Advertisement

ಬಂದ್‌ ಸಂಪೂರ್ಣ ವಿಫಲ; ಎಂದಿನಂತಿತ್ತು ಜನಜೀವನ

11:55 AM Feb 14, 2020 | Suhan S |

ಹುಬ್ಬಳ್ಳಿ/ಧಾರವಾಡ: ಡಾ| ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ ಅವಳಿನಗರ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಸಾರಿಗೆ, ಜನಜೀವನ ಎಂದಿನಂತೇ ಇತ್ತು.

Advertisement

ಕೆಲ ಸಂಘಟನೆಗಳನ್ನು ಹೊರತುಪಡಿಸಿ ಬಹುತೇಕ ಸಂಘಟನೆಗಳು ಬಂದ್‌ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡದ್ದರಿಂದ ಬಂದ್‌ ಮೇಲೆ ಯಾವುದೇ ಪರಿಣಾಮವಾಗಲಿಲ್ಲ. ಎಂದಿನಂತೆ ರಾಜ್ಯ ನಗರ ಸಾರಿಗೆ ಬಸ್‌, ಆಟೋ ರಿಕ್ಷಾಗಳು, ಖಾಸಗಿ ವಾಹನಗಳ ಸಂಚಾರವಿತ್ತು. ಹೋಟೆಲ್‌ ಉದ್ಯಮ ಸೇರಿದಂತೆ ಎಲ್ಲ ವಹಿವಾಟು ಸುಗಮವಾಗಿ ನಡೆದವು. ಶಾಲಾ-ಕಾಲೇಜುಗಳು ತೆರೆದುಕೊಂಡಿದ್ದವು.

ಹುಬ್ಬಳ್ಳಿಯಲ್ಲಿ ಪ್ರತಿಭಟನೆ: ಡಾ|ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ನವನಿರ್ಮಾಣ ವೇದಿಕೆ, ಕರ್ನಾಟಕ ಸಂಗ್ರಾಮ ಸೇನೆ, ಕನ್ನಡ ಕ್ರಾಂತಿ ದೀಪ, ಭಗತಸಿಂಗ್‌ ಯುಥ್‌ ಪವರ್‌ ಸಂಘಟನೆ, ಸಮಗ್ರ ಕರ್ನಾಟಕ ರಕ್ಷಣಾ ಸೇನೆ, ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ, ಎಸ್‌ಎಸ್‌ಕೆ ಸಮಾಜದ ಯುವಕರ ಸಂಘದ ಬೆರಳೆಣಿಕೆಯ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಿನಿ ವಿಧಾನಸೌಧ ವರೆಗೆ ತಳ್ಳುವ ಗಾಡಿ ಹಿಡಿದು ಪ್ರತಿಭಟನೆ ನಡೆಸಿದರು.

ಈರಪ್ಪ ಎಮ್ಮಿ, ಸಂಜೀವ ಧುಮ್ಮಕನಾಳ, ರವಿ ಕದಂ, ಬಸವರಾಜ ಮಣ್ಣೂರಮಠ, ಕುಬೇರ ಪವಾರ, ನಾಗರಾಜ ಬಡಿಗೇರ, ಆನಂದ ದಲಬಂಜನ, ರಾಮಚಂದ್ರ ಕುಲಕರ್ಣಿ, ನೀಲಕಂಠ ತಡಸದಮಠ, ಷಣ್ಮುಖಯ್ಯ ಪಂಚಾಂಗಮಠ, ರಾಹುಲಕುಮಾರ ಜಿ.ಎಸ್‌., ಬಸವರಾಜ ಬೆಲ್ಲದ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next