Advertisement

ಸ್ವಚ್ಛ -ಸ್ವಸ್ಥ ಅಭಿಯಾನಕ್ಕೆ ಕೈಜೋಡಿಸಿ

04:18 PM Jan 31, 2021 | Team Udayavani |

ಬಳ್ಳಾರಿ: ನಗರವನ್ನು ಸ್ವತ್ಛವಾಗಿಡುವ ನಿಟ್ಟಿನಲ್ಲಿ ಮಹಾನಗರಪಾಲಿಕೆಯ ಜತೆ ನಗರದ ನಾಗರಿಕರು ಸಹಕರಿಸಬೇಕು.ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಯಾವುದೇಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ನಗರದ ಕನಕದುರ್ಗಮ್ಮ ದೇವಸ್ಥಾನದ ಆವರಣದಲ್ಲಿರಾಷ್ಟ್ರೀಯ ಸ್ವತ್ಛತಾ ದಿನಾಚರಣೆ ನಿಮಿತ್ತ ಬಳ್ಳಾರಿ ಮಹಾನಗರಪಾಲಿಕೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸ್ವತ್ಛಬಳ್ಳಾರಿ-ಸ್ವಸ್ಥ ಬಳ್ಳಾರಿ ಮತ್ತು ಬಳ್ಳಾರಿ ನಗರದ ಸ್ವತ್ಛತೆಗಾಗಿಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರದಪ್ರತಿಯೊಬ್ಬ ನಾಗರಿಕರು ಬಳ್ಳಾರಿ ನಗರವನ್ನು ಸ್ವತ್ಛ ನಗರ-ಹಸಿರುನಗರವನ್ನಾಗಿಸುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದರು.

Advertisement

ಸ್ವತ್ಛತೆ ಬಗ್ಗೆ ನಾಗರಿಕರ ಮನೋಭಾವನೆಯಲ್ಲಿಬದಲಾವಣೆಯಾದರೇ ಬಳ್ಳಾರಿ ನಗರ ಖಂಡಿತಬದಲಾವಣೆಯಾಗುತ್ತದೆ ಎಂದ ಶಾಸಕರು, ಕಸ ಎಲ್ಲೆಂದರಲ್ಲಿಬಿಸಾಡದೇ ಕಸಸಂಗ್ರಹಿಸಲು ಮನೆ-ಮನೆಗೆ ಬರುವವಾಹನಗಳಿಗೆ ಹಸಿ-ಒಣ ಕಸ ವಿಂಗಡಿಸಿ ನೀಡಬೇಕು ಎಂದರು.

ನಗರ ಸ್ವತ್ಛಗೊಳಿಸುವ ಪೌರಕಾರ್ಮಿಕರ ರಕ್ಷಣೆ ನಮ್ಮಜವಾಬ್ದಾರಿಯಾಗಿದೆ. ಅವರಿಗೆ ಎಲ್ಲ ರೀತಿಯ ಸೌಕರ್ಯಗಳನ್ನುಕಲ್ಪಿಸಬೇಕು. ಕಸ ಸಂಗ್ರಹಿಸುವ ವಾಹನಗಳ ಸಂಖ್ಯೆಯನ್ನುಹೆಚ್ಚಿಸಲು ಉದ್ದೇಶಿಸಲಾಗಿದ್ದು ಒಂದು ದಿನ ಅಥವಾ ಎರಡುದಿನಗಳಿಗೊಮ್ಮೆ ಕಸ ಸಂಗ್ರಹಿಸಲು ಪೌರಕಾರ್ಮಿಕರು ಇನ್ಮುಂದೆಮನೆ-ಮನೆಗಳಿಗೆ ಬರಲಿದ್ದಾರೆ ಎಂದು ಭರವಸೆ ನೀಡಿದರು.ಡಿಸಿ ಪವನ್‌ಕುಮಾರ್‌ ಮಾಲಪಾಟಿ ಮಾತನಾಡಿ, ಬಳ್ಳಾರಿಮಹಾನಗರವನ್ನು ಮುಂದಿನ ಸ್ವತ್ಛ ಮತ್ತು ನೈರ್ಮಲ್ಯ ನಗರಗಳಪಟ್ಟಿಯಲ್ಲಿ ಟಾಪ್‌ 10ರೊಳಗೆ ಬರುವ ನಿಟ್ಟಿನಲ್ಲಿ ಹಾಗೂ ಸ್ವತ್ಛಬಳ್ಳಾರಿ- ಸ್ವಸ್ಥ ಬಳ್ಳಾರಿಯನ್ನಾಗಿಸುವ ನಿಟ್ಟಿನಲ್ಲಿ ನಾಗರಿಕರುಕೈಜೋಡಿಸಬೇಕು. ಸ್ವತ್ಛತೆಯಲ್ಲಿ ಇತರೇ ಮಹಾನಗರಪಾಲಿಕೆಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ವಿವಿಧ ರೀತಿಯಕ್ರಮಗಳನ್ನು ಹಾಗೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಗರದನಾಗರಿಕರು ಸಹ ಪಾಲಿಕೆಯೊಂದಿಗೆ ಕೈಜೋಡಿಸುವ ಮೂಲಕಅಭಿಯಾನ ಯಶಸ್ವಿಗೊಳಿಸಬೇಕು ಎಂದು ಕೋರಿದರು.ಪ್ರತಿ ಭಾನುವಾರ ಒಂದೊಂದು ವಾರ್ಡ್‌ನಲ್ಲಿ ಎಲ್ಲರೂ ಸೇರಿ
ಸ್ವತ್ಛತಾ ಕಾರ್ಯ ಕೈಗೊಳ್ಳಲಾಗುವುದು. ನಾಲ್ಕೈದು ವಾಡ್‌ಗಳಲ್ಲಿ ಈ ರೀತಿ ಮಾಡಿದರೇ ಜನರು ಸ್ವತಃ ತಾವೇ ಮುಂದೆತಮ್ಮ ವಾರ್ಡ್‌ಗಳ ಸ್ವತ್ಛತೆ ವಿಷಯದಲ್ಲಿ ಕಾಳಜಿ ವಹಿಸಲಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಸ್ವತ್ಛತೆ ಮತ್ತು ನೈರ್ಮಲ್ಯದಲ್ಲಿಪ್ರತಿಬಾರಿಯೂ ಟಾಪ್‌ 2 ಒಳಗೆ ಬರುತ್ತಿದ್ದು, ಅದೇ ರೀತಿಯಗುರಿಯಿಟ್ಟುಕೊಂಡು ನಾವು ಕಾರ್ಯನಿರ್ವಹಿಸಬೇಕು ಎಂದಅವರು, ಪೌರಕಾರ್ಮಿಕರ ಸಮಸ್ಯೆಗಳು ನಮ್ಮ ಗಮನದಲ್ಲಿದ್ದು
ಅವುಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದುಎಂದರು.

ಎಸ್ಪಿ ಸೈದುಲು ಅಡಾವತ್‌, ಡಿಎಫ್‌ಒ ಸಿದ್ದರಾಮಪ್ಪಚಳಕಾಪುರೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾನಿರ್ದೇಶಕ ರಮೇಶ್‌ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್‌, ಸ್ವತ್ಛ ಬಳ್ಳಾರಿ-ಸ್ವಸ್ಥಬಳ್ಳಾರಿಯನ್ನಾಗಿಸಲು ಪಾಲಿಕೆ ಇಂದಿನಿಂದ 6 ತಿಂಗಳುಗಳ ಕಾಲಹಾಕಿಕೊಂಡಿರುವ ಯೋಜನೆಗಳ ಕುರಿತು ವಿವರಿಸಿದರು. ಇದೇಸಂದರ್ಭದಲ್ಲಿ ಕಸವಿಂಗಡಣೆ, ನಿರ್ವಹಣೆ ಕುರಿತು ಕಿರು ನಾಟಕಪ್ರದರ್ಶಿಸಲಾಯಿತು. ನಂತರ ಕನಕದುರ್ಗಮ್ಮ ದೇವಸ್ಥಾನದಆವರಣದಿಂದ ಆರಂಭವಾದ ಜಾಥಾವು ಎಸ್ಪಿ ವೃತ್ತ, ಪೊಲೀಸ್‌ಜೀಮ್‌ಖಾನಾ, ತಾಳೂರು ರಸ್ತೆ, ಪಾರ್ವತಿ ನಗರ ಪಾರ್ಕ್‌, ಶಕ್ತಿನರ್ಸಿಂಗ್‌ ಹೋಂ ಸೇರಿದಂತೆ ವಿವಿಧೆಡೆ ಸಂಚರಿಸಿತು.

Advertisement

ಓದಿ :·ಕೃಷಿ ಕಾಯ್ದೆ ರದ್ಧ ತಿಗೆ ಒತ್ತಾಯಿಸಿ ಮನವಿ

 

Advertisement

Udayavani is now on Telegram. Click here to join our channel and stay updated with the latest news.

Next