ಒಂದು ದಿನದ ಮಟ್ಟಿಗೆ ಅತಿಥಿ ಮುಖ್ಯಕಾರ್ಯನಿರ್ವಾಹಕ ಹುದ್ದೆಯ ಪ್ರಭಾರ ನೀಡುವುದರ ಮೂಲಕ ವಿದ್ಯಾರ್ಥಿನಿಯರ ಐಎಎಸ್ ಕನಸಿಗೆ ಪ್ರೇರಣೆ ನೀಡಿದ್ದಾರೆ.
Advertisement
ಅತಿಥಿ ಜಿಪಂ ಸಿಇಒ ಸ್ಥಾನ ಅಲಂಕರಿಸಿದ ವಿದ್ಯಾರ್ಥಿನಿ ಪುಷ್ಪಲತಾ ಈ ಸ್ಥಾನ ಅಲಂಕರಿಸಿದ್ದು ತುಂಬಾ ಸಂತೋಷವಾಯಿತು. ಮುಖ್ಯವಾಗಿ ನನ್ನ ಮುಂದಿನ ಗುರಿ ತಲುಪುವುದಕ್ಕೆ ಇದು ಪ್ರೇರಣೆ ನೀಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ಪರೀಕ್ಷೆಯಲ್ಲಿ ಪಾಸಾಗಿ ಈ ಹುದ್ದೆಗೆ ಬಂದಿದ್ದರೂ ಇಷ್ಟು ಖುಷಿಯಾಗುತ್ತಿರಲಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ ಅತಿಥಿ ಜಿಪಂ ಸಿಇಒ ಸಿಇಒ ಪುಷ್ಪಲತಾ, ಹಳ್ಳಿ ಪ್ರದೇಶದಲ್ಲಿ ಬಾಲ ಕಾರ್ಮಿಕ ಪದ್ದತಿ ಜಾಸ್ತಿಯಾಗುತ್ತಿದೆ. ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ ಇದು ಕಡಿಮೆ ಆಗುತ್ತಿಲ್ಲ. ಬಾಲ್ಯ ವಿವಾಹವೂ ಕೂಡ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಈ ಕುರಿತು ಸಾರ್ವಜನಿಕರಲ್ಲಿ, ಮಹಿಳೆಯರಲ್ಲಿ, ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯ ನಿರ್ವಸಲಾಗುವುದು ಎಂದರು.
ವಿದ್ಯಾರ್ಥಿನಿ ಕವಲೇಶ್ವರಿ ಕೂಡ್ಲಿಗಿ ಆಸೀನರಾಗಿದ್ದರು. ಒಂದು ದಿನದ ಮಟ್ಟಿಗೆ ಕವಲೇಶ್ವರಿ ಅವರಿಗೆ ಉಪಾಧ್ಯಕ್ಷೆ ದೀನಾ ಮಂಜುನಾಥ ಅವರು ಅಧಿ ಕಾರ ವಹಿಸಿಕೊಟ್ಟರು. ಬಳಿಕ ಮಾತನಾಡಿದ ಅತಿಥಿ ಜಿಪಂ ಉಪಾಧ್ಯಕ್ಷೆ ಕವಲೇಶ್ವರಿ, ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಬಸ್‌ಗಳ ವ್ಯವಸ್ಥೆಯಿಲ್ಲ. ಆಟೋಗಳ ಸಂಖ್ಯೆಯೂ ತೀರಾ ವಿರಳ, ಯಾವುದಾದರು ಕೆಲಸಗಳ ನಿಮಿತ್ತ ನಗರಕ್ಕೆ ಕಡೆ ಬರಲು ತುಂಬಾ ದೂರ ಕಾಲ್ನಡಿಗೆ ಮೂಲಕ ಬರಬೇಕಾಗಿದೆ ಇದನ್ನು ತಪ್ಪಿಸಲು ಸಮರ್ಪಕ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದರು. ಎಎಸ್ಪಿ ಲಾವಣ್ಯ ಬದಲಿಗೆ ದಿವ್ಯಶ್ರೀ: ಹೆಚ್ಚುವರಿ ಎಸ್‌ಪಿ ಬಿ.ಎನ್. ಲಾವಣ್ಯ ಅವರ ಸ್ಥಾನದಲ್ಲಿ ಬಳ್ಳಾರಿ ಆದರ್ಶ ವಿದ್ಯಾಲಯದ ವಿದ್ಯಶ್ರೀ ಕೂತು ಒಂದು ದಿನದ ಮಟ್ಟಿಗೆ ಎಎಸ್‌ಪಿ ಆಗಿ ಕಾರ್ಯನಿರ್ವಹಿಸಿದರು. ಈ ವೇಳೆ ಎಎಸ್‌ಪಿ ಲಾವಣ್ಯ ಅವರು, ಅತಿಥಿ ಎಎಸ್ಪಿ ವಿದ್ಯಾರ್ಥಿನಿ ದಿವ್ಯಶ್ರೀಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ತಿಳಿಸಿಕೊಟ್ಟಿದ್ದು ಕಂಡುಬಂದಿತು. ಗ್ರಾಮೀಣ ಪ್ರದೇಶದಲ್ಲಿ ತುಂಬಾ ಜನ ಹೆಣ್ಣು ಮಕ್ಕಳಿಗೆ ಕಾನೂನಿನ ತಿಳವಳಿಕೆ ಇಲ್ಲ. ಕಾನೂನು, ಎಫ್ .ಐ.ಆರ್, ಪೊಲೀಸ್ ವ್ಯವಸ್ಥೆಯ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಲಾಗುವುದು ಎಂದು ಅತಿಥಿ ಎಎಸ್‌ಪಿ ದಿವ್ಯಶ್ರೀ ತಿಳಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ, ಡಿಎಚ್‌ಒ
ಜನಾರ್ಧನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ಜಿಪಂ ಉಪಕಾರ್ಯದರ್ಶಿ ಜಾನಕಿರಾಂ ಸೇರಿದಂತೆ ಇನ್ನಿತರೆ ಉಪ ಕಾರ್ಯದರ್ಶಿಗಳು, ಜಿಪಂ ಮುಖ್ಯ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ ಇದ್ದರು.
Related Articles
Advertisement