Advertisement

Balpa ಗ್ರಾಮೋತ್ಸವ; 13 ಕೋಟಿ ಮಂದಿ ಬಡತನ ರೇಖೆಯಿಂದ ಮೇಲಕ್ಕೆ: ಕೇಂದ್ರ ಸಚಿವ ಭಗವಂತ ಖೂಬ

12:34 AM Jan 11, 2024 | Team Udayavani |

ಸುಬ್ರಹ್ಮಣ್ಯ: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸರಕಾರದ ಯೋಜನೆಗಳ ಸಮಗ್ರ ಅನುಷ್ಠಾನ ಆಗುತ್ತಿದೆ. ಮೋದಿ ಸರಕಾರದ ಯೋಜನೆಗಳಿಗೆ ನಾವೆಲ್ಲ ಕೈಜೋಡಿಸಿ ನಮ್ಮ ಸಹಕರಿಸುವುದೇ ದೇಶದ ಅಭಿವೃದ್ಧಿಗೆ ನಾವು ನೀಡುವ ಕೊಡುಗೆ.

Advertisement

ಮೋದಿ ಪ್ರಧಾನಿಯಾದ ಬಳಿಕ 13 ಕೋಟಿ ಬಡವರು ಬಡತನ ರೇಖೆಗಿಂತ ಹೊರಬಂದಿದ್ದಾರೆ ಎಂದು ಕೇಂದ್ರದ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ರಾಸಾಯನಿಕಗಳು ಹಾಗೂ ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವ ಭಗವಂತ್‌ ಖೂಬ ಹೇಳಿದರು.

ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ – ಕೇನ್ಯ, ಗ್ರಾಮ ಉತ್ಸವ ಸಮಿತಿ ಆಶ್ರಯದಲ್ಲಿ ಬಳ್ಪ ಶಾಲಾ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂಸದ ನಳಿನ್‌ ಅವರ “ಸಂಸದರ ಆದರ್ಶ ಗ್ರಾಮ ಬಳ್ಪದ ಗ್ರಾಮೋತ್ಸವ’ ಹಾಗೂ 8 ಕೋಟಿ ರೂ. ವೆಚ್ಚದ 6 ಕಾಮಗಾರಿಗಳ ಲೋಕಾರ್ಪಣೆಯನ್ನು ನೆರವೇರಿಸಿ ಅವರು ಮಾತನಾಡಿದರು.

ನಳಿನ್‌ ಕುಮಾರ್‌ ಕಟೀಲು ಅವರು ಬಳ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಶ್ಲಾ ಸಿದ ಅವರು, ಇಲ್ಲಿನ ಅಭಿವೃದ್ಧಿ ಕೆಲಸ ಇಲ್ಲಿಗೆ ಮಾತ್ರ ಸೀಮಿತವಾಗದೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದು ದೇಶದ ಗ್ರಾ.ಪಂ. ಸದಸ್ಯರು ಇಲ್ಲಿಗೆ ಭೇಟಿ ನೀಡುವಂತಾಗಬೇಕು ಎಂದು ಹಾರೈಸಿದರು.

ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸದ ನಳಿನ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ ಸಿಂಹ ನಾಯಕ್‌, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್‌. ಅಂಗಾರ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್‌ ರಾಂ ಸುಳ್ಳಿ, ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್‌ ಕಾರ್ಜ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ರೋನಿ ರಾಡ್ರಿಗಸ್‌ ಬಂಟ್ವಾಳ, ಎಂಆರ್‌ಪಿಎಲ್‌ನ ಶ್ರೀಕೃಷ್ಣ ರಾಜ್‌, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್‌ ಬುಡೆಂಗಿ, ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಬಿರ್ಕಿ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್‌ ಕಂಜಿಪಿಲಿ ಮೊದಲಾದವರಿದ್ದರು.

Advertisement

ಗ್ರಾಮ ವಿಕಾಸ ಪ್ರತಿಷ್ಠಾನ ಅಧ್ಯಕ್ಷ ವಿನೋದ್‌ ಬೊಳ್ಮಲೆ ಪ್ರಸ್ತಾವನೆಗೈದರು. ಸಮಿತಿ ಸದಸ್ಯ ಸುಬ್ರಹ್ಮಣ್ಯ ಕುಳ ಸ್ವಾಗತಿಸಿದರು. ದೇವದಾಸ ರೈ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next