ಕಂಪ್ಲಿ: ತಾಲೂಕಿನ ನೆಲ್ಲುಡಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ನೆಲ್ಲುಡಿ ಗ್ರಾಪಂ ವ್ಯಾಪ್ತಿಯ ಶಂಕರ್‌ಸಿಂಗ್ ಕ್ಯಾಂಪಿನ ಎಲ್. ಶ್ರೀನಿವಾಸಲು ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ನೆಲ್ಲುಡಿ ಕೊಟ್ಟಾಲನ ಹನುಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು
ಚುನಾವಣಾ ಧಿಕಾರಿ, ಕಂಪ್ಲಿ ತಾ.ಪಂ ಇಒ ಬಿ.ಬಾಲಕೃಷ್ಣ ಘೋಷಿದರು.
ಒಟ್ಟು 20 ಸದಸ್ಯರನ್ನು ಹೊಂದಿರುವ ನೆಲ್ಲುಡಿ ಗ್ರಾಪಂನ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಹೊಸನೆಲ್ಲುಡಿಯ ಪಿ.ಶ್ರೀನಿವಾಸರೆಡ್ಡಿ ಮತ್ತು ಶಂಕರ್‌ಸಿಂಗ್ ಕ್ಯಾಂಪಿನ ಎಲ್. ಶ್ರೀನಿವಾಸಲು ಸ್ಪ ರ್ಧಿಸಿದ್ದು, ಎಲ್.ಶ್ರೀನಿವಾಸಲು 10 ಮತಗಳನ್ನು ಪಡೆದರೆ, ಪಿ.ಶ್ರೀನಿವಾಸರೆಡ್ಡಿ 9 ಮತಗಳನ್ನು ಪಡೆದಿದ್ದು, ಒಂದು ಮತ ಅಸಿಂಧುವಾಗಿದೆ. ಇದರಲ್ಲಿ ಎಲ್.ಶ್ರೀನಿವಾಸಲು ಆಯ್ಕೆಯಾಗಿದ್ದಾರೆ ಎಂದು ಹಾಗೂ ಅನುಸೂಚಿ ಪಂಗಡಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಹನುಮಯ್ಯ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆ
ಅವಿರೋಧ ಎಂದು ಚುನಾವಣಾ ಧಿಕಾರಿ ಬಿ.ಬಾಲಕೃಷ್ಣ ಘೋಷಣೆ ಮಾಡಿದರು.
ನೆಲ್ಲುಡಿ ಗ್ರಾಪಂನ 20 ಸದಸ್ಯರಲ್ಲಿ 11 ಸದಸ್ಯರು ಭಾಜಪ ಬೆಂಬಲಿತರಿದ್ದು, ಕಾಂಗ್ರೆಸ್ ಬೆಂಬಲಿತರು 9 ಸದಸ್ಯರಿದ್ದು, ಕಡಿಮೆ ಸದಸ್ಯರಿರುವ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಭಾಜಪ ಮುಖಂಡರಿಗೆ ಆಶ್ಚರ್ಯ ತಂದಿದೆ. ನೆಲ್ಲುಡಿ ಗ್ರಾಪಂ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ರುದ್ರಮ್ಮ, ಈಡಿಗರ ರೇಣುಕಮ್ಮ, ಕೆ.ಫಕ್ಕೀರಪ್ಪ, ಕಜ್ಜಿ ಉಮೇಶ್, ರಹಮತ್‌ಬೀ, ಎಂ.ಭೂಲಕ್ಷ್ಮೀ, ಗಂಗಮ್ಮ, ಮಸ್ತಾನಪ್ಪ, ಎಲ್.ಶ್ರೀನಿವಾಸಲು ಭಾಗವಹಿಸಿದ್ದರು. ಭಾಜಪ ಬೆಂಬಲಿತರಾದ ಪಿ.ಶ್ರೀನಿವಾಸರೆಡ್ಡಿ, ರಾಜಾಭಕ್ಷಿ, ಪಾರ್ವತಿ, ಸುಧಾಕರ್, ಎಚ್.ಚಂದ್ರಕಲಾ,ಎ.ಶಾಂತಿ,ಧನುಂಜಯ, ಲಕ್ಷ್ಮೀ ಕಾಂತಮ್ಮ, ಹನುಮಯ್ಯ, ಜಯಮ್ಮ, ಪಿ.ಜ್ಯೋತಿ ಭಾಗವಹಿಸಿದ್ದರು.
ಚುನಾವಣೆಯಲ್ಲಿ ಪಿಡಿಒ ತಾರುನಾಯ್ಕ, ಸಿಬ್ಬಂದಿ ರಾಜಾಸಾಬ್ ಉಪಸ್ಥಿತರಿದ್ದರು, ಕುರುಗೋಡು ಪಿಎಸ್‌ಐ ಮೌನೇಶ್ ರಾಥೋಡ್ ಹಾಗೂ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.
ಓದಿ :
ಕೃಷಿ ಸಚಿವ ಪಾಟೀಲ್ ಪ್ರತಿಕೃತಿ ದಹನ