Advertisement

ಕತಾರ್‌ಗೆ ನಿಷೇಧ :ವಿಶ್ವಕಪ್‌ ಫ‌ುಟ್ಬಾಲ್‌ಗೆ ಹಿನ್ನಡೆ

01:22 PM Jun 07, 2017 | Team Udayavani |

ಜ್ಯೂರಿಚ್‌: ನಿಗದಿತ ವೇಳಾ ಪಟ್ಟಿಯಂತೆ 2022ರ ಫ‌ುಟ್ಬಾಲ್‌ ವಿಶ್ವಕಪ್‌ ಕತಾರ್‌ ಆತಿಥ್ಯದಲ್ಲಿ ನಡೆಯಬೇಕಿದೆ. ಆದರೆ ಕತಾರ್‌ ಮೇಲೆ ಸೌದಿ ಅರೇಬಿಯಾ ಸೇರಿದಂತೆ 6 ರಾಷ್ಟ್ರಗಳು ನಿಷೇಧ ಹೇರಿವೆ. ಹೀಗಾಗಿ ಟೂರ್ನಿಯ ಬಗ್ಗೆ ಅನುಮಾನ ಮೂಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಂತಾರಾಷ್ಟ್ರೀಯ ಫ‌ುಟ್ಬಾಲ್‌ ಸಂಸ್ಥೆ ಕೂಡ ಕತಾರ್‌ ವಿರುದ್ಧದ ನಿಷೇಧದ ಮೇಲೆ ನಿರಂತರ ನಿಗಾ ವಹಿಸಿಸುತ್ತಿರುವುದಾಗಿ ತಿಳಿಸಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಫ‌ುಟ್ಬಾಲ್‌ ಆಡಳಿತ ಮಂಡಳಿ ಫಿಫಾ, ವಿಶ್ವ ಕಪ್‌ ಆಯೋಜಕ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಈ ಸಂದರ್ಭದಲ್ಲಿ ನಾವು ಯಾವುದೇ ಪ್ರತಿಕ್ರಿಯೆ ನೀಡು ವುದಿಲ್ಲ ಎಂದು ತಿಳಿಸಿದೆ.

ಕತಾರ್‌ಗೆ ನಿಷೇಧ ಏಕೆ?
ಭಯೋತ್ಪಾದನೆಗೆ ಕತಾರ್‌ ಪ್ರೋತ್ಸಾಹ ನೀಡುತ್ತಿದೆ. 2011ರ ಅರಬ್‌ ಕ್ರಾಂತಿಗೆ ಕತಾರ್‌ ದೇಶವೇ ಕಾರಣ ಎಂದು ಸೌದಿ ಅರೇಬಿಯಾ, ಬಹ್ರೈನ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಈಜಿಪ್ಟ್, ಯೆಮನ್‌ ಮತ್ತು ಲಿಬಿಯಾ ದೇಶಗಳು ಕತಾರ್‌ ಜತೆಗಿನ ಸಂಬಂಧವನ್ನು ಕಡಿದುಕೊಂಡಿವೆ. ಹೀಗಾಗಿ ಈ ಬೆಳವಣಿಗೆ 2022ರ ಫ‌ುಟ್ಬಾಲ್‌ ವಿಶ್ವಕಪ್‌ ಮೇಲೆ ಪರಿಣಾಮ ಬೀರಲಿದೆ.

2022ರ ವಿಶ್ವಕಪ್‌ ಆತಿಥ್ಯಕ್ಕೆ ಕತಾರ್‌, ಅಮೆರಿಕ, ದ.ಕೊರಿಯಾ, ಜಪಾನ್‌, ಆಸ್ಟ್ರೇಲಿಯ ಮುಂದಾಗಿದ್ದವು. ಅಂತಿಮವಾಗಿ ಕತಾರ್‌ಗೆ ಅವಕಾಶ ಲಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next