Advertisement

ಬೆಂಗಳೂರು ಅತ್ಯಂತ ಸುರಕ್ಷಿತ ನಗರ: ಛೆಟ್ರಿ

12:13 PM Jan 06, 2017 | Team Udayavani |

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಅತ್ಯಂತ ಸುರಕ್ಷಿತ ಪ್ರದೇಶ. ಅಷ್ಟೇ ಅಲ್ಲ, ನಾನು ಅತ್ಯಂತ ಪ್ರೀತಿಸುವ ನಗರ. ಹೀಗಾಗಿ ಇಲ್ಲೇ ಮನೆ ಮಾಡಿ ನನ್ನ ಕುಟುಂಬದವರನ್ನು ಕರೆಸಿಕೊಳ್ಳಬೇಕೆಂದಿದ್ದೇನೆ..!

Advertisement

ನಗರದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದ್ದು, ಹೆಣ್ಣು ಮಕ್ಕಳಿಗೆ ಬೆಂಗಳೂರು ಸುರಕ್ಷಿತವಲ್ಲ ಎಂಬ ಆರೋಪ ಕೇಳಿಬರುತ್ತಿರುವ ಮಧ್ಯೆ ಭಾರತೀಯ ಫ‌ುಟ್‌ಬಾಲ್‌ ತಂಡದ ನಾಯಕರೂ ಆಗಿರುವ “ಬೆಂಗಳೂರು ಎಫ್ಸಿ’ ತಂಡದ ನಾಯಕ ಸುನೀಲ್‌ ಛೆಟ್ರಿ ಆಡಿದ ಮಾತುಗಳಿವು.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತಂತೆ ಸುದ್ದಿಗಾರರು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಪ್ರಶ್ನಿಸಿದಾಗ ಅಲ್ಲೇ ಉಪಸ್ಥಿತರಿದ್ದ ಸುನೀಲ್‌ ಛೆಟ್ರಿ, ಮಧ್ಯಪ್ರವೇಶಕ್ಕೆ ಕ್ಷಮೆ ಇರಲಿ ಎಂದು ಹೇಳುತ್ತಾ ಬೆಂಗಳೂರನ್ನು ಹಾಡಿ ಹೊಗಳಿದರು.

ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ ಎಂದು ಕನ್ನಡದಲ್ಲಿ ಹೇಳಿ ನಂತರ “ಐ ಲವ್‌ ಬೆಂಗಳೂರು. ಅದಕ್ಕಾಗಿ ಬೆಂಗಳೂರಿನಲ್ಲಿ ಮನೆ ಮಾಡಿ ಕುಟುಂಬದವರನ್ನು ಕರೆಸಿಕೊಳ್ಳಬೇಕಿದ್ದೇನೆ’ ಎಂದು ಆಂಗ್ಲ ಭಾಷೆಯಲ್ಲಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next