ಧನ್‌ಬಾದ್: ಮುಸ್ಲಿಂ ಮದುವೆ ಸಮಾರಂಭಗಳಲ್ಲಿ ಇನ್ನು ಮುಂದೆ ನೃತ್ಯ, ಜೋರಾದ ಸಂಗೀತ, ಡಿಜೆ ಮತ್ತು ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ಇಮಾಮ್ ಒಬ್ಬರು ಸೋಮವಾರ ಫತ್ವಾ ಹೊರಡಿಸಿದ್ದಾರೆ.
ಧನ್‌ಬಾದ್‌ನ ನಿರ್ಸಾ ಬ್ಲಾಕ್‌ನ ಸಬಿಲಿಬಡಿ ಜಾಮಾ ಮಸೀದಿಯ ಮುಖ್ಯ ಇಮಾಮ್ ಮೌಲಾನ ಮಸೂದ್ ಅಖ್ತರ್ ನೇತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.
ಇದನ್ನೂ ಓದಿ:ರೊನಾಲ್ಡೊ ಗೋಲು ನಾಟಕ!: ಉರುಗ್ವೆ ವಿರುದ್ಧ ಗೆದ್ದು ರೌಂಡ್-16 ಗೆ ಎಂಟ್ರಿ ಕೊಟ್ಟ ಪೋರ್ಚುಗಲ್
“ಡಿ.2ರಿಂದ ಅನ್ವಯವಾಗುವಂತೆ ಮುಸ್ಲಿಂ ಮದುವೆ ಸಮಾರಂಭಗಳಲ್ಲಿ ಇಸ್ಲಾಂಗೆ ವಿರುದ್ಧವಾಗಿ ನೃತ್ಯ, ಡಿಜೆ ಸಂಗೀತ ಮತ್ತು ಪಟಾಕಿ ಹೊಡೆಯುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ 5,100 ರೂ. ದಂಡ ವಿಧಿಸಲಾಗುವುದು. ಜತೆಗೆ ಸಮಯ ಶುಭವಲ್ಲದ ಕಾರಣ ರಾತ್ರಿ 11ರ ನಂತರ ಮದುವೆ ಮಾಡುವಂತಿಲ್ಲ. ಈ ನಿಯಮ ಮುರಿದರೂ ದಂಡ ವಿಧಿಸಲಾಗುವುದು,’ ಎಂದು ಫತ್ವಾ ಹೊರಡಿಸಲಾಗಿದೆ.