Advertisement

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

05:10 PM Dec 25, 2024 | Team Udayavani |

ಲಕ್ನೋ: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಮಂಗಳವಾರ (ಡಿ.24 ರಂದು) ತಡರಾತ್ರಿ ಸಂತ್ರಸ್ತ ಬಾಲಕಿ ಹಾಗೂ ಕುಟುಂಬದ ನಡುವೆ  ಕಲಹವಾಗಿದ್ದು, ಆ ಬಳಿಕ ಬಾಲಕಿ ಆಟೋ ರಿಕ್ಷಾದಲ್ಲಿ ಮನೆಯಿಂದ ಹೊರಟಾಗ ಬಾಲಕಿಯ ಮೇಲೆ ಇಬ್ಬರು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಿಎನ್‌ಎಸ್‌ ಮತ್ತು ಪೋಕ್ಸೊ ಕಾಯ್ದೆಯಡಿ  ಪ್ರಕರಣ ದಾಖಲಿಸಿಕೊಂಡು ಮಂಟು ಯಾದವ್ (19) ಮತ್ತು ಅಮಿತ್ ಪ್ರಜಾಪತಿ (22)  ಎಂಬುವವರನ್ನು ಬಂಧಿಸಿದ್ದಾರೆ.

“ಬಾಲಕಿಗೆ ಆಮಿಷ ಒಡ್ಡಿ ಅತ್ಯಾಚಾರವೆಸಯಲಾಗಿದೆ. ಆರೋಪಿಗಳಾದ ಮಂಟು ಯಾದವ್ ಮತ್ತು ಅಮಿತ್ ಪ್ರಜಾಪತಿಯನ್ನು ಬುಧವಾರ (ಡಿ.25 ರಂದು) ಬಂಧಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು  ಎಸ್‌ಎಚ್‌ಒ ರಾಕೇಶ್ ಸಿಂಗ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next