Advertisement
ಸಿರುಗುಪ್ಪ: ಮೇ ತಿಂಗಳಿನಲ್ಲಿಯೇ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ನೋಡಿದಲ್ಲೆಲ್ಲ ಈಗ ಕೆಂಪು ಪುಷ್ಪಗಳು ಸೂಜಿಗಲ್ಲಿನಂತೆ ಗಮನ ಸೆಳೆಯುತ್ತಿವೆ. ಮೇಫÉವರ್ ಎಂದೆ ಕರೆಯಲ್ಪಡುವ ಗುಲ್‌ಮೊಹರ್ ಹೂ ಅರಳುವ ಸಮಯ ಇದಾಗಿದ್ದು, ನಗರ ಸೇರಿದಂತೆ ಗ್ರಾಮ, ರಸ್ತೆ, ಹೊಲ, ಗದ್ದೆ, ಶಾಲೆಗಳ ಬಳಿ ಗುಲ್‌ಮೊಹರ್ ಅರಳಿರುವುದು ಈಗ ಕಾಣ ಸಿಗುತ್ತದೆ.
Related Articles
Advertisement
“ಮೇ, ಜೂನ್, ಜುಲೈಗಳಲ್ಲಿ ಹೂಗಳಿಂದ ಜನರನ್ನು ಆಕರ್ಷಿಸುವ ಈ ಮರ ವರ್ಷಪೂರ್ತಿ ಜನರಿಗೆ ನೆರಳು ನೀಡುತ್ತವೆ. ಬೇಸಿಗೆಯ ದಾಹ ನೀಗಲು ಸಂಜೆ ಮತ್ತು ಬೆಳಿಗ್ಗೆ ವಾಯು ವಿಹಾರಿಗಳು ನಡೆದಾಡುವಾಗ ಮರದ ನೆರಳಿನಲ್ಲಿ ಸ್ವಲ್ಪ ಸಮಯ ಕುಳಿತು ವಿಶ್ರಮಿಸುತ್ತಾರೆ. ನಗರದ ಕೃಷ್ಣ ನಗರದ ಬಡಾವಣೆಯಲ್ಲಿ ಗುಲ್‌ಮೊಹರ್ ಲತೆಗಳು ಹಸಿರು ವೃಕ್ಷಕ್ಕೆ ಕೆಂಪು ಛತ್ರಿ ತೊಟ್ಟಂತೆ ಜನರನ್ನು ಆಕರ್ಷಿಸುತ್ತಿವೆ’ ಎನ್ನುತ್ತಾರೆ ಪತ್ರಿಕಾ ವಿತರಕ ಹುಸೇನ್‌ಸಾಬ್ ಬೀಜದಿಂದ ಉತ್ಪಾದಿಸುವ ಅಂಟು, ಎಣ್ಣೆಯನ್ನು, ಜವಳಿ, ಚರ್ಮ, ಸಾಬೂನು, ಔಷ ಧಿ ಮೊದಲಾದ ಉದ್ದಿಮೆಗಳಲ್ಲಿ ಬಳಸಲಾಗುತ್ತದೆ.
ಈ ವೃಕ್ಷದ ಮೂಲ ಮಡಗಾಸ್ಕರ್. ಸೆಭಾಷಿಯೇ ಕುಟುಂಬದ ಸೀತಂತಿನಿಯೋಯಿಡೆ ಉಪಕುಟುಂಬಕ್ಕೆ ಸೇರಿದೆ. ಇದರ ಸಸ್ಯ ಶಾಸ್ತ್ರಿಯ ಹೆಸರು “ಡೆಲೋನಿಕ್ಸ್ ರೇಜಿಯಾ’, ಕನ್ನಡದಲ್ಲಿ ಕತ್ತಿಕಾಯಿ ಮರ, ಹಿಂದಿಯಲ್ಲಿ ಗುಲ್‌ಮೊಹರ್, ಬೆಂಕಿಮರ, ದೊಡ್ಡರತ್ನಗಂದಿ, ಸೀಮೆ ಸಂಕೇಶ್ವರ, ಕೃಷ್ಣಾಚುರ ರಾಧಾಚುರ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.