Advertisement

ಬೆಂಗಳೂರು ದೇಶದ ಸ್ಟಾರ್ಟ್‌ಅಪ್‌ ತವರು

01:32 AM Jun 27, 2020 | Sriram |

ಹೊಸದಿಲ್ಲಿ: ಬೆಂಗಳೂರು ಈಗ ಏಷ್ಯಾದ “ಸಿಲಿಕಾನ್‌ ಸಿಟಿ’ ಮಾತ್ರವಲ್ಲ, ಸ್ಟಾರ್ಟ್‌ಅಪ್‌ ಗಳ ತವರೂ ಹೌದು. ಯಶಸ್ವೀ ಸ್ಟಾರ್ಟ್‌ಅಪ್‌ ಗಳಿಗೆ ಪೂರಕ ಸೌಲಭ್ಯ ಕಲ್ಪಿಸುವ ವಿಶ್ವದ ಅಗ್ರ 30 ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 26ನೇ ಸ್ಥಾನ ಲಭಿಸಿದೆ. ಕ್ಯಾಲಿಫೋರ್ನಿಯಾ ಸ್ಟಾರ್ಟ್‌ಅಪ್‌ ಜಿನೊಮ್‌ ಎಂಬ ಕಂಪೆನಿ ಸಿದ್ಧಪಡಿಸಿರುವ
“ಜಾಗತಿಕ ಸ್ಟಾರ್ಟ್‌ಅಪ್‌ ಸೌಲಭ್ಯ ವರದಿ 2020’ರಲ್ಲಿ ಈ ವಿಚಾರ ಉಲ್ಲೇಖವಾಗಿದೆ.

Advertisement

ಬೆಂಗಳೂರಿನ ಪ್ಲಸ್‌
-ಸ್ಟಾರ್ಟ್‌ಅಪ್‌ನ್ನು ಜಾಗತಿಕ ಮಟ್ಟ ದಲ್ಲಿ ಬೆಳೆಸಲು ಅಗತ್ಯ ಸೌಲಭ್ಯ ಮತ್ತು ಅವಕಾಶ ಲಭ್ಯ.
-ಸ್ಟಾರ್ಟ್‌ಅಪ್‌ ಗಳಿಗೆ ಬೇಕಾದ ಹಣಕಾಸು ನೆರವಿನ ಲಭ್ಯತೆಗೆ ಪೂರಕ ವಾತಾವರಣವಿದೆ.
-ಉದ್ಯಮಕ್ಕೆ ಪೂರಕವಾದ ತಂತ್ರಜ್ಞಾನ ಮತ್ತು ಪ್ರತಿಭೆಗಳ ಲಭ್ಯತೆ ಹೆಚ್ಚು.
-ಸ್ಟಾರ್ಟ್‌ಅಪ್‌ ಪ್ರವೇಶಕ್ಕೆ ಉತ್ತಮ ಆರಂಭ ಒದಗಿಸಲು ಮತ್ತು ಉದ್ಯಮದ ಗುಣಮಟ್ಟ ಕಾಯ್ದು ಕೊಳ್ಳಲು ಪೂರಕ ವಾತಾ ವರಣ ಇಲ್ಲಿದೆ.

ಭಾರತದ ಯಾವ ನಗರಗಳಿಗೆ ಸ್ಥಾನ?
-ಸ್ಟಾರ್ಟ್‌ಅಪ್‌ ಗಳಿಗೆ ಪೂರಕ ಸೌಲಭ್ಯ ಕಲ್ಪಿಸುವ ವಿಶ್ವದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 26ನೇ ಸ್ಥಾನ. ದಿಲ್ಲಿಗೆ 36ನೇ ಸ್ಥಾನ.
-ಸ್ಟಾರ್ಟ್‌ಅಪ್‌ ಗಳಿಗೆ ಪೂರಕ ಸೌಲಭ್ಯ ಕಲ್ಪಿಸುತ್ತಿರುವ ಟಾಪ್‌ 100 ನಗರಗಳ ಪೈಕಿ ಮುಂಬಯಿ ಪ್ರಥಮ. ಚೆನ್ನೈ ಹೈದರಾಬಾದ್‌, ಪುಣೆಗಳೂ ಸ್ಥಾನ ಪಡೆದಿವೆ.
-ಹೊಸ ಪೇಟೆಂಟ್‌ ಸೃಷ್ಟಿಸು ವಲ್ಲಿ ದಿಲ್ಲಿಗೆ ಮೊದಲ ಸ್ಥಾನ.

ಇತರ ನಗರಗಳ ಸ್ಥಾನ
-ಯಶಸ್ವೀ ಸ್ಟಾರ್ಟ್‌ಅಪ್‌ ಗಳ ವಿಶ್ವದ ಅಗ್ರ ನಗರಗಳ ಪಟ್ಟಿಯಲ್ಲಿ ಕ್ಯಾಲಿಫೋರ್ನಿಯಾದ ಸಿಲಿಕಾನ್‌ ವ್ಯಾಲಿಗೆ ಮೊದಲ ಸ್ಥಾನ.
-ಬಂಡವಾಳ, ಹೂಡಿಕೆ ಮತ್ತು ಜಾಗತಿಕ ಪ್ರತಿಭೆಗಳಿಗೆ ಪ್ರವೇಶದಲ್ಲಿ ಲಂಡನ್‌ಗೆ 2ನೇ ಸ್ಥಾನ.
-ಸ್ಟಾರ್ಟ್‌ಅಪ್‌ ಗಳಿಗೆ ಬೇಕಾದ ಹಣ ಕಾಸು ನೆರವು ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ಜತೆ ಪ್ಯಾರಿಸ್‌ ಮತ್ತು ಸಿಂಗಾಪುರ ಸ್ಪರ್ಧೆಯಲ್ಲಿವೆ.
-ಹೊಸ ಪೇಟೆಂಟ್‌ ಸೃಷ್ಟಿಸುವಲ್ಲಿ ದಿಲ್ಲಿಯ ಬಳಿಕದ ಸ್ಥಾನದಲ್ಲಿ ಲಂಡನ್‌, ನ್ಯೂಯಾರ್ಕ್‌ಗಳಿವೆ.

ಕೋವಿಡ್ 19 ಬಿಕ್ಕಟ್ಟು ಡಿಜಿಟಲ್‌ ಆರ್ಥಿಕತೆಗೆ ಪರಿವರ್ತನೆ ಹೊಂದುವ, ಉದ್ಯಮಿ ಗಳು ಹೊಸತನ ಅಳ ವಡಿಸಿ ಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದೆ.
– ಜೆ.ಎಫ್. ಗೌತಿಯರ್‌,
ಸ್ಟಾರ್ಟ್‌ಅಪ್‌ ಜಿನೋಮ್‌ ಸ್ಥಾಪಕ

Advertisement
Advertisement

Udayavani is now on Telegram. Click here to join our channel and stay updated with the latest news.

Next