Advertisement
1. ಬಾಳೆ ಹಣ್ಣಿನ ಪಡ್ಡು (ಎರಿಯಪ್ಪ)ಬೇಕಾಗುವ ಸಾಮಗ್ರಿ: ಕಳಿತ ಬಾಳೆ ಹಣ್ಣು -4, ಅಕ್ಕಿ-1 ಕಪ್, ತೆಂಗಿನ ತುರಿ-1/2 ಕಪ್, ಬೆಲ್ಲ-1/4 ಕಪ್, ಉಪ್ಪು, ಎಣ್ಣೆ.
ಬೇಕಾಗುವ ಸಾಮಗ್ರಿ: ಅಕ್ಕಿ -1 ಕಪ್, ಬಾಳೆಹಣ್ಣು-3, ಬೆಲ್ಲ-1/4 ಕಪ್, ತೆಂಗಿನ ತುರಿ -1/4 ಕಪ್, ಲವಂಗ, ಏಲಕ್ಕಿ, ಉಪ್ಪು.
Related Articles
Advertisement
3. ಬಾಳೆ ಹಣ್ಣಿನ ಸಿಹಿಬಾತ್ಬೇಕಾಗುವ ಸಾಮಗ್ರಿ: ಬಾಳೆ ಹಣ್ಣು -1 ಕಪ್, ಸಕ್ಕರೆ- 4 ಕಪ್, ತುಪ್ಪ-2 ಕಪ್, ಬೆಲ್ಲದ ಪುಡಿ ಸ್ವಲ್ಪ, ಕೇಸರಿ ಒಂದು ಎಸಳು, ಹಾಲು -1 ಕಪ್. ರವೆ-1/2 ಕಪ್. ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಹಾಲು ಹಾಕಿ, ತುಪ್ಪ, ಕೇಸರಿ ಬೆರೆಸಿ ಸಣ್ಣಗೆ ಕುದಿಸಿ. ಅದಕ್ಕೆ ಬಾಳೆಹಣ್ಣಿನ ಹೋಳನ್ನು ಹಾಕಿ ಸ್ವಲ್ಪ ಮಗುಚಿ ಕೆಳಗಿಳಿಸಿ. ಬಾಣಲೆಯಲ್ಲಿ ರವೆ ಹುರಿದುಕೊಂಡು, ಅದಕ್ಕೆ 4 ಕಪ್ ನೀರು, ಸಕ್ಕರೆ ಹಾಕಿ, ತುಪ್ಪ ಹಾಕಿ ಕೈ ಆಡಿಸುತ್ತಾ ಇರಿ. ಹದವಾದ ಪಾಕ ಬಂದಾಗ, ಹಾಲು, ಬಾಳೆಹಣ್ಣು ಹಾಕಿ, ತುಪ್ಪ ಪಾಕ ಬಿಟ್ಟಾಗ, ಏಲಕ್ಕಿ ಸೇರಿಸಿ. 4. ಬಾಳೆಹಣ್ಣು- ಬೆಲ್ಲದ ವ್ಯಂಜನ
ಬೇಕಾಗುವ ಸಾಮಗ್ರಿ: ಹಣ್ಣಾದ ಬಾಳೆಹಣ್ಣು- 1ಕಪ್, ತುರಿದ ಬೆಲ್ಲ-1ಕಪ್, ತೆಂಗಿನತುರಿ -1/2 ಕಪ್, ಏಲಕ್ಕಿ ಪುಡಿ ಮಾಡುವ ವಿಧಾನ: ಬಾಳೆಹಣ್ಣನ್ನು ಸಣ್ಣದಾಗಿ ಹೋಳು ಮಾಡಿ ತೆಂಗಿನತುರಿ, ಬೆಲ್ಲ ಹಾಗೂ ಏಲಕ್ಕಿ ಪುಡಿ ಬೆರೆಸಿ ಮಿಶ್ರಣ ಮಾಡಿದರೆ ವ್ಯಂಜನ ರೆಡಿ. ಇದನ್ನು ಚಪಾತಿ, ಪೂರಿ ಜೊತೆ ತಿನ್ನಲು ಸೊಗಸಾಗಿರುತ್ತೆ. 5.ಬಾಳೆ ಹಣ್ಣಿನ ಗೊಜ್ಜು
ಬೇಕಾಗುವ ಸಾಮಗ್ರಿ: ಕಳಿತ ಬಾಳೆಹಣ್ಣು- 5, ತೆಂಗಿನತುರಿ- 1/2 ಕಪ್, ಬೆಲ್ಲ- 1/2 ಕಪ್, ಹುರಿದ ಮೆಂತ್ಯೆ, ಬ್ಯಾಡಗಿ ಮೆಣಸು -2 ಮಾಡುವ ವಿಧಾನ: ತೆಂಗಿನತುರಿಯ ಜೊತೆಗೆ ಹುರಿದ ಮೆಂತ್ಯೆ, ಬ್ಯಾಡಗಿ ಮೆಣಸು ಹಾಕಿ ರುಬ್ಬಿ. ಆ ಮಿಶ್ರಣಕ್ಕೆ ಬಾಳೆಹಣ್ಣಿನ ಹೋಳುಗಳನ್ನು ಸೇರಿಸಿ, ಸಾಸಿವೆ- ಇಂಗು ಹಾಕಿ ಒಗ್ಗರಣೆ ಹಾಕಿದರೆ ಗೊಜ್ಜು ತಯಾರು. 6. ಬಾಳೆಹಣ್ಣಿನ ಸ್ಯಾಂಡ್‌ವಿಚ್
ಬೇಕಾಗುವ ಸಾಮಗ್ರಿ: ಬ್ರೆಡ್- 2 ಸ್ಲೆ„ಸ್, ಬಾಳೆಹಣ್ಣಿನ ಸಣ್ಣ ತುಣುಕು, ಕಾಳುಮೆಣಸಿನ ಪುಡಿ
ಮಾಡುವ ವಿಧಾನ: ಬ್ರೆಡ್ ಅನ್ನು ಕಾವಲಿ ಮೇಲಿಟ್ಟು ಬಿಸಿ ಮಾಡಿ, ಬಾಳೆಹಣ್ಣಿನ ತುಣುಕುಗಳನ್ನಿಟ್ಟು, ಕಾಳುಮೆಣಸಿನ ಪುಡಿ ಸಿಂಪಡಿಸಿ. ಬ್ರೆಡ್‌ನ ಎರಡೂ ಬದಿ ಕೆಂಪಾಗುವ ತನಕ ಬಿಸಿ ಮಾಡಿ. – ಚಪಾತಿ ಹಿಟ್ಟಿಗೆ ಬಾಳೆಹಣ್ಣಿನ ತುಣುಕುಗಳನ್ನು ಸೇರಿಸಿ, ಚೆನ್ನಾಗಿ ನಾದಿ, ಬಾಳೆಹಣ್ಣಿನ ಚಪಾತಿ ಮಾಡಬಹುದು.
-ಕಳಿತ ಬಾಳೆಹಣ್ಣು, ತುಪ್ಪ, ಮೊಸರು, ಹಾಲು, ಜೇನುತುಪ್ಪ ಸೇರಿಸಿದರೆ ಅದುವೇ ಪಂಚಾಮೃತ.
– ಬಾಳೆಹಣ್ಣನ್ನು ಉದ್ದಕ್ಕೆ ಹಚ್ಚಿ ಎರಡು ಭಾಗ ಮಾಡಿ. ಬಿಸಿ ಕಾವಲಿಯ ಮೇಲೆ ಕೆಂಪಾಗುವವರೆಗೆ ಬಿಸಿ ಮಾಡಿ, ಟೊಮೆಟೊ ಸಾಸ್ ಜೊತೆ ತಿನ್ನಬಹುದು.
– ಕಳಿತ ಬಾಳೆಹಣ್ಣಿನ ಹೋಳು, ಹಾಲು, ಸಕ್ಕರೆ, ಏಲಕ್ಕಿ ಪುಡಿ ಹಾಕಿದರೆ ಬಾಳೆಹಣ್ಣಿನ ಮಿಲ್ಕ್ಶೇಕ್ ರೆಡಿ -ಹೀರಾ ರಮಾನಂದ್