ಮೈಸೂರು: ಬ್ರಾಂದಿ, ವಿಸ್ಕಿಯ ಅಮಲು ಕೆಲವೇ ಗಂಟೆಗಳಲ್ಲಿ ಇಳಿದು ಹೋಗುತ್ತೆ. ಆದರೆ, ಸಿದ್ದರಾಮಯ್ಯಗೆ ಹತ್ತಿರುವ ಅಧಿಕಾರದ ಅಮಲನ್ನು ಈ ಚುನಾವಣೆ ಯಲ್ಲಿ ಜನರು ಇಳಿಸುತ್ತಾರೆ ಎಂದು ವಿ. ಶ್ರೀನಿವಾಸ ಪ್ರಸಾದ್ ತರಾಟೆಗೆ ತೆಗೆದುಕೊಂಡರು.
ಸುನಿಲ್ ಬೋಸ್ ಅಭ್ಯರ್ಥಿ ಎನ್ನುತ್ತಾ 15 ಸಲ ಘೋಷಣೆ ಮಾಡಿಸಿ, ಹಾರೆ-ಪಿಕಾಸಿ ಹಿಡಿದುಕೊಂಡು ಬಂದ ಮಹದೇವಪ್ಪಯಾವ ಮುಖ ಇಟ್ಕೊಂಡು ಮತ ಕೇಳ್ತಾರೆ? ಜೆಡಿಎಸ್‌ನಲ್ಲಿದ್ದಾಗ ಒಂದು ತಾಪಂ ಸದಸ್ಯನನ್ನು ಗೆಲ್ಲಿಸಿಕೊಳ್ಳದ ಕಳಲೆ ಎಂಥಾ ನಾಯಕ?
ತನ್ನ ವಿರುದ್ಧ ಅಲ್ಪ ಅಂತರದಿಂದ ಸೋತವರು ಎನ್ನು ತ್ತಾರೆ. 2008ರಲ್ಲಿ 22 ಸಾವಿರ ಮತಗಳ ಅಂತರದಿಂದ ಗೆದ್ದಿದು ಜನರಿಗೆ ಗೊತ್ತಿಲ್ಲವೆ ಎಂದು ಎಂದು ಪ್ರಶ್ನಿಸಿದ ಶ್ರೀನಿವಾಸ್‌ಪ್ರಸಾದ್, ಅಭ್ಯರ್ಥಿ ಇಲ್ಲದೆ ದಿವಾಳಿ ಯಾಗಿರುವ ಕಾಂಗ್ರೆಸ್, ಸಾಲ ತೀರಿಸುವ ಸಲುವಾಗಿ ಕಳಲೆಯನ್ನು ಕರೆತಂದಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಉಪ ಚುನಾವಣೆ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಹತ್ತು ದಿನ ಠಿಕಾಣಿ ಹೂಡುತ್ತಾರಂತೆ, ಇದಕ್ಕಾಗಿ ಕೋಟ್ಯಧೀಶ್ವರ ಮಂತ್ರಿಗಳನ್ನೂ ಪಟ್ಟಿ ಮಾಡಿದ್ದಾರೆ ಎಂದು ತಿಳಿಸಿದರು. ಮಲ್ಲಿಕಾರ್ಜುನ ಖರ್ಗೆ ತಂಜಾವೂರು ಗೊಂಬೆ ಇದ್ದಂಗೆ ಹೆಂಗೆ ಎಸೆದರೂ ನಿಂತು ಕೊಳ್ಳುತ್ತದೆ.
ಹೀಗಾಗಿಯೇ ಅರಸು ಕಾಲದಿಂದ ಒಂದಲ್ಲ ಒಂದು ಅಧಿಕಾರ ಅನುಭವಿಸುತ್ತಾ ಬಂದಿ ದ್ದಾರೆ. ಬಂಗಾರಪ್ಪಮಂತ್ರಿಮಂಡಲಕ್ಕೆ ಸೇರಿಸುವಂತೆ ದಿಲ್ಲಿಯಲ್ಲಿ ತಮ್ಮ ಮನೆಬಾಗಿಲಿಗೆ ಬಂದಿದ್ದರು, ಅವರೆಂತ ಸ್ವಾಭಿಮಾನಿ, ಕುಮಾರಕೃಪಾದಲ್ಲಿ ಅಳುತ್ತಾ ಕುಳಿತಿದ್ದ ಖರ್ಗೆಯನ್ನು ಗುಂಡೂರಾಯರಿಗೆ ಪರಿಚಯಿಸಿದ್ದೇ ತಾನು ಎಂದರು.