Advertisement
ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ಚಾಲನೆಯಲ್ಲಿರುವ ತಾಲೂಕು ಪಂಚಾಯಿತಿ ಹಂತವನ್ನು ಇತ್ತೀಚಿನ ದಿನಗಳಲ್ಲಿ ರದ್ದುಪಡಿಸಬೇಕೆಂಬ ಚರ್ಚೆ ಜೋರಾಗಿ ಕೇಳಿಬರುತ್ತಿದೆ. ಅ ಧಿಕಾರ ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಎಂಬ ಮೂರುಹಂತಗಳ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆದರೆ, ಕೇಂದ್ರ, ರಾಜ್ಯ ಸರ್ಕಾರದಿಂದ ಅನುದಾನಗಳು ನೇರವಾಗಿ ಗ್ರಾಮ ಪಂಚಾಯಿತಿಗೆ ತಲುಪುವ ಹಿನ್ನೆಲೆಯಲ್ಲಿ ಮಧ್ಯದಲ್ಲಿನ ತಾಲೂಕು ಪಂಚಾಯಿತಿ ಗೌಣವಾಗಿದ್ದು, ಈ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ರದ್ದುಪಡಿಸುವ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ.
Related Articles
Advertisement
ಅಷ್ಟು ಸುಲಭವಿಲ್ಲ: ತಾಪಂ ವ್ಯವಸ್ಥೆಯನ್ನು ರದ್ದುಗೊಳಿಸುವುದು ಅಷ್ಟು ಸುಲಭವಿಲ್ಲ. ಕಾರಣ, ಸಂವಿಧಾನದ 73ನೇ ತಿದ್ದುಪಡಿ ಮೂಲಕ ಜಿಪಂ, ತಾಪಂ, ಗ್ರಾಪಂ ಮೂರು ಹಂತದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ ಇದೀಗ ತಾಪಂ ರದ್ದುಗೊಳಿಸಿ ಎರಡು ಹಂತದ ವ್ಯವಸ್ಥೆ ಜಾರಿಗೆ ತರಬೇಕಾದರೆ, ಕೇಂದ್ರದಲ್ಲಿ ಪುನಃ 73ನೇ ವಿ ಧಿಗೆ ತಿದ್ದುಪಡಿ ಮಾಡಬೇಕು. ಸದ್ಯ ಹಾಲಿ ಸದಸ್ಯರ ಅವಧಿ ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಂಡು, ನೂತನ ಸದಸ್ಯರ ಆಯ್ಕೆಗೆ ಚುನಾವಣೆ ಸಮೀಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ತಾಪಂ ರದ್ದು ಅಷ್ಟು ಸುಲಭವಿಲ್ಲ ಎಂದು ತಾಪಂ ಅಧಿ ಕಾರಿಯೊಬ್ಬರು ಸ್ಪಷ್ಟಪಡಿಸಿದರು.
ತಾಪಂ ಸದಸ್ಯರಿಗೆ ಅನುದಾನ ಹೆಚ್ಚಿಸಿ ಅ ಧಿಕಾರ ನೀಡಿ ಮುಂದುವರೆಸಿದರೆ ಒಳ್ಳೆಯದು. ಇಲ್ಲದಿದ್ದಲ್ಲಿ ರದ್ದುಗೊಳಿಸುವುದು ಸಹ ಒಳ್ಳೆಯದು. ಆಶ್ರಯ ಸಮಿತಿಯಲ್ಲಿ ಸದಸ್ಯತ್ವ ಇಲ್ಲ. ವರ್ಷಕ್ಕೆ ನಿರೀಕ್ಷಿಸಿದಷ್ಟು ಅನುದಾನ ಬರಲ್ಲ. ಅ ಧಿಕಾರವೂ ಇಲ್ಲ. ಇನ್ನು ಏತಕ್ಕೆ ತಾಪಂ ಇರಬೇಕು. ಕೇವಲ ಮರ್ಯಾದೆ, ಪ್ರತಿಷ್ಠೆಗಾಗಿ ನಾವು ತಾಪಂ ಸದಸ್ಯರಾಗಿರಬೇಕು. ವರ್ಷಕ್ಕೆ ಬರುವ ಕೇವಲ 4 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ, ಪೈಪ್‌ಲೈನ್, ಶಾಲಾ ಕೊಠಡಿ ರಿಪೇರಿ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ, ತೃಪ್ತಿ ನೀಡುತ್ತಿಲ್ಲ. ತಾಪಂಗೆ ಪ್ರತ್ಯೇಕ ಅನುದಾನ ನೀಡಬೇಕು.
ಎಸ್.ಆರ್.ಲೀಲಾವತಿ ಗಾದಿಲಿಂಗನಗೌಡ, ಅಧ್ಯಕ್ಷರು, ತಾಪಂ, ಬಳ್ಳಾರಿ.
ಜಿಪಂ, ತಾಪಂ, ಗ್ರಾಪಂಗಳಿಗೆ ಅ ಧಿಕಾರ ಹಂಚಿಕೆಯಿಂದ ತೊಂದರೆ ಏನು ಇಲ್ಲ. ಆದರೆ, ಅನುದಾನ ಇನ್ನಷ್ಟು ಹೆಚ್ಚಿಸಿದರೆ ಅನುಕೂಲವಾಗಲಿದೆ. ಕೊಟ್ಟೂರು ಕೂಡ್ಲಿಗಿ ತಾಲೂಕಿನಲ್ಲಿದ್ದಾಗ ವರ್ಷಕ್ಕೆ ಕೇವಲ 3.5 ಲಕ್ಷ ರೂ. ಅನುದಾನ ಬರುತ್ತಿತ್ತು. ಆಗ ಅಷ್ಟು ಸ್ವಲ್ಪ ಅನುದಾನದಲ್ಲಿ ಕ್ಷೇತ್ರದ ಮೂರು ಗ್ರಾಪಂಗಳಲ್ಲಿ ತಲಾ ಒಂದೊಂದು ಲಕ್ಷ ರೂ. ಹಂಚಿಕೆ ಮಾಡಿ ಅಭಿವೃದ್ಧಿ ಕಾರ್ಯ ಮಾಡಿದಲ್ಲಿ ಯಾರಿಗೆ ಗೊತ್ತಾಗಲಿದೆ. ರದ್ದುಪಡಿಸುವುದಕ್ಕಿಂತ ಅನುದಾನ ಹೆಚ್ಚಿಸಿ ಮುಂದುವರೆಸುವುದು ಒಳ್ಳೆಯದು.
ಎಸ್.ಗುರುಮೂರ್ತಿ, ಅಧ್ಯಕ್ಷರು, ತಾಪಂ, ಕೊಟ್ಟೂರು.
-ವೆಂಕೋಬಿ ಸಂಗನಕಲ್ಲು
ಇದನ್ನೂ ಓದಿ : ಪೊಕೊ ಸಿ3 : ಒಂದು ಮಿಲಿಯನ್ ಯೂನಿಟ್‌ಗಳ ಮಾರಾಟ