ರೈತರ ಎಲ್ಲ ಜಮೀನಿನ ಪ್ಲಾಟ್‌ಗಳಿಗೆ ಆಧಾರ್‌ಕಾರ್ಡ್ ಸಂಖ್ಯೆಯನ್ನು ಜೋಡಣೆ ಮಾಡಲು ಕಂದಾಯ ಅ ಧಿಕಾರಿಗಳು, ಗ್ರಾಮಲೆಕ್ಕಾ ಧಿಕಾರಿಗಳು, ಕೃಷಿ ಅ ಧಿಕಾರಿಗಳು, ತೋಟಗಾರಿಕೆ ಇಲಾಖೆ ಅ ಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು, ರೈತರ ಜಮೀನಿನ ಪ್ಲಾಟ್
ಗಳಿಗೆ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಆಗದಿದ್ದರೆ, ಸರ್ಕಾರದಿಂದ ರೈತರಿಗೆ ದೊರೆಯುವ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ ಎಂದರು.
Advertisement
ರೈತರಿಗೆ ಮುಖ್ಯವಾಗಿ ಕೃಷಿ ಇಲಾಖೆಯಿಂದ ದೊರೆಯುವ ಸಹಾಯಧನ, ಅತಿವೃಷ್ಟಿ, ಅನಾವೃಷ್ಟಿಯಿಂದ ಬರುವ ಪರಿಹಾರ ಧನ ಸೇರಿದಂತೆ ವಿವಿಧ ಸೌಲಭ್ಯಗಳು ದೊರೆಯುವುದಿಲ್ಲ, ಆದ್ದರಿಂದ ಎಲ್ಲಾ ಅ ಧಿಕಾರಿಗಳು ಬಾಕಿ ಇರುವ ರೈತರ ಸರ್ವೇ ನಂಬರ್‌ಗಳ ಜಮೀನಿನ ಪ್ಲಾಟ್ಗಳಿಗೆಆಧಾರ್ ಸಂಖ್ಯೆಯನ್ನು ಜೋಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಸರ್ಕಾರ ನಿಗ ಪಡಿಸಿದ ಅವಧಿಯೊಳಗೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯ ಮುಗಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ತಹಶೀಲ್ದಾರ್ ಎಸ್.ಬಿ.ಕೂಡಲಗಿ ಮಾತನಾಡಿದರು. ಕಂದಾಯ ಅ ಧಿಕಾರಿ ಬಸವರಾಜ್, ಮಂಜುನಾಥ, ಶೆವಲಿ, ಅನಂತಕುಮಾರ್‌ಶೆಟ್ಟಿ, ಗ್ರಾಮಲೆಕ್ಕಾ ಧಿಕಾರಿಗಳಾದ ರಾಮಪ್ಪ, ಎರ್ರಿಸ್ವಾಮಿ, ಪರಮೇಶಪ್ಪ, ವಿರುಪಾಕ್ಷಪ್ಪ, ಶಂಕ್ರಪ್ಪ, ಶ್ರೀಶೈಲ, ಕೃಷಿ ಅ ಧಿಕಾರಿ ಗರ್ಜೆಪ್ಪ ಇದ್ದರು.