Advertisement

ನಿರಾಶ್ರಿತರಿಗೆ ಪಿಂಚಣಿ ಸೌಲಭ್ಯಕ್ಕೆ ಕ್ರಮ

04:44 PM Feb 06, 2021 | Team Udayavani |

ಬಳ್ಳಾರಿ: ನಿರಾಶ್ರಿತರಿಗೆ ಪಿಂಚಣಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿ ಕಾರಿಗಳು ಹಾಗೂ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾಧ್ಯಕ್ಷ ಪವನಕುಮಾರ್‌ ಮಾಲಪಾಟಿ ಅವರು ಭರವಸೆ ನೀಡಿದರು.

Advertisement

ನಗರದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಜಿಪಂ, ಸಮಾಜಕಲ್ಯಾಣ ಇಲಾಖೆ, ಡಾ| ವಿಜಯ ನಾಗರಾಜ್‌ ಕಣ್ಣಿನ ಆಸ್ಪತ್ರೆ ಮತ್ತು ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿರಾಶ್ರಿತರಿಗೆ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಬಿರದಲ್ಲಿ ಈಗಾಗಲೇ 122 ಜನ ನಿರಾಶ್ರಿತರಿಗೆ ಕಣ್ಣಿನ ತಪಾಸಣೆ ಮಾಡಿಸಿದ್ದು, ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ತಿಳಿಸಿದ ಡಿಸಿ ಮಾಲಪಾಟಿ ಅವರು ಈ ನಿರಾಶ್ರಿತರ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಆಧಾರ್‌ಕಾರ್ಡ್‌ ಮಾಡಿಸಲಾಗಿದೆ ಎಂದರು. ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಅನೇಕ ಸಮಾಜಮುಖೀ ಕಾರ್ಯಗಳನ್ನು ಮಾಡುತ್ತಿದ್ದು, ರೆಡ್‌ ಕ್ರಾಸ್‌ ಸ್ವಯಂಸೇವಕರ ಸೇವಾಕಾರ್ಯ ಶ್ಲಾಘನೀಯ ಎಂದರು.
ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಆರೋಗ್ಯ ಉಪಸಮಿತಿ ಅಧ್ಯಕ್ಷ ಡಾ| ನಾಗರಾಜ ಮಾತನಾಡಿ ಇಂದು ತಪಾಸಣೆ ಮಾಡಿಸಲಾದವರಲ್ಲಿ 90 ಜನರಿಗೆ ಉಚಿತವಾಗಿ ಕನ್ನಡಕ ನೀಡಲಾಗುವುದು ಮತ್ತು 25 ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದರು.

ವಿಮ್ಸ್‌ ನಿರ್ದೇಶಕ ಹಾಗೂ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಸಭಾಪತಿ ಡಾ| ಗಂಗಾಧರಗೌಡ, ಉಪಸಭಾಪತಿ ಡಾ| ಎಸ್‌.ಜೆ.ವಿ.ಮಹಿಪಾಲ್‌, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಡಾ| ವಿಜಯ ನಾಗರಾಜ್‌ ಮತ್ತು ಅವರ ತಂಡ ನೇತ್ರ ತಜ್ಞ ಮಂಜುನಾಥ್‌, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಎಂ.ಎ. ಷಕೀಬ್‌, ನಿರಾಶ್ರಿತರ ಪರಿಹಾರ ಕೇಂದ್ರದ ಅ ಧೀಕ್ಷಕ ಅರುಣ್‌, ಬೆಪಾರ್‌ ಮಹಮ್ಮದ್‌ ಇಜಾಝ್, ಪಿ.ವಾಸು, ಸಮೀಮ್‌ ಜಕಾಲಿ, ಮಂಜನಾಥ್‌ ಮತ್ತು ಎಂ.ವಲಿ ಬಾಷಾ ಇತರರು ಉಪಸ್ಥಿತರಿದ್ದರು.

ಓದಿ : ಕೊಲೆಗೆ ಕಾರಣವಾಯ್ತು 20 ರೂ. ಇಡ್ಲಿ: ತಳ್ಳುಗಾಡಿ ವ್ಯಾಪಾರಿಯ ಕೊಲಗೈದ ಮೂವರು

Advertisement
Advertisement

Udayavani is now on Telegram. Click here to join our channel and stay updated with the latest news.

Next