Advertisement

ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ

08:14 PM Apr 22, 2021 | Team Udayavani |

ಬಾದಾಮಿ: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕೇಂದ್ರ ಸುಕ್ಷೇತ್ರ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿಷೇ ಧಿಸಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ಕೇಂದ್ರ, ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಗುಂಪು ಸೇರುವುದು, ಜಾತ್ರೆ, ಉತ್ಸವ ನಿಷೇಧ ಮಾಡಲಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳ ಆದೇಶದಂತೆ ಭಕ್ತರಿಗೆ ನಿಷೇಧ ವಿಧಿಸಿದ್ದು, ಎಂದಿನಂತೆ ಪೂಜೆ ಪುರಸ್ಕಾರ ನಡೆಸಲಾಗುತ್ತದೆ.

ದ್ವಾರ ಬಾಗಿಲ ಮುಂದೆ ನಾಮಫಲಕ ಹಾಕಿ, ಭಕ್ತರ ಪ್ರವೇಶ ನಿಬಂರ್ಧಿ ಸಲಾಗಿದೆ. ಅರ್ಚಕರ ಕುಟುಂಬದವರು ಮಾತ್ರ ಪ್ರತಿನಿತ್ಯ ಪೂಜೆ, ಪುರಸ್ಕಾರ ಮಾಡಬಹುದಾಗಿದೆ. ಸದಾ ಭಕ್ತರಿಂದ ಗಿಜಿಗುಡುತ್ತಿದ್ದ ದೇವಸ್ಥಾನದ ಆವರಣದ ಭಕ್ತರಿಲ್ಲದೇ ಭಣಗುಡುತ್ತಿತ್ತು. ಆದರೆ ಕೆಲವು ಭಕ್ತರು ಹೊರಗಿನಿಂದಲೇ ದೇವಿಗೆ ಕೈಮುಗಿದು ನಮಸ್ಕರಿಸಿ ಹೋಗುತ್ತಿರುವುದು ಸಾಮಾನ್ಯವಾಗಿತ್ತು. ಇದರಿಂದ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ, ಹುಣ್ಣಿಮೆ ದಿನದಂದು ದೇವಿಯ ದರ್ಶನಕ್ಕೆ ಬರುತ್ತಿದ್ದ ಭಕ್ತರಿಗೆ ನಿರಾಸೆ ಉಂಟಾಗಿದೆ. ಜಿಲ್ಲಾಡಳಿತದ ಮುಂದಿನ ಆದೇಶದವರೆಗೂ ಬನಶಂಕರಿ ದೇವಾಲಯ ಕಮಿಟಿಯವರು ಭಕ್ತರಿಗೆ ನಿಷೇಧ ಹೇರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next