ಹೊಸದಿಲ್ಲಿ: ಬಾಂಗ್ಲಾದೇಶದಿಂದ ಕರ್ನಾಟಕದ ಮೂಲಕ ಭಾರತಕ್ಕೆ ಭಾರೀ ಪ್ರಮಾಣದ ಉತ್ತಮ ಗುಣಮಟ್ಟದ ನಕಲಿ ನೋಟುಗಳನ್ನು (ಎಫ್‌ಐಸಿಎನ್) ಕಳ್ಳಸಾಗಣೆ ಮಾಡಿದ ಬೆಂಗಳೂರು ನಕಲಿ ನೋಟು ಪ್ರಕರಣದಲ್ಲಿ ಆರನೇ ಆರೋಪಿ ಮಹಿಳೆಯೊಬ್ಬರನ್ನು ಶುಕ್ರವಾರ ಎನ್‌ಐಎ ವಿಶೇಷ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.
ಆರೋಪಿ ವನಿತಾ ಅವರಿಗೆ ಐಪಿಸಿಯ ಸೆಕ್ಷನ್ 489 ಬಿ ಅಡಿಯಲ್ಲಿ ಆರು ವರ್ಷಗಳ ಜೈಲು ಶಿಕ್ಷೆ, ಐಪಿಸಿಯ ಸೆಕ್ಷನ್ 489 ಸಿ ಅಡಿಯಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಐಪಿಸಿಯ ಸೆಕ್ಷನ್ 120 ಬಿ ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಜೊತೆಗೆ ಒಟ್ಟು ರೂ. 20,000 ದಂಡ ವಿಧಿಸಲಾಗಿದೆ.
2,50,000 ಮೌಲ್ಯದ ಉತ್ತಮ ಗುಣಮಟ್ಟದ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು (ಎಫ್‌ಐಸಿಎನ್) ಕರ್ನಾಟಕ ಪೊಲೀಸರು ವಶಪಡಿಸಿಕೊಂಡಿದ್ದರು. ರಾಜ್ಯ ಪೊಲೀಸರು ಮತ್ತು ಎನ್ಐಎ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳಿಂದ 4,34,000 ರೂ. ಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ:Jaipur: ಚಲಿಸುತ್ತಿರುವ ಬೈಕ್ ನಲ್ಲಿ ಲಿಪ್ ಲಾಕ್ ಮಾಡಿದ ಜೋಡಿ; ವಿಡಿಯೋ ವೈರಲ್
2016 ಮತ್ತು 2022 ರ ನಡುವೆ, ಎನ್‌ಐಎ ಒಟ್ಟು ಎಂಟು ಜನರ ವಿರುದ್ಧ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ, ಅವರಲ್ಲಿ ಮೂವರು ಆರೋಪಿಗಳನ್ನು ಮೊಹಮ್ಮದ್ ಸಜ್ಜದ್ ಅಲಿ ಅಲಿಯಾಸ್ ಚಾಚು, ಎಂ ಜಿ ರಾಜು ಅಲಿಯಾಸ್ ಮಾಸ್ಟರ್ ಮತ್ತು ಅಬ್ದುಲ್ ಕದಿರ್ ಎಂದು ಗುರುತಿಸಲಾಗಿದ್ದು, ವಿಶೇಷ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ. ಮೂವರಿಗೆ ಐಪಿಸಿಯ ಆರು ವರ್ಷಗಳ ಜೈಲು ಶಿಕ್ಷೆ, ಐಪಿಸಿಯ 489 ಬಿ ಐಪಿಸಿ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ಯೂ/ಸೆ 120 ಬಿ ಐಪಿಸಿ, ಜೊತೆಗೆ ರೂ. 20,000 ದಂಡ ವಿಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ಗಂಗಾಧರ್ ಖೋಲ್ಕರ್ ಮತ್ತು ಸಬಿರುದ್ದೀನ್ ಅವರಿಗೂ ಸಹ ಎನ್‌ಐಎ ವಿಶೇಷ ನ್ಯಾಯಾಲಯವು ಆರು ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 15,000 ದಂಡ ವಿಧಿಸಿದೆ.