Advertisement

ಪಾಕ್ ಸೇನಾ ಪಡೆ ಮೇಲೆ ಬಲೂಚ್ ಉಗ್ರರ ದಾಳಿ : ಕ್ಯಾಪ್ಟನ್ ಸೇರಿ 5 ಯೋಧರು ಬಲಿ

08:42 PM Jan 01, 2023 | Team Udayavani |

ಇಸ್ಲಾಮಾಬಾದ್ : ಪಾಕ್ ನ ಬಲೂಚಿಸ್ಥಾನ್ ಪ್ರಾಂತ್ಯದಲ್ಲಿ ಜನವರಿ 1 ರಂದು ನಡೆದ ಹೊಸ ಭಯೋತ್ಪಾದಕ ದಾಳಿಯಲ್ಲಿ ಐವರು ಪಾಕಿಸ್ಥಾನಿ ಸೈನಿಕರು ಸಾವನ್ನಪ್ಪಿದ್ದಾರೆ.

Advertisement

ಬಲೂಚಿಸ್ಥಾನದ ಕೊಹ್ಲು ಪ್ರದೇಶದಲ್ಲಿ ಪಾಕಿಸ್ಥಾನಿ ಸೈನಿಕರ ಮೇಲೆ ಐಇಡಿ ದಾಳಿ ನಡೆಸಲಾಗಿದ್ದು. ಪಾಕಿಸ್ಥಾನಿ ಸೇನೆಯ ಬೆಂಗಾವಲು ಪಡೆಯನ್ನು ಉಗ್ರರು ಗುರಿಯಾಗಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ದಾಳಿಯಲ್ಲಿ ಕ್ಯಾಪ್ಟನ್ ಸೇರಿದಂತೆ ಐವರು ಯೋಧರು ಸಾವನ್ನಪ್ಪಿದ್ದಾರೆ, ಆರು ಮಂದಿ ಗಾಯಗೊಂಡಿದ್ದಾರೆ. 48 ಗಂಟೆಗಳಲ್ಲಿ ಬಲೂಚಿಸ್ಥಾನದಲ್ಲಿ ಪಾಕಿಸ್ಥಾನಿ ಪಡೆಗಳನ್ನು ಗುರಿಯಾಗಿಸಿಕೊಂಡು ನಡೆದ ಮೂರನೇ ಭಯೋತ್ಪಾದಕ ಘಟನೆ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next