Advertisement

ಬೆಂಗಳೂರಿನಲ್ಲಿ  ಗಾಯಕ ದಯಾಳ್‌, ನಟಿ ಕೃತಿ ಆಕರ್ಷಣೆ

07:51 AM Apr 08, 2017 | Team Udayavani |

ಬೆಂಗಳೂರು: ಐಪಿಎಲ್‌ 10ನೇ ಆವೃತ್ತಿಯ ಬೆಂಗಳೂರಿನ ಉದ್ಘಾಟನಾ ಪಂದ್ಯಕ್ಕೆ ಭರ್ಜರಿ ವೇದಿಕೆ ಸಿದ್ಧವಾಗಿದೆ. ಶನಿವಾರ ಸಂಜೆ 6.30ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವರ್ಣರಂಜಿತ ಚಾಲನೆ ಸಿಗಲಿದೆ. ಈ ವೇಳೆ ಸಿಡಿಮದ್ದು, ಸಂಗೀತ ಕಾರ್ಯಕ್ರಮ, ನಟಿಯರ ನೃತ್ಯಗಳೆಲ್ಲ ಅಭಿಮಾನಿಗಳ ಮನಸ್ಸನ್ನು ರಂಜಿಸಲಿದೆ ಎಂದು ಕಾರ್ಯಕ್ರಮ ನಿರ್ವಹಣೆ ಹೊಣೆ ಹೊತ್ತಿರುವ ಡಿಎನ್‌ಎ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

Advertisement

ಈ ಸಂದರ್ಭದಲ್ಲಿ ಖ್ಯಾತ ಗಾಯಕ ಬೆನ್ನಿ ದಯಾಳ್‌ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕೇರಳ ಮೂಲದವರಾದ ದಯಾಳ್‌ ಎಸ್‌ಎಸ್‌ ಮ್ಯೂಸಿಕ್‌ ಚಾನಲ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡುವ ತಂಡದ ಸದಸ್ಯ. ಜತೆಗೆ ದಿಲ್ಲಿ ಮೂಲದ ನಟಿ, ರೂಪದರ್ಶಿ, ಕೃತಿ ಅವರ ನೃತ್ಯ ಕಾರ್ಯಕ್ರಮವೂ ಇದೆ. ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ನಿರೂಪಕಿ ಶಿಬಾನಿ ದಾಂಡೇಕರ್‌ ನಿರ್ವಹಿಸಲಿದ್ದಾರೆ. ಜತೆಗೆ ರಾಜ್ಯದ ಸಂಸ್ಕೃತಿಯ ಪ್ರತೀಕವಾದ ಡೊಳ್ಳು ಕುಣಿತ, ಯಕ್ಷಗಾನ, ಪೂಜಾ ಕುಣಿತ ಸೇರಿದಂತೆ ಹಲವು ವಿಭಾಗದ ನೃತ್ಯ ರಂಗಿನ ಲೋಕವನ್ನೇ ತೆರೆದಿಡಲಿದೆ.

ಕಾರ್ಯಕ್ರಮದ ಮೊದಲ ಅಂಗವಾಗಿ ಬೆನ್ನಿ ದಯಾಳ್‌ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಬಳಿಕ ಸ್ಪಿರಿಟ್‌ ಆಫ್ ಕ್ರಿಕೆಟ್‌ ಆಡಿಯೋ ವಿಷು ವಲ್‌ ಪ್ರದರ್ಶನ. ಅನಂತರ ಆರ್‌ಸಿಬಿ ನಾಯಕ ನನ್ನು ವೇದಿಕೆಗೆ ಕರೆಯಲಾಗುತ್ತದೆ.  ಕೊಹ್ಲಿ ಅಥವಾ ವಾಟ್ಸನ್‌ ವೇದಿಕೆ ಹತ್ತುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next