ತಿರುವನಂತಪುರ: ಕೆಲವೇ ದಿನಗಳ ಹಿಂದಷ್ಟೇ ಕೇರಳದ ಮುಸ್ಲಿಂ ಎಜುಕೇಶನ್ ಸೊಸೈಟಿಯಲ್ಲಿ ಬುರ್ಖಾ ನಿಷೇಧದ ಆದೇಶ ಹೊರಡಿಸಿದ್ದು, ಸಂಸ್ಥೆಯ ಮುಖ್ಯಸ್ಯ ಪಿಎ ಫಜಲ್ ಗಫೂರ್‌ಗೆ ಅನಾಮಿಕ ವ್ಯಕ್ತಿಗಳಿಂದ ಪ್ರಾಣ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಈ ಆದೇಶವನ್ನು ಹಿಂಪಡೆಯದಿದ್ದರೆ ಜೀವ ತೆಗೆಯುವುದಾಗಿ ಕರೆ ಮಾಡಿದವರು ಬೆದರಿಸಿದ್ದಾರೆ.
ಕರೆ ಮಾಡಿದಾತ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಗಫೂರ್ ಹೇಳಿದ್ದಾರೆ. ಎಪ್ರಿಲ್ 17ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಮುಖ ಮುಚ್ಚುವ ಯಾವುದೇ ಬಟ್ಟೆಯನ್ನು ಧರಿಸಬಾರದು ಎಂದು ಸೂಚಿಸಲಾಗಿದೆ.
Advertisement
ಮುಂದಿನ ಶೈಕ್ಷಣಿಕ ವರ್ಷದಿಂದ ಈ ಆದೇಶ ಜಾರಿಗೆ ಬರಲಿದ್ದು, ಸಾಮಾನ್ಯ ಸಂಪ್ರದಾಯಕ್ಕೆ ಅನುಗುಣವಾಗಿ ಉಡುಪು ಧರಿಸಬೇಕು ಎಂದು ಸೂಚಸಿಲಾಗಿದೆ. ಇದಕ್ಕೆ ಸಾಂಪ್ರದಾಯಿಕ ಮುಸ್ಲಿಂ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಶಿಕ್ಷಣ ಸಂಸ್ಥೆ ಇದಕ್ಕೆ ಬೆದರದೇ ತನ್ನ ನಿಲುವಿಗೆ ಬದ್ಧವಾಗಿದೆ.