Advertisement

ಪತಂಜಲಿಯ 5 ಔಷಧ ನಿಷೇಧ ವಾಪಸ್‌

07:20 PM Nov 13, 2022 | Team Udayavani |

ಡೆಹ್ರಾಡೂನ್‌: ಯೋಗ ಗುರು ಬಾಬಾ ರಾಮದೇವ್‌ ಅವರ ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ದಿವ್ಯಾ ಫಾರ್ಮಸಿಗೆ ಮಧುಮೇಹ, ರಕ್ತದೊತ್ತಡ, ಗಳಗಂಡ, ಗ್ಲುಕೋಮಾ ಮತ್ತು ಅಧಿಕ ಕೊಲೆಸ್ಟ್ರಾಲ್‌ಗೆ ಸಂಬಂಧಿಸಿದ ಐದು ಔಷಧಗಳ ಉತ್ಪಾದನೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದ ತನ್ನ ಆದೇಶವನ್ನು ಉತ್ತರಾಖಂಡದ ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರವು ಹಿಂಪಡೆದಿದೆ.

Advertisement

ನ.9ರಂದು ಹೊರಡಿಸಿದ್ದ ಆದೇಶದಲ್ಲಿ ದೋಷ ಗಮನಿಸಿದ ಉತ್ತರಾಖಂಡ ಆರೋಗ್ಯ ಪ್ರಾಧಿಕಾರದ ಔಷಧ ನಿಯಂತ್ರಕ ಜಿಸಿಎನ್‌ ಜಂಗಪಾಂಗಿ, “ಈ ಆದೇಶವನ್ನು ತರಾತುರಿಯಲ್ಲಿ ಹೊರಡಿಸಲಾಗಿದೆೆ.

ಈ ಆದೇಶವನ್ನು ಹೊರಡಿಸುವ ಮೊದಲು ಕಂಪನಿಗೆ ತನ್ನ ನಿಲುವು ಏನೆಂಬುದನ್ನು ತಿಳಿಸಲು ಸಮಯ ನೀಡಬೇಕಾಗಿತ್ತು,’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next