Advertisement
ಅವರು ತಮ್ಮ ಕಾಲತಿಪ್ಪಿ ರಸ್ತೆಯಲ್ಲಿರುವ ಅರ್ಧ ಏಕರೆ ಭೂಮಿಯಲ್ಲಿ ಒಂದೂವರೆ ಫೂಟ್‌ಗೆ ಸಾಲಿನಂತೆ ಕಪ್ಪು ಗೋಧಿಯನ್ನು ನಾಟಿ ಮಾಡಿದ್ದಾರೆ. ಅದಕ್ಕೂ ಮೊದಲು ತಿಪ್ಪೆಗೊಬ್ಬರ, ಎರೆಹುಳು, ಬೇವಿನಹಿಂಡಿ, ಬೀಜೋಪಚಾರ ಮಾಡಿ, ಸಾವಯವ ಕೃಷಿಯಲ್ಲಿ ಬೆಳೆ ಬೆಳೆದಿದ್ದಾರೆ. ಒಟ್ಟು 105 ರಿಂದ 110 ದಿನಗಳ ಬೆಳೆಯಾಗಿರುವ ಕಪ್ಪು ಗೋದಿಯನ್ನು ಬೆಳೆದಿದ್ದಾರೆ. ಒಂದು ತೆನೆ 30 ರಿಂದ 40 ಕಾಳುಗಳನ್ನು ಬಿಟ್ಟಿದ್ದು, ಅರ್ಧ ಎಕರೆಯಲ್ಲಿ ಐದು ಕ್ವಿಂಟಲ್ ಇಳುವರಿ ನೀಡಿದೆ.
Related Articles
Advertisement
ಈ ಕಪ್ಪು ಗೋಧಿಯನ್ನು ಸದ್ಯ ಪ್ರಾಯೋಗಿಕವಾಗಿ ಬೆಳೆಯುತ್ತಿದ್ದೇವೆ. ಕಪ್ಪು ಗೋಧಿ ಪುರಾತನವಾದ ಬೆಳೆಯಾಗಿದ್ದು ಸಧ್ಯ ಮಧ್ಯ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತಿದ್ದು, ಇದು ಔಷಧೀಯಗುಣ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶ ಹೊಂದಿದೆ. ಆ್ಯಂಟಿ ಆಕ್ಸಿಡೆಂಟ್, ವಿಟಿಮಿನ್ ಬಿ, ಪಾಲಿಕ್ ಆ್ಯಸಿಡ್, ಐರನ್, ಕಾಪರ್ ಪೊಟ್ಯಾಷಿಯಂ, ಪೈಬರ್, ಜಿಂಕ್, ಮ್ಯಾಗ್ನೇಷಿಯಂ ಸೇರಿದಂತೆ ಹಲವು ಲವಣಾಂಶಗಳನ್ನ ಹೊಂದಿದೆ. ಹೀಗಾಗಿ ಬಹುತೇಕ ಪೋಷಕಾಂಶಗಳನ್ನು ಹೊಂದಿದ ಈ ಬೆಳೆಗೆ ಬಲು ಬೇಡಿಕೆ ಇದೆ. ಡಯಾಬಿಟಿಸ್ ರೋಗಿಗಳಿಗೆ, ಕ್ಯಾನ್ಸರ್, ರಕ್ತದ ಒತ್ತಡ ಹತೋಟಿಗೆ, ಬಿಪಿ ಇರುವಂತ ರೋಗಿಗಳಿಗೆ ಇದು ರಾಮಬಾಣವಾಗಿದೆ. ಇದೀಗ ಜನತೆ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುತ್ತಿದ್ದು ರೋಗ ನೀರೋಧಕ ಶಕ್ತಿ ಹೊಂದಿರುವ ಕಪ್ಪು ಗೋಧಿಗೆ ಬಾರಿ ಬೇಡಿಕೆ ಬರಬಹುದು. ಅದರ ಬೇಡಿಕೆಯನ್ನು ನೋಡಿಕೊಂಡು ಮತ್ತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಲು ನಿರ್ಧರಿಸಿದ್ದೇನೆ ಎನ್ನುತ್ತಾರೆ ಧರೆಪ್ಪ ಕಿತ್ತೂರ.
ಇದನ್ನೂ ಓದಿ: ಸೂಕ್ತ ಬೆಲೆಯಿಲ್ಲದ ಕಾರಣ ಎರಡು ಎಕರೆ ಎಲೆಕೋಸಿನ ಬೆಳೆ ನಾಶ ಮಾಡಿದ ರೈತ
ಇದನ್ನು ಬೆಳೆಯುವುದರ ಜೊತೆಗೆ ಇದನ್ನು ನಾನು ಮೊದಲು ಬಳಕೆ ಮಾಡಿದ್ದೇನೆ. ಇದು ತುಂಬಾ ಉತ್ತಮವಾದ ಗೋಧಿಯಾಗಿದ್ದು, ಬೆಳೆಯನ್ನು ನಾನು ಬೆಳೆಯುವುದರ ಜೊತೆಗೆ ಇತರೆ ರೈತರಿಗೂ ಇದನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಕಡಿಮೆ ಖರ್ಚಿನಲ್ಲಿ ಸಾವಯವ ಪದ್ದತಿಯಿಂದ ಗೋಧಿಯನ್ನು ಬೆಳೆದಿದ್ದೇನೆ ಎನ್ನುತ್ತಾರೆ ಧರೆಪ್ಪ.