Advertisement

ಕೊರೊನಾ; ಅರಿಶಿಣ ದರ ಕುಸಿತ

01:41 PM Mar 19, 2020 | Naveen |

ಬನಹಟ್ಟಿ; ತಾಲೂಕಿನ ರೈತರು ಪ್ರಮುಖ ವಾಣಿಜ್ಯ ಬೆಳೆಯಾಗಿ ಸಾವಿರಾರು ಟನ್‌ನಷ್ಟು ಅರಿಶಿಣ ಬೆಳೆಯುತ್ತಿದ್ದಾರೆ. ಇಲ್ಲಿ ಬೆಳೆದ ಬೆಳೆಗೆ ಪಕ್ಕದ ಮಹಾರಾಷ್ಟ್ರದ ಸಾಂಗ್ಲಿ ಎಪಿಎಂಸಿಯೇ ಪ್ರಮುಖ ಮಾರುಕಟ್ಟೆಯಾಗಿದೆ. ಆದರೆ ಕಳೆದ ತಿಂಗಳಿಂದ ಆರಂಭವಾದ ಮಹಾಮಾರಿ ಕೊರೊನಾ ವೈರಸ್‌ ಹಾವಳಿಯಿಂದ ಅರಿಶಿನ ಬೆಳೆಗೆ ಸೂಕ್ತ ಬೆಲೆ ಸಿಗಲಿ ದೆಯೇ ಎಂಬ ಆತಂಕ ರೈತರನ್ನು ಕಾಡಲಾರಂಭಿಸಿದೆ.

Advertisement

ಕಳೆದ ತಿಂಗಳಿನಿಂದ ರೈತರು ಅರಿಶಿಣ ಬೆಳೆ ಕಟಾವಿಗೆ ಮುಂದಾಗಿದ್ದಾರೆ. ಕೆಲವು ರೈತರು ಕಟಾವಾದ ಬಳಿಕ ಅದನ್ನು ಬಟ್ಟಿ ಹಾಕಿ ಒಣಗಿಸಿ ಉತ್ತಮ ಗುಣಮಟ್ಟದ ಅರಿಶಿಣ ತಯಾರಿಸಿದ ಬಳಿಕ ಗೋದಾಮುಗಳಲ್ಲಿ ಸಂಗ್ರಹಿಸಿಡದೇ ನೇರವಾಗಿ ಸಾಂಗ್ಲಿ ಮಾರುಕಟ್ಟೆಗೆ ಕಳಿಸುವುದು ಪ್ರತಿ ಸಲದ ವಾಡಿಕೆ. ಆದರೆ ಈ ಬಾರಿ ದರದಲ್ಲಿ ಬಾರಿ ಇಳಿಕಯಾದ ಕಾರಣ ಮಾರುಕಟ್ಟೆಗೆ ಕಳಿಸಿದೇ ತಮ್ಮ ಗೋದಾಮುಗಳಲ್ಲಿಯೇ ಸಂಗ್ರಹಿಸಿಡುತ್ತಿದ್ದಾರೆ.

ಕಳೆದ ವರ್ಷ ಈ ಸಮಯದಲ್ಲಿ ಪ್ರತಿ ಕ್ವಿಂಟಲಗೆ 9ರಿಂದ 12 ಸಾವಿರ ರೂ.ದರ
ಇತ್ತು. ಆದರೆ ಈಗ ಪ್ರತಿ ಕ್ವಿಂಟ್‌ಲ್‌ ಗೆ 6 ರೂ.ಸಾವಿರವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿಗೆ ದರ ಬರುವ ನಿರೀಕ್ಷೆ ಇರುವುದರಿಂದ ನಾವು ಮಾರುಕಟ್ಟೆಗೆ ಕಳಿಸಿದೆ ಒಂದೆರಡು ತಿಂಗಳು ಸಂಗ್ರಹ ಮಾಡಿಟ್ಟು ದರ ಹೆಚ್ಚಿಗೆ ಬಂದ ಬಳಿಕ ಮಾರಾಟ ಮಾಡುತ್ತೇವೆ.
ಲಕ್ಷ್ಮಣ ಆಸಂ,
ನಾವಲಗಿ ಗ್ರಾಮದ ಅರಿಷಿಣ
ಬೆಳೆದ ರೈತ

ಕಳೆದ ವರ್ಷ ಪ್ರವಾಹ ಬಂದು ಅನೇಕ ಕಡೆಗಳಲ್ಲಿ ಅಂದರೆ ಅಸ್ಕಿ, ಆಸಂಗಿ, ತಮದಡ್ಡಿ, ಹಳಿಂಗಳಿ ಸೇರಿದಂತೆ ಕೃಷ್ಣಾ, ಘಟಪ್ರಭಾ ನದಿಯ ಎಡಬಲ ಭಾಗದ ರೈತರ ಅರಿಷಿಣ ಬೆಳೆಗಳು ಹಾಳಾಗಿದ್ದವು. ಆದ್ದರಿಂದ ಈ ಬಾರಿ ಪ್ರವಾಹ ಪ್ರದೇಶ ಬಿಟ್ಟು ಹೊರಭಾಗದಲ್ಲಿರುವ ಅನೇಕ ರೈತರು ಅರಿಷಿಣ ಬೆಳೆ ಬೆಳೆದಿದ್ದಾರೆ. ಅವರಿಗಾದರೂ ಉತ್ತಮ ದರ ಸಿಗಬಹುದೇನೋ ಎಂದು ಆಶಾಭಾವವಿತ್ತು. ಆದರೆ ಈ ಕೊರೊನಾ ರೋಗದ ಹರಡುವಿಕೆಯಿಂದ ದರ ಖುಷಿಯಲು ಕಾರಣವಾಗಿದೆ ಎಂದು ಖರೀದಿದಾರರು ಹೇಳುತ್ತಿದ್ದಾರೆ. ದರ ಹೆಚ್ಚಿಗೆ ಬರುವ ವರೆಗೂ ನಾವು ಕಾಯಬೇಕಾಗಿದೆ.
ವಿದ್ಯಾಧರ ಗುಳ್ಳ,
ರೈತ ಮುಖಂಡರು, ಆಸಂಗಿ ಗ್ರಾಮ

ಮಾರುಕಟ್ಟೆಯಲ್ಲಿ ಹೊಲಸೇಲ್‌ ದರದಲ್ಲಿ ಅರಿಷಿಣ ಕರೀದಿದಾರರು ಬಾರದ ಕಾರಣ ನಾವು ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಅರಿಷಿಣ ಕರಿದಸಲು ಮುಂದಾಗುತ್ತಿಲ್ಲ. ಈ ಕೊರೊನಾ ರೋಗದ ಹಾವಳಿಯಿಂದ ಬೇರೆ ರಾಜ್ಯ ಹಾಗೂ ವಿದೇಶಿ ಖರೀದಿದಾರರು ಎಪಿಎಂಸಿಗೆಳಿಗೆ ಬಾರದೆ ಇರುವುದರಿಂದ ದರ ಕಡಿಮೆಯಾಗಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ದರ ಹೆಚ್ಚಾಗುವ ಸಾಧ್ಯತೆ ಇದೆ. ರೈತರು ಆತಂಕ ಪಡಬೇಕಾಗಿಲ್ಲ.
ರಂಜೀತ್‌ ಮಾಳವಾಡೆಕರ.
ಸಾಂಗ್ಲಿ ಮಾರುಕಟ್ಟೆ ವ್ಯಾಪಾರಸ್ಥರು.

Advertisement
Advertisement

Udayavani is now on Telegram. Click here to join our channel and stay updated with the latest news.

Next