Advertisement

ತಮಿಳುನಾಡಿನಲ್ಲಿ ವಿವಾದ ಸೃಷ್ಟಿಸಿದ ಪಲ್ಲಕ್ಕಿ ನಿರ್ಬಂಧ

11:38 PM May 04, 2022 | Team Udayavani |

ಚೆನ್ನೈ: ಇಲ್ಲಿನ ಮೈಲದುತುರೈ ಜಿಲ್ಲೆಯ ಧರ್ಮಪುರಂ ಅಧೀನಂನಲ್ಲಿ ನಡೆಯಲಿರುವ “ಪಟ್ಟಿಣ ಪ್ರವೇಶಂ’ ಎಂಬ ಧಾರ್ಮಿಕ ಕ್ರಿಯೆಗೆ ತಮಿಳುನಾಡು ಸರಕಾರ ಅನುಮತಿ ನಿರಾಕರಿಸಿರುವುದು ಭಾರೀ ವಿವಾದಕ್ಕೆ ನಾಂದಿ ಹಾಡಿದೆ.

Advertisement

ಹಲವು ಶತಮಾನಗಳಿಂದಲೂ ಇಲ್ಲಿ ಈ ಸಂಪ್ರದಾಯ ಪಾಲಿಸಿಕೊಂಡು ಬರಲಾಗುತ್ತಿದೆ. “ಪಟ್ಟಿಣ ಪ್ರವೇಶಂ’ ಎಂದರೆ ಮಠಾಧೀಶರನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಆ ಪಲ್ಲಕ್ಕಿಯನ್ನು ಭಕ್ತರು ಹೆಗಲ ಮೇಲೆ ಹೊತ್ತು ಸಾಗುವುದು. ಮೇ 22ರಂದು ಈ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಡಳಿತವು ಏಕಾಏಕಿ ಈ ಪದ್ಧತಿಗೆ ನಿರ್ಬಂಧ ಹೇರಿದೆ. ಮಠಾಧೀಶರನ್ನು ಹೆಗಲ ಮೇಲೆ ಹೊರುವುದು ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವುದು ಜಿಲ್ಲಾಡಳಿತದ ವಾದ.

ಆದರೆ ಈ ನಿರ್ಧಾರವು ಈಗ ರಾಜಕೀಯ ಸ್ವರೂಪ ಪಡೆದಿದ್ದು, ತ.ನಾಡು ಸರಕಾರದ ವಿರುದ್ಧ ಎಐಎಡಿಎಂಕೆ ಮತ್ತು ಬಿಜೆಪಿ ಹರಿಹಾಯ್ದಿವೆ. ಡಿಎಂಕೆ ವಿರುದ್ಧ ಕಿಡಿಕಾರಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು, “ಜಿಲ್ಲಾಡಳಿತವು ಈ ಪದ್ಧತಿಗೆ ಅನುಮತಿ ನೀಡದಿದ್ದರೆ ನಾನೇ ಪಲ್ಲಕ್ಕಿಯನ್ನು ಹೊರುತ್ತೇನೆ’ ಎಂದು ಸವಾಲು ಹಾಕಿದ್ದಾರೆ. 1000 ದೇಗುಲಗಳ ಪುನರುತ್ಥಾನ: ತಮಿಳುನಾಡಿನ 1000 ದೇಗುಲಗಳ ಸಂರ­ಕ್ಷಣೆ, ಮರುಸ್ಥಾಪನೆ, ನವೀಕರಣಕ್ಕಾಗಿ 500 ಕೋಟಿ ರೂ.ಗಳನ್ನು ಸರಕಾರಮೀಸ­ಲಿ­ಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next