Advertisement

ವೈಜ್ಞಾನಿಕ ಅಭಿವೃದ್ಧಿ, ವಿಜ್ಞಾನದ ಬಳಕೆಗೆ ಬೆಂಗಳೂರು ಪ್ರಶಸ್ತವಾದ ಸ್ಥಳ: ಸಿಎಂ ಬೊಮ್ಮಾಯಿ

05:05 PM Sep 27, 2022 | Team Udayavani |

ಬೆಂಗಳೂರು: ವೈಜ್ಞಾನಿಕ ಅಭಿವೃದ್ಧಿ ಹಾಗೂ ವಿಜ್ಞಾನದ ಬಳಕೆಗೆ ಬೆಂಗಳೂರು ಪ್ರಶಸ್ತವಾದ ಸ್ಥಳವಾಗಿದೆ. ಐಟಿ ಬಿಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಹೀಗೆ ತಂತ್ರಜ್ಞಾನದ ಎಲ್ಲ ಆಯಾಮಗಳು ಕರ್ನಾಟಕದಲ್ಲಿ ಹೊಸ ರೂಪವನ್ನು ಪಡೆಯುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಅವರು ಇಂದು ಎಕ್ಸೈಡ್ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ ಇವರ ವತಿಯಿಂದ ಆಯೋಜಿಸಿರುವ ‘ಎಕ್ಸೈಡ್’ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ ನೂತನ ಕಟ್ಟಡದ ಅಡಿಗಲ್ಲು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕರ್ನಾಟಕದಲ್ಲಿ ಆಧುನಿಕ ವೈಜ್ಞಾನಿಕ ತಂತ್ರಜ್ಞಾನಗಳನ್ನು ಸಂಘಟಿತವಾಗಿ ಬಳಕೆ ಮಾಡುವ ವ್ಯವಸ್ಥೆ ಹಾಗೂ ವಾತಾವರಣವಿದೆ. ಎಕ್ಸೈಡ್ ಕಂಪನಿಯ ಘಟಕದಲ್ಲಿ ಸ್ಥಳೀಯ ಜನರಿಗೆ ಉದ್ಯೋಗಾವಕಾಶ ನೀಡುವ ಬಗ್ಗೆ ಸಂಸ್ಥೆ ಗಮನ ಹರಿಸಬೇಕಿದೆ. ಸರ್ಕಾರ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಆಧುನಿಕ ತಂತ್ರಜ್ಞಾನದ ಬಗ್ಗೆ ತರಬೇತಿಯನ್ನು ಯುವಕರಿಗೆ ನೀಡುತ್ತಿದೆ. ಸಂಸ್ಥೆಯ ಘಟಕದ ನಿರ್ಮಾಣಕ್ಕೆ ಜಮೀನು ನೀಡಿದ ಸ್ಥಳೀಯರ ಕುಟುಂಬಗಳಿಗೆ ಉದ್ಯೋಗ ನೀಡುವ ಮೂಲಕ ಪರಸ್ಪರ ಸಹಕರಿಸಬೇಕಿದೆ ಎಂದರು.

ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಮೊತ್ತದ ವಿದೇಶಿ ಬಂಡವಾಳ ಹರಿದು ಬರುತ್ತಿದ್ದು, ವಿಶ್ವಮಟ್ಟದ ಅರ್ ಎಂಡ್ ಡಿ ಕೇಂದ್ರಗಳನ್ನು ಹೊಂದಿದೆ. 400 ಫಾರ್ಚೂನ್ ಕಂಪನಿಗಳು ರಾಜ್ಯದಲ್ಲಿದೆ. ನೀತಿಆಯೋಗದಂತೆ ಆವಿಷ್ಕಾರ ಕ್ಷೇತ್ರದಲ್ಲಿ ಕರ್ನಾಟಕ ಒಂದನೇ ಶ್ರೇಯಾಂಕವನ್ನು ತನ್ನದಾಗಿಸಿಕೊಂಡಿದೆ. ರಾಕೆಟ್ ಗಳಲ್ಲಿ ಬಳಸುವ ಕ್ರೈಯೋಜಿನಿಕ್ ಇಂಜಿನ್ಗಳನ್ನು ಉತ್ಪಾದಿಸುವ ಐದನೇ ದೊಡ್ಡ ದೇಶ ಭಾರತ. ಹೆಚ್ ಎ ಎಲ್ ಸಂಸ್ಥೆಯಲ್ಲಿ ಕ್ರೈಯೋಜಿನಿಕ್ ಇಂಜಿನ್ ಗಳ ಉತ್ಪಾದನಾ ಘಟಕವನ್ನು ಇಂದು ಉದ್ಘಾಟಿಸಲಾಗಿದ್ದು, ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಹೊಸ ತಂತ್ರಜ್ಞಾನದ ಕ್ರೈಯೋಜಿನಿಕ್ ಇಂಜಿನ್ ಗಳನ್ನು ಉತ್ಪಾದಿಸಲಾಗುವುದು ಎಂದರು.

ಇದನ್ನೂ ಓದಿ:ನವರಾತ್ರಿ ಹಬ್ಬದ ಅಂಗವಾಗಿ ಬನ್ನಿಮಹಾಕಾಳಿಗೆ ಮಹಿಳೆಯರಿಂದ ವಿಶೇಷ ಮೌನ ವೃತ ಪೂಜೆ, ಆಚರಣೆ

Advertisement

ವಿದ್ಯುತ್ ಪೂರೈಕೆಯಲ್ಲಿ ಸ್ವಯಂಪೂರ್ಣತೆ ಕಾಣುವ ದೇಶಗಳು ಆರ್ಥಿಕತೆಯ ಅಭಿವೃದ್ಧಿ ಕಾಣುತ್ತವೆ. ಮುಂದಿನ ದಿನಗಳಲ್ಲಿ ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಆಗಲಿದೆ. ಭಾರತದಲ್ಲಿ ಒಂದು ದೇಶ ಒಂದು ಗ್ರಿಡ್ ನೀತಿ ಬರಲಿದೆ. ಇಡೀ ಭಾರತದಲ್ಲಿ ಗ್ರಿಡ್ ಸಂಪರ್ಕವನ್ನು ಸಾಧಿಸಲಾಗುತ್ತಿದೆ. ವಿದ್ಯುತ್ ಸಂಗ್ರಹಣೆಯೂ ಅತ್ಯವಶ್ಯವಾಗಿದ್ದು, ಈ ದಿಸೆಯಲ್ಲಿ ಎಕ್ಸೈಡ್ ಕಂಪನಿ ಪ್ರಮುಖ ಪಾತ್ರ ವಹಿಸಲಿದೆ. ಎಕ್ಸೈಡ್ ಸಂಸ್ಥೆಯ ಬ್ಯಾಟರಿ ಉತ್ಪಾದನಾ ಘಟಕದ ಸ್ಥಾಪನೆಗೆ ಸರ್ಕಾರದಿಂದ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next