Advertisement

Court ಕಲಾಪ ನೇರಪ್ರಸಾರ ಚಿತ್ರೀಕರಣಕ್ಕೆ ನಿರ್ಬಂಧ; ಪೂರ್ವಾನುಮತಿ ಅಗತ್ಯ: ಹೈಕೋರ್ಟ್‌ ಸೂಚನೆ

12:57 AM Sep 21, 2024 | Team Udayavani |

ಬೆಂಗಳೂರು: ನ್ಯಾಯಾಲಯದ ಕಲಾಪಗಳು ನಡೆಯುವ ವೇಳೆ ಕೆಲವು ನ್ಯಾಯಮೂರ್ತಿಗಳ ಸಾಂದರ್ಭಿಕ ಮಾತು, ಅಭಿಪ್ರಾಯಗಳ ವೀಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿರುವುದನ್ನು ಗಂಭೀರವಾಗಿ ಪರಿಗಣಿ ಸಿರುವ ಹೈಕೋರ್ಟ್‌, ಪೂರ್ವಾನು ಮತಿ ಪಡೆಯದೆ ವೀಡಿಯೋ ರೆಕಾರ್ಡಿಂಗ್‌ ಮತ್ತು ಅದರ ಹಂಚಿಕೆ ಮಾಡ ದಂತೆ ವೀಕ್ಷಕರಿಗೆ ಎಚ್ಚರಿಕೆಯ ಸೂಚನೆ ನೀಡಿದೆ.ಈ ಎಚ್ಚರಿಕೆಯ ಸೂಚನೆಗಳನ್ನು ಪ್ರತಿ ದಿನ ಕಲಾಪದ ನೇರ ಪ್ರಸಾರ (ಲೈವ್‌ ಸ್ಟ್ರೀಮಿಂಗ್‌) ಆರಂಭವಾಗುವುದಕ್ಕಿಂತ ಮುಂಚೆ ಹಾಕಲಾಗುತ್ತದೆ.

Advertisement

ಕರ್ನಾಟಕ ಹೈಕೋರ್ಟ್‌ 2022ರ ಜನವರಿ 1ರಿಂದ ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್‌ ಸ್ಟ್ರೀಮಿಂಗ್‌) ಮತ್ತು ರೆಕಾರ್ಡಿಂಗ್‌ ನಿಯಮಗಳು 2021ನ್ನು ಜಾರಿಗೊಳಿಸಿದೆ. ಇದರಲ್ಲಿ ಲೈವ್‌ ಸ್ಟ್ರೀಮಿಂಗ್‌, ರೆಕಾರ್ಡಿಂಗ್‌ ನಿಯಮ ಅಡಕ ಗೊಳಿಸಲಾಗಿದೆ.

ಈ ಸಂಬಂಧದ ನೋಟಿಸನ್ನು ಪ್ರತಿಯೊಂದು ಕೋರ್ಟ್‌ ಹಾಲ್‌ಗ‌ಳ ವೀಡಿಯೊ ಕಾನ್ಫರೆನ್ಸ್‌ ಪರದೆಯ ಮೇಲೆ ಕಲಾಪ ಆರಂಭಕ್ಕೂ ಮುನ್ನ ಮತ್ತು ಮಧ್ಯಾಹ್ನ ಭೋಜನದ ವೇಳೆಯಲ್ಲಿ ಪ್ರಸಾರ ಮಾಡಲಾಗಿದೆ.

ಅನುಮತಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆ ಹೊರತುಪಡಿಸಿ ಯಾವುದೇ ವ್ಯಕ್ತಿ/ ಸಂಸ್ಥೆ ಕಲಾಪದ ಲೈವ್‌ ಸ್ಟ್ರೀಮಿಂಗ್‌
ಅಥವಾ ಹೈಕೋರ್ಟ್‌ ಯೂಟ್ಯೂಬ್‌ ಚಾನಲ್‌ನಲ್ಲಿನ ವೀಡಿಯೋಗಳನ್ನು ರೆಕಾರ್ಡ್‌ ಆಗ‌ಲಿ, ಪ್ರಸರಣ ಮಾಡುವು ದಾಗಲಿ ಮಾಡುವಂತಿಲ್ಲ ಎಂದು ಹೇಳಲಾಗಿದೆ. ಇದು ಎಲ್ಲ ಸಂದೇಶ ಅಪ್ಲಿಕೇಶನ್‌ಗಳಿಗೆ ಅನ್ವಯಿಸಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next