Advertisement

ಅಕ್ರಮ ನಳ ಸಕ್ರಮಕ್ಕೆ ತೀರ್ಮಾನ

05:39 PM Jan 29, 2021 | Team Udayavani |

ಹರಪನಹಳ್ಳಿ: ಪುರಸಭೆ ಅಧ್ಯಕ್ಷ ಮಂಜುನಾಥ ಇಂಜತ್ಕರ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಸುಮಾರು 4900
ಅಕ್ರಮ ನಳಗಳನ್ನು ಸರ್ಕಾರ ನಿಗದಿಪಡಿಸಿದರ ಪಾವತಿಸಿಕೊಂಡು ಸಕ್ರಮಗೊಳಿಸಲು ತೀರ್ಮಾನಿಸಲಾಯಿತು.

Advertisement

ಅಲ್ಲದೇ ಹೊಸ ಸಂಪರ್ಕ ಪಡೆಯುವವರಿಗೆ 3500 ರೂ. ಶುಲ್ಕ ನಿಗದಿಪಡಿಸಲಾಯಿತು. ಹೊಸ ನಳ ಸಂಪರ್ಕಕ್ಕೆ 5 ಸಾವಿರರೂಗಳನ್ನು ನಿಗದಿ ಮಾಡಬೇಕು ಎಂಬ ಅಧಿಕಾರಿಗಳ ಮನವಿಗೆ ಆಕ್ಷೇಪ ವ್ಯಕ್ತತಪಡಿಸಿದ ಸದಸ್ಯರಾದ ಡಿ.ಅಬ್ದುಲ್‌ರಹಿಮಾನ್‌, ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ,
ಗೊಂಗಡಿ ನಾಗರಾಜ್‌ ಅವರು ಸಾಮಾನ್ಯ ಜನರಿಗೆ ಶುಲ್ಕ ಹೊರೆಯಾಗುತ್ತದೆ. ಕಡಿಮೆ ಮಾಡಬೇಕು ಎಂದಾಗ ಸುದೀರ್ಘ‌ ಚರ್ಚೆ ನಡೆದು ಅಂತಿಮವಾಗಿ 3500 ರೂ. ಶುಲ್ಕ ನಿಗದಿಗೆ ನಿರ್ಣಯ ಕೈಗೊಳ್ಳಲಾಯಿತು. ಪುರಸಭಾ ಕಚೇರಿಯ ಕಂದಾಯ
ವಿಭಾಗದಲ್ಲಿ ಬಹಳಷ್ಟು ಸಮಸ್ಯೆಯಿದ್ದು, ಕಡತಗಳ ವಿಲೇವಾರಿ ಮಾಡಲು ವಿಳಂಬ ಮಾಡಲಾಗುತ್ತಿದೆ. ಅಧಿಕಾರಿಗಳು ಇದೇ ರೀತಿ ನಿರ್ಲಕ್ಷ  ವಹಿಸಿದ್ದ ಮುಂದಿನ ದಿನಗಳಲ್ಲಿ ಸಭೆ ನಡೆಸಲು ಬಿಡುವುದಿಲ್ಲ ಎಂದು ಹಿರಿಯ ಸದಸ್ಯ ಎಂ.ವಿ.ಅಂಜಿನಪ್ಪ ಕಿಡಿಕಾರಿದಾಗ ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಎಸ್‌.ಜಾಕೀರಹುಸೇನ್‌ ಅವರು ಸದಸ್ಯರು ಕೊಟ್ಟ ಅರ್ಜಿಗಳಿಗೆ ಸ್ಪಂದನೆ ಇಲ್ಲ, ಇನ್ನೂ ಸಾರ್ವಜನಿಕರ ಪಾಡೇನು
ಎಂದು ಪ್ರಶ್ನಿಸಿದರು.

ಸದಸ್ಯರಾದ ಎಚ್‌.ಎಂ.ಅಶೋಕ್‌, ಗೊಂಗಡಿ ನಾಗರಾಜ್‌ ಅವರು ಸಿಬ್ಬಂದಿ ವರ್ಗದವರ ಕಾರ್ಯವೈಖರಿ ಸರಿಯಿಲ್ಲ. ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಮುಖ್ಯಾ ಧಿಕಾರಿಗಳು ವಾರ್ಡ್‌ಗಳ ಭೇಟಿ ಮಾಡಿ ಸಮಸ್ಯೆಗಳ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ತಾಕೀತು
ಮಾಡಿದರು. ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ನ್ಯಾಯಾಲಯದ ಜಡ್ಜ್ಗಳಂತೆ ಕೆಲಸ ಮಾಡಬೇಕು ಎಂದು ಸದಸ್ಯ ಅಬ್ದುಲ್‌ ರಹೀಮಾನ್‌ ಸಾಬ್‌ ಅ ಧಿಕಾರಿಗಳಿಗೆ ಸಲಹೆ ನೀಡಿದರು.

ಸದಸ್ಯ ಟಿ.ವೆಂಕಟೇಶ ಮಾತನಾಡಿ, ವಾರ್ಡ್‌ಗಳಲ್ಲಿ ಅನೇಕ ಸಮಸ್ಯೆಗಳಿದ್ದು, ಪ್ರತಿ ತಿಂಗಳಿಗೊಮ್ಮೆ ಸಭೆ ಕರೆಯಬೇಕು. ಒಂದೇ ಬಾರಿಗೆ 19 ವಿಷಯಗಳನ್ನು ಚರ್ಚೆಗೆ ತಂದರೆ ಹೇಗೆ ಚರ್ಚಿಸೋದು ಎಂದು ಅಧ್ಯಕ್ಷರಿಗೆ ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಅಧ್ಯಕ್ಷ ಮಂಜುನಾಥ ಇಜಂತಕರ್‌ ತಿಳಿಸಿದರು. ಮಹಿಳಾ ಸದಸ್ಯರಾದ ಲಕ್ಕಮ್ಮ, ಯಲ್ಲಮ್ಮ, ಅವರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಬೀದಿ ದೀಪ, ಚರಂಡಿ, ನೀರಿನ ಸಮಸ್ಯೆ ಕುರಿತು ಗಮನ ಸೆಳೆದು ಕೂಡಲೇ ಸಮಸ್ಯೆ ನೀಗಿಸಿ ಎಂದು
ಕೋರಿದರು.

ಪಟ್ಟಣದ ಪಠಾಣೆಗೇರಿಯಲ್ಲಿ ಕುಡಿಯುವ ನೀರಿನ ಜೊತೆ ಚರಂಡಿ ಮತ್ತು ಶೌಚಾಲಯ ನೀರು ಕಲುಷಿತವಾಗಿ ದಿನನಿತ್ಯ ಪೂರೈಕೆಯಾಗುತ್ತಿದೆ. ಪೈಪ್‌ಲೈನ್‌ ಹೊಸದಾಗಿ ಮಾಡುವಂತೆ ಸದಸ್ಯ ಎಸ್‌.ಜಾಕೀರ್‌ ಹುಸೇನ್‌ ಮನವಿ ಮಾಡಿದಾಗ ಪಟ್ಟಣದ ತುರ್ತಾಗಿ ಆಗಬೇಕಾಗಿರುವುಗಳನ್ನು ಗುರುತಿಸಿ ಕಾಮಗಾರಿ ಮಾಡುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.

Advertisement

ಪಾಠಣಗೇರಿಯಲ್ಲಿ ಕಳೆದ ಒಂದು ದಶಕದಿಂದ ಧಾರ್ಮಿಕ ಕೇಂದ್ರದ ಸಮೀಪವಿರುವ ಸಾರ್ವಜನಿಕ ಶೌಚಾಲಯ ಉಪಯೋಗಿಸುತ್ತಿಲ್ಲ, ಹೀಗಾಗಿ
ಗ್ರಂಥಾಲಯವಾಗಿ ಪರಿವರ್ತನೆ ಮಾಡುವಂತೆ ಎಸ್‌.ಜಾಕೀರಹುಸೇನ್‌ ಮಾಡಿದಾಗ ಧಾರ್ಮಿಕ ಸ್ಥಳದ ನಿರುಪಯುಕ್ತವಾಗಿ
ಶೌಚಾಲಯ ಗುರುತಿಸಿ ಮುಂದಿನ ಸಭೆಯಲ್ಲಿ ನಿರ್ಧರಿಸುವುದಾಗಿ ಅಧ್ಯಕ್ಷರು ತಿಳಿಸಿದರು.

ಉಪಾಧ್ಯಕ್ಷೆ ನಿಟ್ಟೂರು ಭೀಮವ್ವ ಹಾಗೂ ಸದಸ್ಯರು, ಮುಖ್ಯಾಧಿಕಾರಿ ಬಿ.ಆರ್‌.ನಾಗರಾಜನಾಯ್ಕ, ಆರೋಗ್ಯಾಧಿಕಾರಿ ಮಂಜುನಾಥ್‌, ಸಮುದಾಯ ಸಂಘಟನಾಧಿ ಕಾರಿ ಲೋಕಾನಾಯ್ಕ ಇತರರು ಹಾಜರಿದ್ದರು.

ಓದಿ : ಕೋವಿಡ್‌ ಕಾರಣ ಹೇಳಬೇಡಿ, ಕಾರ್ಯಪ್ರವೃತ್ತರಾಗಿ

Advertisement

Udayavani is now on Telegram. Click here to join our channel and stay updated with the latest news.

Next