Advertisement

Sugar: ಅ.1ರಿಂದ ದೇಶದಿಂದ ಸಕ್ಕರೆ ರಫ್ತಿಗೆ ನಿಷೇಧ?: ಏಳು ವರ್ಷಗಳ ಬಳಿಕ ಇಂಥ ನಿರ್ಧಾರ

08:35 PM Aug 23, 2023 | Team Udayavani |

ನವದೆಹಲಿ: ಪ್ರಸಕ್ತ ವರ್ಷದ ಅ.1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಸಕ್ಕರೆ ರಫ್ತು ಮಾಡುವುದನ್ನು ನಿಷೇಧಿಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಏಳು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ಇಂಥ ತೀರ್ಮಾನ ಕೈಗೊಂಡಿದೆ. ಹೀಗಾಗಿ, ನ್ಯೂಯಾರ್ಕ್‌, ಲಂಡನ್‌ ಸೇರಿದಂತೆ ಜಗತ್ತಿನ ಮಾರುಕಟ್ಟೆಗಳಲ್ಲಿ ದೇಶದಿಂದ ರಫ್ತಾಗುವ ಸಕ್ಕರೆ ಲಭ್ಯವಾಗದು. ಈಗಾಗಲೇ ದೇಶದಿಂದ ಅಕ್ಕಿ, ಈರುಳ್ಳಿ ರಫ್ತು ಮಾಡುವುದರ ಮೇಲೆ ನಿಷೇಧವಿದೆ.

Advertisement

ಮೊದಲು ನಮ್ಮ ದೇಶದ ಅಗತ್ಯವನ್ನು ಪೂರೈಸಬೇಕಾಗಿದೆ. ಇದರ ಜತೆಗೆ ಸಾಕಷ್ಟು ಪ್ರಮಾಣದಲ್ಲಿ ಇಥೆನಾಲ್‌ ಅನ್ನೂ ಉತ್ಪಾದನೆ ಮಾಡಬೇಕಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿ ಮಾಹಿತಿ ನೀಡಿದ್ದಾರೆ. ಮುಂದಿನ ತಿಂಗಳ ಅಂತ್ಯದ ವರೆಗೆ ದೇಶದಲ್ಲಿ ಇರುವ ಸಕ್ಕರೆ ಕಾರ್ಖಾನೆಗಳಿಗೆ 6.1 ಮಿಲಿಯನ ಟನ್‌ ಸಕ್ಕರೆ ರಫ್ತು ಮಾಡಲು ಸರ್ಕಾರದ ಅನುಮತಿ ನೀಡಿದೆ. ಕಳೆದ ವರ್ಷ ಕಾರ್ಖಾನೆಗಳಿಗೆ 11.1 ಮಿಲಿಯ ಟನ್‌ ಸಕ್ಕರೆ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. 2016ರಲ್ಲಿ ಸಕ್ಕರೆ ರಫ್ತು ಮಾಡುವುದರ ಮೇಲೆ ಶೇ.20 ತೆರಿಗೆ ವಿಧಿಸಲಾಗಿತ್ತು. ಪ್ರಸಕ್ತ ವರ್ಷ ದೇಶದ ಉತ್ಪಾದನೆ ಶೇ.3.3 ಅಂದರೆ 31.7 ಮಿಲಿಯ ಟನ್‌ಗಳಿಗೆ ಕುಸಿಯುವ ಸಾಧ್ಯತೆಗಳಿವೆ.

 

Advertisement

Udayavani is now on Telegram. Click here to join our channel and stay updated with the latest news.

Next