ಹೊಸಪೇಟೆ: ಗ್ರಾಮಕ್ಕೆ ಹೆಚ್ಚುವರಿ ಬಸ್ ಸೌಲಭ್ಯ·ಕಲ್ಪಿಸಬೇಕು ಎಂದು ಆಗ್ರಹಿಸಿ ತಾಲೂಕಿನಕಮಲಾಪುರದ ಸೀತರಾಮ ತಾಂಡಾದಲ್ಲಿವಿದ್ಯಾರ್ಥಿಗಳು ದಿಢೀರ್ ಬಸ್ ತಡೆದು ಪ್ರತಿಭಟನೆನಡೆಸಿದ ಘಟನೆ ಶುಕ್ರವಾರ ನಡೆಯಿತು. ಅಗತ್ಯಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಸರಿಯಾದಸಮಯಕ್ಕೆ ಶಾಲಾ-ಕಾಲೇಜ್‌ಗೆ ಹೋಗದೇ,ಶಿಕ್ಷಣದಿಂದ ದೂರ ಉಳಿವಂತಾಗಿದೆ.ಸುಗ್ಗೇನಹಳ್ಳಿ-ಹೊಸಪೇಟೆ ಬರೋ ಬಸ್‌ಭರ್ತಿಯಾಗಿ ಬರುವುದರಿಂದ ವಿದ್ಯಾರ್ಥಿಗಳು,ಬಸ್ಸಿನಲ್ಲಿ ಹೋಗಲು ಸಾಧ್ಯವಾಗುವುದಿಲ್ಲ ಎಂದುಅಳಲು ತೋಡಿಕೊಂಡರು. ತಾಲೂಕಿನ ನಲ್ಲಾಪುರ,ಸೀತಾರಾಮಂಡಾ, ಚಿನ್ನಾಪುರ ಗ್ರಾಮಗಳಿಂದಹೆಚ್ಚು ವಿದ್ಯಾರ್ಥಿಗಳು ಕಮಲಾಪುರ, ಹೊಸಪೇಟೆಗೆಶಾಲಾ-ಕಾಲೇಜ್‌ಗೆ ಹೋಗುತ್ತಾರೆ. ಬೆಳಗ್ಗೆ 7.30ಹೊಸಪೇಟೆ ಹೋದರೆ, ಸಂಜೆ 6.30 ವಾಪಾಸ್‌ಆಗುತ್ತದೆ. ಒಂದೇ ಬಸ್ ಸಂಚಾರಿಸುತ್ತದೆ. ಇದನ್ನುಬಿಟ್ಟರೆ, ನೆಲ್ಲಾಪುರದಿಂದ 12 ಕಿಮೀ, ಸೀತಾರಾಮತಾಂಡಾದಿಂದ 5 ಕಿಮೀ ದೂರದಲ್ಲಿ ಕಮಲಾಪುರಕ್ಕೆಹೋಗಬೇಕು. ಅಷ್ಟೋತ್ತಿಗೆ ನಮ್ಮ ಸಮಯವೇಮುಗಿಯುತ್ತದೆ. ಆದ್ದರಿಂದ ಶಾಲಾ-ಕಾಲೇಜುಸಮಯಕ್ಕೆ ಹೆಚ್ಚುವರಿ ಬಸ್ ಓಡಿಸಬೇಕು ಎಂದುವಿದ್ಯಾರ್ಥಿಗಳು ಆಗ್ರಹಿಸಿದರು. ವಿದ್ಯಾರ್ಥಿಗಳಾದಅಂಬರೀಶ್, ನಿತೀನ್, ಧನಂಜಯ್, ಶಿವು, ಭರತ್‌ಸುಮಾ, ಶ್ರುತಿ, ಸುವರ್ಣ, ಅಶ್ವಿನಿ, ಮಮತಾಇದ್ದರು.
ಓದಿ :
ಸರ್ಕಾರದ ಅನುಮೋದನೆ ಕಾನೂನು ಬಾಹಿರ