Advertisement

ಮಹಾತ್ಮ ಹಾಕಿಕೊಟ್ಟ ಅಹಿಂಸಾ ಮಾರ್ಗ ಮಾದರಿ

03:27 PM Jan 31, 2021 | Team Udayavani |

ಕೂಡ್ಲಿಗಿ: ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಹುತಾತ್ಮರ
ದಿನಾಚರಣೆ ಆಚರಿಸಲಾಯಿತು. ದಿನಾಚರಣೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಎಸ್‌. ಮಹಾಬಲೇಶ್ವರ ಮಾತನಾಡಿ, ಗಾಂ ಧೀಜಿಯವರು
ಹಾಕಿ ಕೊಟ್ಟ ಅಹಿಂಸೆ ಮಾರ್ಗ ಇಂದು ವಿಶ್ವಕ್ಕೆ ಮಾದರಿಯಾಗಿದೆ. ಪರಕೀಯರ ಆಡಳಿತದಲ್ಲಿದ್ದ ವಿಶ್ವದ ಬಹುತೇಕ ರಾಷ್ಟ್ರಗಳು ಅಹಿಂಸಾ
ಮಾರ್ಗದಿಂದಲೇ ಹೊರಾಟ ನಡೆಸಿ ಸ್ವಾತಂತ್ರ ಪಡೆದುಕೊಂಡವು.

Advertisement

ಗಾಂಧೀ ಜಿಯವರ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಪ್ರಗತಿಯಲ್ಲಿ ನಾವು ಪಾಲ್ಗೊಳ್ಳಬೇಕು ಎಂದ ಅವರು, ಶಿಕ್ಷಕ ಬಿಂದು ಮಾದವ್‌ ಗಾಂಧಿ ಚಿತಾಭಸ್ಮವನ್ನು ಪಟ್ಟಣದಲ್ಲಿ ಸ್ಥಾಪನೆ ಮಾಡುವ ಮೂಲಕ ಸರಳ ಜೀವನ ನಡೆಸಿದ ಗಾಂಧೀಜಿಯವರ ಜೊತೆಗೆ ಸ್ವಾತಂತ್ರ ಹೋರಾಟಗರರನ್ನು
ಇಲ್ಲಿ ಜ್ಞಾಪಿಸಿಕೊಳ್ಳುವ ಅವಕಾಶವನ್ನು ನಮಗೆಲ್ಲ ಒದಗಿಸಿಕೊಟ್ಟಿದ್ದಾರೆ ಎಂದು ಸ್ಮರಿಸಿದರು. ಸರಿಯಾಗಿ 11 ಗಂಟೆಗೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಹುತಾತ್ಮರ ಗೌರವಾರ್ಥ 2 ನಿಮಿಷ ಮೌನಾಚರಿಸಲಾಯಿತು. ನಂತರ ವಿವಿಧ ಅಧಿಕಾರಿಗಳು, ಜನಪ್ರತಿನಿಧಿ  ಗಳು ಸ್ಮಾರಕಕ್ಕೆ ಹೂಮಾಲೆಯನ್ನರ್ಪಿಸಿ ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದ ಅನೇಕ ಮಹನೀಯರಿಗೆ ನಮನ ಸಲ್ಲಿಸಿದರು.

ಓದಿ : ಪಂಚಲಕ್ಷ ಪಾದಯಾತ್ರೆಯಲ್ಲಿ ಸಿಎಂ ಬಿಎಸ್‌ವೈ ಪ್ರತಿಕೃತಿ ದಹನ

Advertisement

Udayavani is now on Telegram. Click here to join our channel and stay updated with the latest news.

Next