Advertisement

ಬೆಂಗಳೂರು: ತಾನು ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ಅಕ್ರಮವಾಗಿ ತಲೆಯೆತ್ತಿರುವ ಕಟ್ಟಡಗಳನ್ನು ಸಕ್ರಮಗೊಳಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಕ್ರಮಕ್ಕೆ ಇರುವ ಶುಲ್ಕವನ್ನು ಹಲವು ಕಂತುಗಳಲ್ಲಿ ಪಾವತಿಸಲು ಪೂರಕವಾಗುವಂತೆ ಕಾಯ್ದೆ ತಿದ್ದುಪಡಿ ತರಲು ಚಿಂತನೆ ನಡೆಸಿದೆ.

Advertisement

ಹಲವು ದಶಕಗಳ ಹಿಂದಿನಿಂದ ಸಾವಿರಾರು ಜನ ಹೀಗೆ ಬಿಡಿಎ ಜಾಗದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ.ಅವುಗಳನ್ನು ಸಕ್ರಮಗೊಳಿಸಲು ಒತ್ತುವರಿ ಮಾಡಿಕೊಂಡ ನಿವೇಶನದ ಪ್ರಸ್ತುತ ಮಾರ್ಗಸೂಚಿದರದಆಧಾರದಮೇಲೆ ಶೇ.10ರಿಂದಶೇ. 40ರವರೆಗೆ ದಂಡದ ರೂಪದಲ್ಲಿ ಶುಲ್ಕವಿಧಿಸಲಾಗುತ್ತಿದೆ. ಆದರೆ, ಆ ಶುಲ್ಕವನ್ನು ಇಡಿಯಾಗಿ ಪಾವತಿಸಲು ಹೊರೆಯಾಗುತ್ತಿದೆ ಎಂದು ಫ‌ಲಾನುಭವಿಗಳು ಅಲವತ್ತು ಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂತುಗಳಲ್ಲಿ ಕಟ್ಟಲು ಅವಕಾಶ ಮಾಡಿಕೊಡಲು ಯೋಚಿಸಲಾಗುತ್ತಿದೆ. ಇದಕ್ಕಾಗಿಪ್ರಾಧಿಕಾರದ ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆದಿದೆ.

ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ 2008ರಿಂದ ಆಚೆಗೆ ಅಕ್ರಮವಾಗಿ 60 ಸಾವಿರ ವಿವಿಧ ಪ್ರಕಾರದ ಕಟ್ಟಡಗಳು ತಲೆಯೆತ್ತಿವೆ ಎಂದುಅಂದಾಜಿಸಲಾಗಿದ್ದು, ಇದರಿಂದ ಸುಮಾರು ಐದು ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.ಅಕ್ರಮ-ಸಕ್ರಮ ಸಮೀಕ್ಷೆ ವೇಳೆ ಶುಲ್ಕ ಪಾವತಿ ಹೊರೆಆಗಲಿದೆ ಎಂಬ ಕೂಗು ಕೇಳಿಬಂದಿತ್ತು. ಅಲ್ಲದೆ, ಈಗಲೂ ಜನ ಬಿಡಿಎಗೆ ಈ ಸಂಬಂಧ ಅಲವತ್ತುಕೊಳ್ಳುತ್ತಿದ್ದಾರೆ. ಹಾಗಾಗಿ, ಕಂತುಗಳ ವ್ಯವಸ್ಥೆಪರಿಚಯಿಸಲು ಇರುವ ಸಾಧಕ-ಬಾಧಕಗಳನ್ನುಪರಿಶೀಲಿಸಲಾಗುತ್ತಿದೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಇದನ್ನೂ ಓದಿ : ಕೃಷಿ ಕಾಯ್ದೆ ವಿವಾದ: ಕೇಂದ್ರದ ಜತೆ ಮುಂದುವರಿದ ರೈತರ ಮಾತುಕತೆ,4 ಪ್ರಮುಖ ರಸ್ತೆ ಬಂದ್

ಅಕ್ರಮ-ಸಕ್ರಮಕ್ಕಾಗಿಯೇ 38 (ಡಿ) ತರಲಾಯಿತು. ನಿಯಮದ ಪ್ರಕಾರ ಹೀಗೆ ಕಂತುಗಳಲ್ಲಿ ಶುಲ್ಕ ಪಾವತಿಗೆ ಅವಕಾಶ ಇಲ್ಲ. ಇದಕ್ಕಾಗಿ ಮತ್ತೆಪ್ರಾಧಿಕಾರದ ಕಾಯ್ದೆಯಲ್ಲಿ ತಿದ್ದುಪಡಿ ತಂದು,ಸರ್ಕಾರದ ಅನುಮೋದನೆ ಪಡೆದು ಜಾರಿಗೊಳಿಸಬೇಕಾಗುತ್ತದೆ. ಈ ಸಂಬಂಧ ಚರ್ಚೆನಡೆದಿದೆ. ಎಷ್ಟು ಕಂತುಗಳು ಮತ್ತು ಎಷ್ಟು ಅವಧಿಯಲ್ಲಿ ಎನ್ನುವುದು ಕೂಡ ಚರ್ಚೆ ಆಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಈಗಾಗಲೇ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಅಪಸ್ವರ ಕೇಳಿಬಂದಿತ್ತು. ಈ ಮಧ್ಯೆ ಮತ್ತಷ್ಟು ಅನುಕೂಲ ಮಾಡಿಕೊಡಲು ಕಂತುಗಳರೂಪದಲ್ಲಿ ಪಾವತಿಸುವುದು ಎಷ್ಟು ಸರಿ ಎಂಬ ಅಪಸ್ವರಕೇಳಿಬರುತ್ತಿದೆ.ಬಿಡಿಎಸ್ವಾಧೀನಪಡಿಸಿಕೊಂಡಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ನಂತರ ಮಾರಾಟ ಮಾಡಿದ್ದಾರೆ. ಈಗ ಶಾಶ್ವತವಾಗಿ ಅದನ್ನು ಅನ್ಯರ ಪಾಲಿಗೆ ಮಾರಾಟ ಮಾಡಲು ಮುಂದಾಗಿರುವುದು ಖಂಡನೀಯಎಂದು ಈ ಹಿಂದೆ ಬಿಡಿಎ ಬಡಾವಣೆಗಳಿಗಾಗಿ ಜಾಗ ಕಳೆದುಕೊಂಡವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಶುಲ್ಕದ ಪ್ರಮಾಣಕಡಿತ ಉದ್ದೇಶ :  ಬಿಡಿಎ ಅಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ಪ್ರಸ್ತುತ ಮಾರ್ಗಸೂಚಿ ದರದ ಜತೆಗೆ ಕನಿಷ್ಠ ಶೇ. 10ರಿಂದ  ಗರಿಷ್ಠ ಶೇ. 40ರಷ್ಟು ದಂಡದ ರೂಪದಲ್ಲಿ ಶುಲ್ಕ ವಿಧಿಸಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ

ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ದಶಕಗಳ ಹಿಂದೆ ಒತ್ತುವರಿ ಆಗಿರುವುದು ಗೊತ್ತಿಲ್ಲದೆ ಖರೀದಿಸಿದವರಿಗೆ ಈಗ ಮಾರ್ಗಸೂಚಿ ದರದ ಜತೆ ದಂಡ ವಿಧಿಸಿದರೆ ಕಷ್ಟ ಆಗುತ್ತದೆ ಎಂಬ ಕಾರಣಕ್ಕೆ ದಂಡ ಮಾತ್ರ ಕಟ್ಟಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಈಗ ಬಿಡಿಎ ಅಧ್ಯಕ್ಷರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಶುಲ್ಕದಪ್ರಮಾಣವನ್ನುಕಡಿಮೆಗೊಳಿಸಲುಉದ್ದೇಶಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಇದರಿಂದ ಪ್ರಾಧಿಕಾರಕ್ಕೆ ಹೆಚ್ಚು ಆದಾಯ ಹರಿದುಬರಲಿದೆ ಎಂಬ ಲೆಕ್ಕಾಚಾರ ಅಧ್ಯಕ್ಷರದ್ದಾಗಿದೆ.

ನಿಯಮಗಳು ಅನ್ವಯ :  ನಿಯಮದ ಪ್ರಕಾರ ಬಿಡಿಎಯಿಂದ ಜಾಗ ಸ್ವಾಧೀನಪಡಿಸಿಕೊಂಡು,ಪರಿಹಾರನೀಡಿರಬೇಕು. ಆ ಜಾಗದಲ್ಲಿ ಬಡಾವಣೆಗಳನ್ನು ನಿರ್ಮಿಸಿ, ನಿವೇಶನ ಹಂಚಿಕೆ ಮಾಡಲು ಆಗದಿದ್ದು, ಆ ಜಾಗಗಳಲ್ಲಿ 2008ರ ಮುಂಚೆಕಟ್ಟಡ ನಿರ್ಮಿಸಿ ಕೊಂಡಿದ್ದರೆ, ಅಂತಹವರಿಗೆ ಯೋಜನೆ ಅನ್ವಯ ಆಗುತ್ತದೆ.

ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಶುಲ್ಕ ಕಡಿಮೆ ಮತ್ತುಕಂತುಗಳ ರೂಪದಲ್ಲಿ ಪಾವತಿಗೆ ಅವಕಾಶ ಎರಡೂ ಚಿಂತನೆಗಳುನಡೆದಿವೆ.ಕಂತುಗಳಿಗೆ ನಿಯಮದಲ್ಲಿ ಅವಕಾಶ ಇಲ್ಲ. ಸಾಧಕ-ಬಾಧಕಗಳನ್ನುನೋಡಿಕೊಂಡು, ಈ ನಿಟ್ಟಿನಲ್ಲಿ ಮುಂದುವರಿಯಲಾಗುವುದು. ಡಾ.ಎಚ್‌.ಆರ್‌. ಮಹದೇವ, ಆಯುಕ್ತರು, ಬಿಡಿಎ

 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next