ರಬಕವಿ-ಬನಹಟ್ಟಿ: ಸೋಮವಾರ ಸ್ಥಳೀಯ ವೀರಭದ್ರೇಶ್ವರರ ಕಾರ್ತಿಕೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.
ಕಾರ್ತಿಕೋತ್ಸವದ ನಿಮಿತ್ತವಾಗಿ ಬೆಳಗ್ಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ಬಿಲ್ವ ಪತ್ರೆ ಅರ್ಚನೆ ನಡೆಯಿತು. ನಂತರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಬೆಳ್ಳಿ ಪೂಜೆ ಭಕ್ತರ ಗಮನ ಸೆಳೆಯಿತು.
ನಂತರ ಅಗ್ನಿಕುಂಡ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ವೀರಭದ್ರೇಶ್ವರರ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳದೊಂದಿಗೆ ನಡೆಯಿತು.
ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಪುರುವಂತರು ವೀರಗಾಸೆ ಪ್ರದರ್ಶನವನ್ನು ಮಾಡಿದರು. ನಂದಿಕೋಲ ಹೊತ್ತವರು, ಪಲ್ಲಕ್ಕಿ ಹೊತ್ತುಕೊಂಡು ಬಂದ ಭಕ್ತರು, ಪುರುವಂತರು ಪಲ್ಲಕ್ಕಿ ಸಮೇತವಾಗಿ ಅಗ್ನಿಕುಂಡ ಪ್ರವೇಶದ ನಂತರ ನೂರಾರು ಜನ ಭಕ್ತರು ಅಗ್ನಿಕುಂಡ ಹಾಯ್ದು ತಮ್ಮ ಹರಕೆಯನ್ನು ಪೂರೈಸಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಧಬಾಡಿ, ಬಸವರಾಜ ಪಟ್ಟಣ, ರೇವಣಪ್ಪ ಶಿವಸಿಂಪಿ, ರಾಜಶೇಖರ ಗಂಜ್ಯಾಳ, ಈರಪ್ಪ ಗಂಜ್ಯಾಳ, ಶಂಕರ ಜುಂಜಪ್ಪನವರ, ಈಶ್ವರ ಗೆದ್ದೆಪ್ಪನವರ, ಮಲ್ಲಪ್ಪ ಬಡಿಗೇರ, ಮಲ್ಲಪ್ಪ ಗೇಣಿ, ಪಂಡಿತಪ್ಪ ಪಟ್ಟಣ, ಶ್ರೀಪಾದ ಬಾಣಕಾರ, ಮಲ್ಲಣ್ಣ ಬಾವಲತ್ತಿ, ಶಿವು ಬಾಗೇವಾಡಿ, ದಾನಪ್ಪ ಹುಲಜತ್ತಿ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ : ಯುವಕರ ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸುವುದು ಅವಶ್ಯ : ಡಾ|ಕೋಲ್ಕಾರ್