Advertisement

ಸಾಲಮನ್ನಾಕ್ಕೆ ಆಗ್ರಹಿಸಿ ರೈತರಿಂದ ಬೆಂಗಳೂರು ಚಲೋ

04:11 PM Mar 22, 2017 | Team Udayavani |

ನವಲಗುಂದ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಬಿಜೆಪಿ ಸರಕಾರ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಲು ಹಾಗೂ ರಾಜ್ಯ ಸರಕಾರ ರೈತರ ಸಾಲಮನ್ನಾ ಮಾಡುತ್ತಿಲ್ಲವೆಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಇಲ್ಲಿನ ಪûಾತೀತ ಹೋರಾಟ ಸಮಿತಿ ರೈತ ಹೋರಾಟಗಾರರು ಬೆಂಗಳೂರು ಚಲೋ ಚಳವಳಿಯನ್ನು ಮಂಗಳವಾರ ಆರಂಭಿಸಿದ್ದಾರೆ.

Advertisement

ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಪಾಲಿನ ಶೇ. 50ರಷ್ಟು ಸಾಲಮನ್ನಾ ಮಾಡುತ್ತೇವೆಂದು ಭರಸವೆ ನೀಡಿದ್ದರು. ಆದರೆ, ಬಜೆಟ ಮಂಡನೆ ಸಂದರ್ಭದಲ್ಲಿ ಈ ಕುರಿತು ಯಾವುದೇ ಪ್ರಸ್ತಾಪ ಇಲ್ಲದ ಕಾರಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ರಾಜ್ಯ ಸರಕಾರವನ್ನು ಎಚ್ಚರಿಸಲು ಪ್ರತಿಭಟನೆ ನಡೆಸಲಾಗುತ್ತಿದೆ.

ಈಗಲೂ ಕಾಲ ಮಿಂಚಿಲ್ಲ. ವಿಧಾನಸೌಧದಲ್ಲಿ ಚರ್ಚಿಸಿ ರೈತರ ಅರ್ಧದಷ್ಟು ಸಾಲಮನ್ನಾ ಮಾಡಿದರೆ ಇನ್ನುಳಿದ ಸಾಲವನ್ನು ಕೇಂದ್ರ ಮನ್ನಾ ಮಾಡುವಂತೆ ಉಗ್ರ ಹೋರಾಟ ಮಾಡಲು ಇಡೀ ಉತ್ತರ ಕರ್ನಾಟಕ ರೈತರು ಸಿದ್ಧತೆ ನಡೆಸಿದ್ದಾರೆ ಎಂದರು. ರೈತ ಮುಖಂಡ ಸುಭಾಸ್‌ಚಂದ್ರಗೌಡ ಪಾಟೀಲ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಮಹದಾಯಿ ವಿಷಯ ಮುಂದಿಟ್ಟುಕೊಂಡು ಮತ್ತೂಮ್ಮೆ ಚುನಾವಣೆಗೆ ಮುಂದಾಗಲು ತಂತ್ರಗಾರಿಕೆ ರೂಪಿಸುತ್ತಿವೆ.

ಮಹದಾಯಿ ನೀರಿನ ವಿಷಯದಲ್ಲಿ ರಾಜಕಾರಣ ಮಾಡದಂತೆ ತಕ್ಕಪಾಠ ಕಲಿಸಲು ರೈತಕುಲ ಮುಂದಾಗುತ್ತಿದೆ ಎಂದು ಎಚ್ಚರಿಸಿದರು. ಶಿವಾನಂದಸ್ವಾಮಿ ಮಠಪತಿ, ಮಲ್ಲಿಕಾರ್ಜುನ ಹೊಳೆಣ್ಣವರ, ಭರಮಗೌಡ ಹೊಸಗೌಡರ, ಭೀಮನಗೌಡ ಮುದಿಗೌಡರ, ಬಸಪ್ಪ ಮಯಾನಾಯ್ಕರ, ಚನ್ನಪ್ಪ ಮೊರಬ, ಚಂದ್ರಶೇಖರ ಕಿಲಾರಿಮಠ,

ರಾಯನಗೌಡ ಮುದಿಗೌಡರ, ಮಹಾಂತೇಶ ಗಾಣಿಗೇರ, ರಮೇಶ ಹಲಗತ್ತಿ, ಆರ್‌. ಎಂ. ನಾಯ್ಕರ, ಫಕ್ಕಿರಪ್ಪ ಬ್ರಿàಷ್ಠನವರ, ಶಿವಾನಂದ ಬರದ್ವಾಡ, ಸಂಜೀವರಡ್ಡಿ ಕುರಹಟ್ಟಿ, ರವಿ ತೋಟದ ಇತರರಿದ್ದರು. ರೈತ ಭವನದಲ್ಲಿ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಮಂಗಳವಾರ 601 ದಿನಕ್ಕೆ ಕಾಲಿಟ್ಟಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next