Advertisement

ಆ.1ರಿಂದ ರಾಷ್ಟ್ರಮಟ್ಟದ ಯುವ ಅಭಿಯಾನ

04:05 PM Jul 10, 2021 | Team Udayavani |

ಬೆಂಗಳೂರು: ದೇಶದ 75ನೇಸ್ವಾತಂತ್ರೊತ್ಸವದ ಹಿನ್ನೆಲೆಯಲ್ಲಿ ಆಗಸ್ಟ್‌1ರಿಂದ 15ರವರೆಗೆ ರಾಷ್ಟ್ರಮಟ್ಟದ ನನ್ನಭಾರತ (ಮೈ ಭಾರತ್‌) ಆನ್‌ಲೈನ್‌ ಯುವಅಭಿಯಾನವನ್ನು ದಿಶಾ ಭಾರತ್‌ ಸಂಸ್ಥೆಹಮ್ಮಿಕೊಂಡಿದ್ದು, ಇದರ ಅಂಗವಾಗಿಶುಕ್ರವಾರ ಪೋಸ್ಟರ್‌ ಹಾಗೂಲಾಂಛನ ಬಿಡುಗಡೆಮಾಡಲಾಯಿತು.

Advertisement

ಉಪಮುಖ್ಯಮಂತ್ರಿಹಾಗೂ ಉನ್ನತ ಶಿಕ್ಷಣ ಸಚಿವಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಟ್ವೀಟ್‌ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯದಕುಲಪತಿ ಡಾ.ಕೆ.ಆರ್‌.ವೇಣುಗೋಪಾಲ್‌,ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಡಾ.ಶ್ರೀನಿವಾಸ್‌ ಬಳ್ಳಿ, ಮಹಾರಾಣಿ ಕ್ಲಸ್ಟರ್‌ವಿಶ್ವವಿದ್ಯಾಲಯದ ಕುಲಪತಿ ಡಾ. ಎಲ್‌.ಗೋಮತಿದೇವಿ, ರಾಜೀವ್‌ ಗಾಂಧಿಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಡಾ. ಜಯಕರ ಶೆಟ್ಟಿ, ಬೆಂಗಳೂರು ನಗರವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಪ್ರೊ.ನರಸಿಂಹ ಮೂರ್ತಿ, ದಿಶಾ ಭಾರತ್‌ಅಧ್ಯಕ್ಷ ಡಾ. ಎನ್‌. ವಿ. ರಘುರಾಂ,ದಿಶಾಭಾರತ್‌ ಸಂಸ್ಥಾಪಕಿ ರೇಖಾರಾಮಚಂದ್ರನ್‌ ಅಭಿಯಾನದ ಪೋಸ್ಟರ್‌ಹಾಗೂ ಲಾಂಛನ ಬಿಡುಗಡೆ ಮಾಡಿದರು.

ಅಭಿಯಾನದಲ್ಲಿ ಪ್ರತಿದಿನ ಬೆಳಗ್ಗೆ 11ರಿಂದ ವಿದ್ಯಾರ್ಥಿಗಳಿಂದ ದೇಶಭಕ್ತಿಕಾರ್ಯಕ್ರಮವಾಗಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕಥಾಮಾಲಿಕೆ, ರಾಷ್ಟ್ರೀಯವಿಚಾರಗಳ ಕುರಿತು ಭಾಷಣ,ದೇಶಭಕ್ತಿಗೀತೆಗಳ ಗಾಯನ,ಸಾಮಾಜಿಕ ವಿಷಯಗಳಕುರಿತು ಏಕಪಾತ್ರಾಭಿನಯ,ರಾಷ್ಟ್ರಭಾವಜಾಗರಣದ ನೃತ್ಯಮೊದಲಾದ ಚಟುವಟಿಕೆಇರಲಿದೆ.ಪ್ರತಿದಿನ ಸಂಜೆ 6ಕ್ಕೆ ಉಪನ್ಯಾಸ ಸರಣಿಇರಲಿದೆ.

75ನೇ ಸ್ವಾತಂತ್ರೊéàತ್ಸವ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸ್ವರಾಜ್ಯ-75:ಸ್ವಾತಂತ್ರ್ಯನಂತರದ ಭಾರತ ಎಂಬವಿಷಯದ ಕುರಿತು ಕನ್ನಡ ಮತ್ತು ಇಂಗ್ಲಿಷ್‌ಭಾಷೆಯಲ್ಲಿ ರಾಜ್ಯಮಟ್ಟದ ಪ್ರಬಂಧಸ್ಪರ್ಧೆ ಇರಲಿದೆ. ಹೀಗೆ 15 ದಿನ ವಿವಿಧರೀತಿಯ ಕಾರ್ಯಕ್ರಮ ಇರಲಿದೆ. ದಿಶಾಭಾರತ ಫೇಸ್‌ಬುಕ್‌ ಪೇಜ್‌ www. facebook.com /Di sha Bharat ನಲ್ಲಿ ಪ್ರಸಾರವಾಗಿದೆ. ಮಾಹಿತಿಗೆಮೊ.9113263342 ಅಥವಾ8105417265 ಸಂಪರ್ಕಿಸಬಹುದಾಗಿದೆಎಂದು ದಿಶಾ ಭಾರತ್‌ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next