Advertisement

ಬನಹಟ್ಟಿ ಪೊಲೀಸರ ಕಾರ್ಯಾಚರಣೆ: ಮೂವತ್ತಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ, ಮೂವರ ಬಂಧನ

06:00 PM May 25, 2023 | Team Udayavani |

ರಬಕವಿ-ಬನಹಟ್ಟಿ: ಸಮೀಪದ ಯಲ್ಲಟ್ಟಿ ಗ್ರಾಮದ ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮೂವತ್ತಕ್ಕೂ ಹೆಚ್ಚು ಜಾನುವಾರುಗಳನ್ನು ಬನಹಟ್ಟಿ ಠಾಣೆಯ ಪೊಲೀಸ್ ರು ಬುಧವಾರ ವಶಪಡಿಸಿಕೊಂಡ ಘಟನೆ ನಡೆದಿದೆ.

Advertisement

ಒಟ್ಟು ಮೂರು ವಾಹನಗಳಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಈ ಸಂಬಂಧ ಮೂವರು ವಾಹನ ಚಾಲಕರಾದ ಅಥಣಿ ತಾಲ್ಲೂಕಿನ ಮುಸಗುಪ್ಪಿಯ ರಾವಸಾಬ ಹಾರೂಗೇರಿ, ಮಹಾರಾಷ್ಟ್ರದ ಕವಟೆಮಂಕಾಳದ ಸಾಗರ ಲೊಂಡೆ ಮತ್ತು ಕವಟೆಮಂಕಳ ತಾಲ್ಲೂಕಿನ ಇಂಗನಗಾವ್ ಗ್ರಾಮದ ಅಶೋಕ ಚೌಗಲೆಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಜಾನುವಾರುಗಳನ್ನು ಮಾಂಸದ ಉದ್ದೇಶಕ್ಕಾಗಿ ಆಕ್ರಮವಾಗಿ ಸಾಗಿಸಲಾಗುತ್ತಿತ್ತು. ಜಾನುವಾರುಗಳ ಒಟ್ಟು ಮೌಲ್ಯವು ರೂ. ೪ ಲಕ್ಷದಷ್ಟು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಕ್ಷಣೆ ಮಾಡಿದ ಜಾನುವಾರುಗಳನ್ನು ರಬಕವಿ ಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಗ್ರಾಮದಲ್ಲಿರುವ ಗೋಶಾಲೆಗೆ ಬಿಡಲಾಯಿತು.

ಈ ಕುರಿತು ಸ್ಥಳೀಯ ಪಿಎಸ್‌ಐ ರಾಘವೇಂದ್ರ ಖೋತ ಕರ್ನಾಟಕ ಗೋಹತ್ಯೆ ಮತ್ತು ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ನಡೆಸಿದ್ದಾರೆ.

Advertisement

ಇದನ್ನೂ ಓದಿ: Nithyananda ನೊಂದಿಗೆ ನನ್ನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ: ನಟ ಅಶೋಕ್ ಕುಮಾರ್ 

Advertisement

Udayavani is now on Telegram. Click here to join our channel and stay updated with the latest news.

Next