Advertisement

ಬೆಂಗಳೂರು-ಬೆಳಗಾವಿ ರೈಲು ಆರಂಭ

04:21 AM May 23, 2020 | Suhan S |

ಹುಬ್ಬಳ್ಳಿ: ಲೌಕ್‌ಡೌನ್‌ ನಂತರದಲ್ಲಿ ಮೊದಲ ಬಾರಿಗೆ ಬೆಂಗಳೂರು-ಬೆಳಗಾವಿ ನಡುವೆ ಪ್ರಯಾಣಿಕರ ರೈಲು ಶುಕ್ರವಾರ ಸಂಚರಿಸಿತು. ಬೆಂಗಳೂರು ಹಾಗೂ ಇನ್ನಿತರ ಕಡೆಯ ನೂರಾರು ಪ್ರಯಾಣಿಕರು ವಿವಿಧ ಸ್ಥಳಗಳಿಗೆ ಆಗಮಿಸಿದರು.

Advertisement

ಬೆಂಗಳೂರಿನಿಂದ ಯಶವಂತಪುರ, ತುಮಕೂರ, ಅರಸಿಕೆರೆ, ಬಿರೂರು, ಚಿಕ್ಕಚಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ ಮೂಲಕ ಹುಬ್ಬಳ್ಳಿಗೆ ಆಗಮಿಸಿತು. ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸುಮಾರು 200 ಪ್ರಯಾಣಿಕರು ಇಳಿದರು. ಪ್ರತಿಯೊಬ್ಬರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಯಿತು. ಎರಡನೇ ಪ್ರಯಾಣಿಕರ ರೈಲು ಬೆಂಗಳೂರಿನಿಂದ ಮೈಸೂರಿಗೆ ತೆರಳಿತು. ಕೆಂಗೇರಿ, ರಾಮನಗರ, ಮದ್ದೂರ, ಮಂಡ್ಯ, ಪಾಂಡವಪುರ, ನಾಗನಹಳ್ಳಿ ಮೂಲಕ ಮೈಸೂರಿಗೆ ತೆರಳಿತು. ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಉತ್ತರ ಪ್ರದೇಶದ ಲಕ್ನೋಗೆ ವಿಶೇಷ ಶ್ರಮಿಕ್‌ ರೈಲು ಸಂಚರಿಸಿತು. 1636 ಪ್ರಯಾಣಿಕರು ತೆರಳಿದರು. ಇದೇ ರೀತಿ ವಿವಿಧ ನಿಲ್ದಾಣದಿಂದ 6 ಶ್ರಮಿಕ್‌ ರೈಲುಗಳ ಮೂಲಕ 9,279 ವಲಸಿಗರು ಅವರ ರಾಜ್ಯಕ್ಕೆ ತೆರಳಿದ್ದಾರೆಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಿಕೆಟ್‌ ಕೌಂಟರ್‌ ಕಾರ್ಯಾರಂಭ: ಲಾಕ್‌ ಡೌನ್‌ ನಂತರದಲ್ಲಿ ಪ್ರಯಾಣಿಕರ ರೈಲುಗಳು ಸಂಚಾರ ಆರಂಭ ಮಾಡಿದರ ಹಿನ್ನೆಲೆಯಲ್ಲಿ ಟಿಕೆಟ್‌ ಕೌಂಟರ್‌ಗಳು ಕೂಡ ಕಾರ್ಯಾರಂಭ ಮಾಡಿದ್ದು, ಮೊದಲ ದಿನ ಟಿಕೆಟ್‌ ಕೌಂಟರ್‌ ಗಳು ಖಾಲಿಯಾಗಿದ್ದವು. ಟಿಕೆಟ್‌ ಪಡೆಯಲು ತೆರಳುವ ಪ್ರತಿಯೊಬ್ಬ ಪ್ರಯಾಣಿಕರನ್ನು ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತಿದೆ. ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ.

16454 ವಲಸಿಗರು ತವರು ರಾಜ್ಯಗಳಿಗೆ : ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದ 16,454 ವಲಸಿಗರು ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಜಾರ್ಖಾಂಡ್‌ ರಾಜ್ಯಗಳಿಗೆ ತೆರಳಿದರು. ಧಾರವಾಡ-6628 ಸೇರಿದಂತೆ ಹಾವೇರಿ, ಕೊಪ್ಪಳ, ಗದಗ, ಉತ್ತರ ಕನ್ನರ, ಬೆಳಗಾವಿ, ಬಾಗಲಕೋಟೆ, ಚಿಕ್ಕಮಮಗಳುರು, ರಾಯಚೂರು, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಸಿಲುಕಿದ್ದ ವಲಸಿಗರು ಇಲ್ಲಿನ ರೈಲು ನಿಲ್ದಾಣದ ಮೂಲಕ ಅವರ ರಾಜ್ಯಗಳಿಗೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next