Advertisement

ಮಾಚಿದೇವರ ಕಾಯಕ-ವಚನ ಮಾದರಿ

02:14 PM Feb 02, 2021 | Team Udayavani |

ಬಳ್ಳಾರಿ: ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಸಭಾಂಗಣದಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ಸೋಮವಾರ ಸರಳವಾಗಿ ಆಚರಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣವರ್‌ ಅವರು ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Advertisement

ಬಳಿಕ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಸಮಾನತೆಯ ಕ್ರಾಂತಿಗೆ, ಸಮ ಸಮಾಜದ ನಿರ್ಮಾಣಕ್ಕಾಗಿ ದುಡಿದವರಲ್ಲಿ ಮಡಿವಾಳ ಮಾಚಿದೇವ ಶರಣರು ಕೂಡ ಒಬ್ಬರು. ಮೇಲು-ಕೀಳು ಎನ್ನುವುದನ್ನು ಜನರಲ್ಲಿ ಕಿತ್ತು ಹಾಕುವ ಕಾರ್ಯವನ್ನು ಮಡಿವಾಳ ಮಾಚಿದೇವರು ಮಾಡಿದ್ದಾರೆ. ಅವರ ಕಾಯಕ, ಅವರ ವಚನಗಳು ಇತರರಿಗೆ ಮಾದರಿಯಾಗಿದ್ದು, ಇಂದಿನ ಯುವ

ಜನತೆ ಶರಣರ ಬದುಕಿನ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು.
ಸಮಾನತೆಯ ಸಮಾಜ ಮತ್ತು ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಇವರ ಬದುಕೇ ಒಂದು ಮಾರ್ಗದರ್ಶನ. ಶರಣರ ವಿಚಾರಧಾರೆಗಳನ್ನು ನೆನೆಯುವ ಕೆಲಸ ಮಾಡುವ ಮುಖಾಂತರ ಇಂದಿನ ಯುವ ಸಮೂಹಕ್ಕೆ ಅವರ ಬದುಕಿನ ಬಗ್ಗೆ ತಿಳಿಸುವ ಕೆಲಸ ಆಗುತ್ತಿದೆ. ಕೊವಿಡ್‌ ಹಿನ್ನಲೆಯಲ್ಲಿ ಸರ್ಕಾ ರದ ಮಾರ್ಗಸೂಚಿ ಅನ್ವಯ ಈ ಬಾರಿ ಸರಳವಾಗಿ ಜಯಂತಿಯನ್ನು ಆಚರಿಸಲಾಗಿದೆ. ಮುಂದಿನ ವರ್ಷ ತುಂಬಾ ಅದ್ದೂರಿಯಾಗಿ ಜಯಂತಿಯನ್ನು ಆಚರಿಸಲಾಗುವುದು ಎಂದರು.

ಬಿಜೆಪಿ ಮುಖಂಡ ಅನಿಲ್‌ ನಾಯುಡು ಮಾತನಾಡಿ, ಮಡಿವಾಳ ಮಾಚಿದೇವರು ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ. ಸಮಾಜದ ಏಳಿಗೆಗೆ, ಸಮಾನತೆಗೆ ಅವರು ನಿರ್ವಹಿಸಿದ ಪಾತ್ರ ಮಹತ್ವದ್ದು. ಅವರ ಸಂದೇಶ ಮತ್ತು ವಿಚಾರಗಳನ್ನು ಸಮಾಜದ ಎಲ್ಲ ಜನರು ಸ್ವೀಕರಿಸುತ್ತಿದ್ದರು. ಮುಂದೆ ಎಲ್ಲ ಸಮುದಾಯದರು ಈ ಜಯಂತಿಯಲ್ಲಿ ಪಾಲ್ಗೊಳ್ಳುವಂತಾಗಲಿ. ಸಮುದಾಯದ ಯುವಕರು ಶಿಕ್ಷಣ
ಪಡೆಯುವ ಮೂಲಕ ಸಮಾಜ ಮುನ್ನಲೆಗೆ ಬರಬೇಕು. ಶರಣರ ಜಯಂತಿಯನ್ನು ಈ ಬಾರಿ ಸಾಂಕೇತಿಕವಾಗಿ ಮತ್ತು ಸರಳವಾಗಿ ಆಚರಣೆ ಮಾಡಲಾಗಿದೆ. ಮುಂದಿನ ಸಲ ತುಂಬಾ ವಿಜೃಂಭಣೆಯಿಂದ ಜಯಂತಿ ಆಚರಣೆ ಮಾಡೋಣ ಎಂದು ಅವರು ತಿಳಿಸಿದರು.

ಜಯಂತಿಯಲ್ಲಿ ಸಮುದಾಯದ ಮುಖಂಡರಾದ ಧನಂಜಯ, ಹೊನ್ನೂರಪ್ಪ, ಬಾಬು ಮಡಿವಾಳ, ಕೃಷ್ಣಾ, ವೀರೇಶ್‌, ಎಲ್ಲಪ್ಪ ಮಡಿವಾಳ, ವಿವೇಕ್‌ ಸೇರಿದಂತೆ ಸಮುದಾಯದ ಹಲವಾರು ಜನರು, ವಿವಿಧ ಇಲಾಖೆಗಳ ಅ ಕಾರಿಗಳು ಇದ್ದರು.

Advertisement

ಓದಿ : ಯುವ ವೇದಿಕೆ ಘಟಕಕ್ಕೆ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next