ಹೈದರಾಬಾದ್: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯ ವಿಧಾನವನ್ನು ಯಾವಾಗಲೂ ವಿರೋಧಿಸುತ್ತಿದ್ದೆ ಆದರೆ ಸಂಘಟನೆಯ ಮೇಲಿನ ನಿಷೇಧವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಬುಧವಾರ ಹೇಳಿದ್ದಾರೆ.
ಹಿಂಸಾಚಾರದಲ್ಲಿ ತೊಡಗಿಸಿಕೊಂಡ ಮತ್ತು ಐಸಿಸ್‌ನಂತಹ ಜಾಗತಿಕ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಪಿಎಫ್ ಐ ಅನ್ನು ಹಲವು ನಾಯಕರ ಬಂಧನದ ನಂತರ ಐದು ವರ್ಷಗಳ ಕಾಲ ಅದರ ಹಲವಾರು ಸಹ ಸಂಘಟನೆಗಳೊಂದಿಗೆ ಕೇಂದ್ರ ಸರಕಾರವು ಬುಧವಾರ ನಿಷೇಧಿಸಿದೆ.
ಇದನ್ನೂ ಓದಿ : PFI ಜತೆಗೆ ಬ್ಯಾನ್ ಆದ ಇತರ ಸಂಘಟನೆಗಳು ಯಾವುದು? ಕಚೇರಿಯಲ್ಲಿ ದೊರೆತ ಪುರಾವೆ ಬಹಿರಂಗ
“ನಾನು ಯಾವಾಗಲೂ ಪಿಎಫ್ ಐ ಕಾರ್ಯ ವಿಧಾನವನ್ನು ವಿರೋಧಿಸುತ್ತೇನೆ ಮತ್ತು ಪ್ರಜಾಪ್ರಭುತ್ವದ ವಿಧಾನವನ್ನು ಬೆಂಬಲಿಸುತ್ತೇನೆ, ಪಿಎಫ್ ಐ ಮೇಲಿನ ಈ ನಿಷೇಧವನ್ನು ಬೆಂಬಲಿಸಲಾಗುವುದಿಲ್ಲ” ಎಂದು ಓವೈಸಿ ಸರಣಿ ಟ್ವೀಟ್ ಮಾಡಿದ್ದಾರೆ.
“ಈ ರೀತಿಯ ಕಠೋರವಾದ ನಿಷೇಧವು ಅಪಾಯಕಾರಿ ಏಕೆಂದರೆ ಅದು ತನ್ನ ವಿಚಾರವನ್ನು ಹೇಳಲು ಬಯಸುವ ಯಾವುದೇ ಮುಸಲ್ಮಾನನ ಮೇಲಿನ ನಿಷೇಧವಾಗಿದೆ. ಭಾರತದ ಚುನಾವಣಾ ನಿರಂಕುಶಾಧಿಕಾರವು ಫ್ಯಾಸಿಸಂ ಅನ್ನು ಸಮೀಪಿಸುತ್ತಿರುವ ರೀತಿಯಲ್ಲಿ, ಪ್ರತಿ ಮುಸ್ಲಿಂ ಯುವಕನನ್ನು ಈಗ ಭಾರತದ ಕಪ್ಪು ಕಾನೂನು ಯುಎಪಿಎ ಅಡಿಯಲ್ಲಿ ಪಿಎಫ್‌ಐ ಕರಪತ್ರದೊಂದಿಗೆ ಬಂಧಿಸಲಾಗುವುದು”ಎಂದು ಟ್ವೀಟ್ ಮಾಡಿದ್ದಾರೆ.
ಪಿಎಫ್ ಐ ಅನ್ನು ಹೇಗೆ ನಿಷೇಧಿಸಲಾಗಿದೆ? ಖಾಜಾ ಅಜ್ಮೇರಿ ಬಾಂಬ್ ಸ್ಫೋಟದ ಅಪರಾಧಿಗಳಿಗೆ ಸಂಬಂಧಿಸಿದ ಬಲಪಂಥೀಯ ಬಹುಸಂಖ್ಯಾತ ಸಂಘಟನೆಗಳನ್ನು ಸರಕಾರ ಏಕೆ ನಿಷೇಧಿಸಿಲ್ಲ? ಎಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.