Advertisement

ವಾಯುನೆಲೆ ಸುತ್ತ ಮಾಂಸ ಮಾರಾಟ ನಿಷೇಧ

02:03 AM Feb 02, 2019 | Team Udayavani |

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 20ರಿಂದ 24ವರೆಗೆ ಏರೋ ಇಂಡಿಯಾ ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ ಫೆ.1ರಿಂದ 28ರವರೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಮಾಂಸ ಮಾರಾಟ ಮಳಿಗೆಗಳಲ್ಲಿ ನೇತು ಹಾಕಿರುವ ಹಾಗೂ ಹೋಟೆಲ್‌ಗ‌ಳ ಹೊರಭಾಗದಲ್ಲಿ ಬಿಸಾಡಿರುವ ಮಾಂಸ ತ್ಯಾಜ್ಯಕ್ಕಾಗಿ ಹದ್ದುಗಳು ಬರುವ ಸಾಧ್ಯತೆಯಿರುತ್ತದೆ. ಹೀಗಾಗಿ ಬಾಗಲೂರು ಕ್ರಾಸ್‌, ವಿನಾಯಕ ನಗರ, ಕಟ್ಟಿಗೇನಹಳ್ಳಿ, ನಾಗೇನಹಳ್ಳಿ ಹಾಗೂ ಪುಟ್ಟೇನಹಳ್ಳಿ ಸುತ್ತಲಿನ ಮಾಂಸ ಮಾರಾಟ ಮಳಿಗೆಗಳಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next