Advertisement

ಬೆಂಗ್ಳೂರು ಏರ್ಪೋರ್ಟ್‌ಗೆ ವೇಗದ ಗರಿ

10:16 AM Sep 21, 2019 | Sriram |

ಮಾಂಟ್ರಿಯಲ್‌: ಈಗಾಗಲೇ ಹಲವಾರು ಹೆಗ್ಗಳಿಕೆಗಳಿಗೆ ಪಾತ್ರವಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್‌)ಕ್ಕೆ ಮತ್ತೂಂದು ಹೆಗ್ಗಳಿಕೆ ಸಿಕ್ಕಿದೆ. 15 ಮಿಲಿಯನ್‌ ಪ್ರಯಾಣಿಕರ ವಿಭಾಗದಲ್ಲಿ ಅದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಏರ್‌ಪೋರ್ಟ್‌ ಎಂಬ ಮನ್ನಣೆಗೆ ಪಾತ್ರವಾಗಿದೆ.

Advertisement

ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಅಗ್ರ ಐದು ವಿಮಾನ ನಿಲ್ದಾಣಗಳ ಪೈಕಿ ಬೆಂಗ ಳೂರಿಗೆ ಈ ಹಿರಿಮೆ ಸಿಕ್ಕಿದೆ. ಏರ್‌ಪೋರ್ಟ್ಸ್ ಕೌನ್ಸಿಲ್‌ ಇಂಟರ್‌ನ್ಯಾಶನಲ್‌ ಎಂಬ ಸಂಸ್ಥೆ ಈ ಬಗ್ಗೆ ಅಧ್ಯಯನ ನಡೆಸಿದೆ. 2017ರಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ನಿರ್ವಹಣೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಶೇ.29.1 ಅಂಕ ಸಿಕ್ಕಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಹೈದರಾಬಾದ್‌ನಲ್ಲಿರುವ ರಾಜೀವ್‌ ಗಾಂಧಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಶೇ.21.9ರಷ್ಟು ಹೆಚ್ಚುವರಿ ಯಾಗಿ ಪ್ರಯಾಣಿಕರನ್ನು ನಿಭಾಯಿಸಿದೆ.

ಜಗತ್ತಿನ ಇತರ ಪ್ರಮುಖ ಏರ್‌ಪೋರ್ಟ್‌ಗಳಾಗಿರುವ ಟರ್ಕಿಯ ಅಂಟ್ಯಲ ದ್ವಿತೀಯ, ರಷ್ಯಾದಲ್ಲಿರುವ ವ್ನುಕುವೂ, ಚೀನದಲ್ಲಿರುವ ಜಿನಾನ್‌ ಕ್ರಮವಾಗಿ ನಾಲ್ಕನೇ, ಐದನೇ ಸ್ಥಾನ ಪಡೆದುಕೊಂಡಿವೆ.

ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಮಾನ ನಿಲ್ದಾಣಗಳು ಅಭಿವೃದ್ಧಿ ಹೊಂದುತ್ತಿರುವ ಏಷ್ಯಾ- ಪೆಸಿಫಿಕ್‌ ವಲಯದಲ್ಲಿ ಅಂದರೆ ದೇಶದಲ್ಲಿಯೇ ಇವೆ. ಅಂದರೆ ಚೀನ ಮತ್ತು ಭಾರತದಲ್ಲೇ ಹೆಚ್ಚಾಗಿವೆ ಎಂದು ಏರ್‌ಪೋರ್ಟ್ಸ್ ಕೌನ್ಸಿಲ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next