತ್ತಮ ಮಹಿಳಾ ನ್ಯಾಯವಾದಿಯಾಗಿ ಹೊರ ಹೊಮ್ಮಿದರು. 

ಸಮಾರೋಪ ಭಾಷಣ ಮಾಡಿದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ,  ಯುವ ವಕೀಲರು ನಿರಂತರ ಅಧ್ಯಯನ ಹಾಗೂ ಅನುಭವದಿಂದ ವೃತ್ತಿಯಲ್ಲಿ ಯಶಸ್ಸು ಸಾ  ಧಿಸಬಹುದು. ಕಾನೂನು ಜ್ಞಾನ ಹೆಚ್ಚಿದಂತೆ ವೃತ್ತಿಯಲ್ಲಿ ಗೌರವ ಹೆಚ್ಚುತ್ತದೆ.  

ನ್ಯಾಯಾಂಗದಲ್ಲಿ ಕೆಲಸ ಮಾಡುವ ಹಿರಿಯ ವಕೀಲರು, ಯುವ ವಕೀಲರು ಯಾವುದೇ ಅವ್ಯವಹಾರ ಮಾಡದೆ ನ್ಯಾಯಾಂಗದ ಸ್ವಾಯತ್ತತೆ ಕಾಪಾಡಿಕೊಂಡು ಹೋಗಬೇಕು  ಎಂದರು. ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಅಧ್ಯಕ್ಷತೆ ವಹಿಸಿದ್ದರು. ನ್ಯಾ| ಸುಭಾಸ ಅಡಿಗ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ| ರಾಮಚಂದ್ರ ಹುದ್ದಾರ, ಆರ್‌.ಎಲ್‌. ಹೈದರಾಬಾದ್‌, ಕೆ.ಬಿ. ನಾವಲಗಿಮಠ, ಡಾ| ವಿ.ಎ. ಅಮಿನಭಾವಿ, ಡಾ| ಎಂ. ವಿಶ್ವನಾಥ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next