5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಷಕರು ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.
Advertisement
ನಗರದ ರಾಮಯ್ಯ ಕಾಲೋನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷೀóಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.2011ರಿಂದ ನಮ್ಮ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಭಾರತೀಯ ದೇಶ ಪೋಲಿಯೋ ರೋಗದಿಂದ ಸಂಪೂರ್ಣವಾಗಿ ಹೊರಬಂದಿದೆ. ಇದು ಮುಂದಿನ ಮಕ್ಕಳಿಗೆ ಕಾಣಿಸಿಕೊಳ್ಳದಂತೆ ನೋಡಿಕೊಂಡು ಹೋಗುವ ಕಾರ್ಯ ಮಾಡಬೇಕು
ಎಂದರು.
ಹುಟ್ಟಿದ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಿ ಮಕ್ಕಳ ಬೆಳವಣಿಗೆಗೆ ಸಹಕಾರಿ ಆಗುತ್ತದೆ. ಮಕ್ಕಳಲ್ಲಿ ಆರೋಗ್ಯ ಉತ್ತಮವಾಗಿರಲು ಇದೊಂದು ಒಳ್ಳೆಯ ಪ್ರಯತ್ನ. ಕೋವಿಡ್ ಸಂಬಂಧಿ ಸಿದ ಲಸಿಕೆಗಳನ್ನು ನಮ್ಮ ದೇಶವು ಇತರೇ ದೇಶಗಳಿಗೆ ಪೂರೈಸುವುದರ ಮೂಲಕ ಇತರೇ ದೇಶಗಳಿಗೆ ಮಾದರಿಯಾಗಿದೆ.
ಜಿಲ್ಲಾಧಿ ಕಾರಿ ಪವನ್ ಕುಮಾರ್ ಮಾಲಪಾಟಿ ಮಾತನಾಡಿ, ನಮ್ಮ ದೇಶದಲ್ಲಿ ಕಳೆದ ಹತ್ತು ವರ್ಷದಿಂದ ಯಾವುದೇ ಪೋಲಿಯೋ ಪ್ರಕರಣ ಕಂಡು ಬಂದಿಲ್ಲ. ಮುಂದೆ ಬರಬಾರದು ಎನ್ನುವ ಉದ್ದೇಶದಿಂದ ಈ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ. ನಮ್ಮ ಪಕ್ಕದ ರಾಷ್ಟ್ರವಾದ ಬಾಂಗ್ಲಾ, ಪಾಕಿಸ್ತಾನ, ಅಫ್ಘಾನಿಸ್ತಾನ ರಾಷ್ಟ್ರಗಳಲ್ಲಿ ಇವತ್ತಿಗೂ ಜನರನ್ನು ಪೋಲಿಯೋ ರೋಗ ಕಾಡುತ್ತಿದೆ. ಎಲ್ಲ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕಿಸಿ ಮಕ್ಕಳ ಬೆಳವಣಿಗೆಗೆ ಲಸಿಕೆಯಿಂದಲೇ ನಾಂದಿ ಹಾಡಬೇಕು ಎಂದರು. ಜಿಲ್ಲಾ ಆರ್‌ಸಿಎಚ್ ಅಧಿ ಕಾರಿ ಡಾ| ಆರ್. ಅನಿಲ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಲಸಿಕಾ ಕಾರ್ಯಕ್ರಮ ನಡೆಯುತ್ತದೆ. ಮೊದಲ ದಿನ ಬೂತ್‌ಗಳ ಮಟ್ಟದಲ್ಲಿ ಲಸಿಕಾ ಹಾಕಲಾಗುತ್ತದೆ. ಉಳಿದ ಮೂರು ದಿನಗಳಲ್ಲಿ ನಮ್ಮ ಸಿಬ್ಬಂದಿಯು ಮನೆ ಮನೆಗೆ ಭೇಟಿ ನೀಡಿ ಎಲ್ಲ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. ಜಿಲ್ಲೆಯಲ್ಲಿ 5 ವರ್ಷದೊಳಗಿನ 3,24,818 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ನಗರ ಪ್ರದೇಶದಲ್ಲಿ 549 ಮತ್ತು ಗ್ರಾಮೀಣ ಪ್ರದೇಶದಲ್ಲಿ 1357 ಲಸಿಕಾ ಬೂತ್‌ಗಳು ಸೇರಿದಂತೆ ಜಿಲ್ಲೆಯಲ್ಲಿ 1906 ಲಸಿಕಾ ಬೂತ್‌ಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.
Related Articles
Advertisement
3812 ಜನ ಲಸಿಕೆ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 602 ಕ್ಲಿಷ್ಟಕರ ಸ್ಥಳಗಳನ್ನು ಗುರುತಿಸಲಾಗಿದ್ದು ಅದಕ್ಕಾಗಿ 151 ಕ್ಲಿಷ್ಟಕರ ಸ್ಥಳಗಳಿಗೆ ಮನೆ ಭೇಟಿ ನೀಡುವ ತಂಡಗಳಿವೆ. ಇದಕ್ಕಾಗಿ 363 ಮೇಲುಸ್ತುವಾರಿ ತಂಡಗಳು ಮತ್ತು 8 ತಾಲೂಕು ಉಸ್ತುವಾರಿ ಅಧಿ ಕಾರಿಗಳನ್ನು ನಿಯೋಜಿಸಲಾಗಿದ್ದು. 396278 ಡೋಸ್ ಲಸಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅ ಧಿಕಾರಿ ಡಾ| ಜನಾರ್ಧನ ಎಚ್.ಎಲ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್.ಬಸರೆಡ್ಡಿ, ಎಸ್ ಎಂಒ ಡಾ| ಆರ್.ಎಸ್. ಶ್ರೀಧರ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ| ಗುರುನಾಥ ಚವ್ಹಾಣ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿ ಕಾರಿ ಡಾ| ಇಂದ್ರಾಣಿ, ತಾಲೂಕು ಆರೋಗ್ಯಾ ಧಿಕಾರಿ ಡಾ| ಮೋಹನಕುಮಾರಿ, ರಾಮಯ್ಯ ಕಾಲೋನಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ| ರಾಜಶೇಖರ, ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಈಶ್ವರ್ ದಾಸಪ್ಪನವರ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಗೌರಮ್ಮ, ಪ್ರೊರೊಸಿಸ್ ಕನ್ಸಲ್ಟಂಟ್ ಡಾ| ಆನಂದ, ವಿಹೆಚ್‌ಎಸ್‌ಎನ್‌ಸಿ ಕನ್ಸಲ್ಟಂಟ್ ರಾಘವೇಂದ್ರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿ ಕಾರಿ ಶಾಂತಮ್ಮ ಮತ್ತಿತರರು ಇದ್ದರು.
ಓದಿ: ಕುರಿ ಕಾಳಗದಲ್ಲಿದೆ ಸ್ಪರ್ಧಾ ಮನೋಭಾವ