Advertisement

ಎಂಇಎಸ್‌ ನಿಷೇಧಿಸಲು: ವಾಟಾಳ್‌ ಆಗ್ರಹ

01:23 PM Jan 28, 2021 | Team Udayavani |

ರಾಮನಗರ: ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಕೋಪಕ್ಕೆ ಹೋಗಿದೆ. ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫ‌ಲ್ಯವಿದೆ. ಇದಕ್ಕೆ ಹೊಣೆ ಹೊತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಷಾ ರಾಜೀನಾಮೆ ನೀಡ ಬೇಕು ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

Advertisement

ನಗರದ ಐಜೂರು ವೃತ್ತದಲ್ಲಿ ಎಂ.ಇ.ಎಸ್‌. ನಿಷೇಧಿಸುವಂತೆ ಮತ್ತು ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಪಡಿಸುವಂತೆ ನಡೆಸಿದ ಕಂಬಳಿ ಸತ್ಯಾಗ್ರಹದ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದರು. ರಾಷ್ಟ್ರಧ್ವಜ ಕಟ್ಟುತ್ತಿದ್ದ ಪವಿತ್ರವಾದ ಸ್ಥಳದಲ್ಲಿ ಅನ್ಯ ಧ್ವಜಗಳು ಹಾರಾಡಿವೆ. ರಾಷ್ಟ್ರ ಧ್ವಜಕ್ಕೆ ಅಪಮಾನ ಆಗಕೂಡದು. ರೈತರು ಪ್ರಮಾಣಿಕವಾಗಿ ಚಳವಳಿ ಮಾಡುತ್ತಿದ್ದಾರೆ.ಅವರನ್ನು ದಾರಿ ತಪ್ಪಿಸುವ ಹುನ್ನಾರ ನಡೆದಿದೆ.

ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆ  ಯಾಗಬೇಕು. ಧ್ವಜಕ್ಕೆ ಅಗೌರವ ತಂದ್ದಿರುವವರಿಗೆ ಶಿಕ್ಷೆಯಾಗಬೇಕು ಎಂದರು. ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ಇರಬೇಕಿತ್ತು. ಇಲ್ಲಿ ಕೇಂದ್ರ ಸರ್ಕಾರದ ವೈಫ‌ಲ್ಯ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದರು.

ಎಂ.ಇ.ಎಸ್‌ ನಿಷೇಧಿಸಿ: ಬೆಳಗಾವಿಯಲ್ಲಿ ಎಂ.ಇ.ಎಸ್‌ ಇರುವ ತನಕ ಘೋರ ಅನ್ಯಾಯ ನಡೆಯುತ್ತಿರುತ್ತದೆ. ಮುಖ್ಯಮಂತ್ರಿಗಳು ತಕ್ಷಣ ಎಂ.ಇ.ಎಸ್‌ ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.

ಜ.30 ರಂದು ಎಂ.ಇ.ಎಸ್‌ ನಿಷೇಧಕ್ಕೆ ಒತ್ತಾಯಿಸಿ ರಾಜ್ಯಾ ದ್ಯಂತ ರೈಲ್‌ ಬಂದ್‌ ಕಾರ್ಯ ಮಾಡಲಾಗುತ್ತದೆ. ಈ ವೇಳೆ ರಾಜ್ಯದ ಎಲ್ಲಾ ಕನ್ನಡ ಪರ ಹೋರಾಟಗಾರರು ಭಾಗವಹಿಸಬೇಕು ಎಂದು ಕರೆ ನೀಡಿದರು.

Advertisement

ಇದನ್ನೂ ಓದಿ: ಹಳ್ಳಿಹಕ್ಕಿ ‘ಸಚಿವ’ ಆಸೆಗೆ ತಣ್ಣೀರೆರಚಿದ ಕೋರ್ಟ್: ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ

ಬೆಂಗಳೂರಿನಲ್ಲಿ ನಡೆಯಲಿರುವ ಏರ್‌ ಷೋಗೆ ವಿವಿಧ ರಾಜ್ಯಗಳಿಂದ ಹಲವು ಮಂದಿ ಭಾಗವಹಿಸಲಿದ್ದಾರೆ. ಕೋವಿಡ್‌ ಇರುವ ಕಾರಣಕ್ಕೆ ಏರ್‌ ಷೋ ಕಾರ್ಯಕ್ರಮವನ್ನು ಮುಂದೂಡಬೇಕು. ಮಂಗಳವಾರ ರಾಜ್ಯಪಾಲರ ಗಣರಾಜ್ಯೋತ್ಸವದ ಭಾಷಣ ಮಾಡುವ ವೇಳೆ ಕೋವಿಡ್‌ ಕೊನೆಯ ಹಂತದಲ್ಲಿ ಇದ್ದು, ಗಂಭೀರವಾಗಿರಲು ತಿಳಿಸಿದ್ದಾರೆ.

ಇಂತಹ ಸಮಯದಲ್ಲಿ ಏರ್‌ ಷೋ ಆಯೋಜನೆ ಮಾಡುವುದು ತಪ್ಪಾಗುತ್ತದೆ ಎಂದು ಹೇಳಿದರು. ತಾಳವಾಡಿಯನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳ ಬೇಕು ಎಂದು ವಾಟಾಳ್‌ ನಾಗರಾಜ್‌ ಸರ್ಕಾರವನ್ನು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next