Advertisement

ಬನಶಂಕರಿ ದೇವಿ ಪೀತಾಂಬರ ಸೀರೆ ಹೊತ್ತ ಪಲ್ಲಕ್ಕಿ ಮಹೋತ್ಸವ

09:20 AM Jan 15, 2019 | |

ಹೊಸಪೇಟೆ: ದೇವಾಂಗ ಸಮಾಜದ ಕುಲದೇವತೆ ಬಾದಮಿಯ ಶ್ರಿ ಬನಶಂಕರಿ ದೇವಿಗೆ ಪೀತಾಂಬರ ಸೀರೆ ಅರ್ಪಿಸಲು ಹಂಪಿಯ ಶ್ರೀಗಾಯತ್ರಿ ಪೀಠದಿಂದ ಬಾದಮಿಯವರಿಗೆ ಪಾದಯಾತ್ರೆ ಸೋಮವಾರ ಹೊರಟಿತು.

Advertisement

ಹಂಪಿಯ ಶ್ರೀಗಾಯತ್ರೀ ಪೀಠದ ಜಗದ್ಗುರು ಶ್ರೀದಯಾನಂದಪುರಿ ಮಹಾಸ್ವಾಮಿಗಳು ನೇತೃತ್ವದಲ್ಲಿ ಅಮ್ಮನವರ ಪೀತಾಂಬರ ಸೀರೆ ಹೊತ್ತ ನೂತನ ಪಲ್ಲಕ್ಕಿ ಮಹೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

ಬುಕ್ಕಸಾರದ ಕಡೆ ಬಾಗಿಲು ಮೂಲಕ ಗಂಗಾವತಿ ಮಾರ್ಗವಾಗಿ ಕನಕಗಿರಿ ಹಾಗು ತಾವರಗೇರಾಕ್ಕೆ ತೆರಳಿ ಮರು ದಿನ ಮುದೇನೂರು, ದೋಟಿಹಾಳ ಗ್ರಾಮಕ್ಕೆ ತೆರಳಿ ಜ.18ರಂದು ಇಳಕಲ್‌ನಲ್ಲಿ ರಾತ್ರಿ ವಾಸ್ತವ್ಯ ಹೂಡಿ, ಹೂಲಗೇರಿ ಮಾರ್ಗವಾಗಿ ಕಾಟಾಪೂರ ಮೂಲಕ ಜ.20ರಂದು ಬನಶಂಕರಿಗೆ ತೆರಳಿ ಶ್ರೀಬನಶಂಕರಿ ದೇವಿಗೆ ಪೀತಾಂಬರ ಸೀರೆಯನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪಿ.ಆರ್‌.ಗಿರಿಯಪ್ಪ, ಪರಗಿ ಶ್ರೀಶೈಲಪ್ಪ, ನಾಗರಾಜ ಅಗಳಿ ಪಂಪಾಪತಿ, ಗಣಪತಿ, ಬ್ರಹ್ಮನಂದ, ಬಣ್ಣದ ಹೇಮಣ್ಣ ಕಾಳಗಿ ಸುದರ್ಶನ ಹಾಗೂ ಸಮಾಜದ ಗುರು-ಹಿರಿಯರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next