Advertisement

ಕೃಷಿ ಸಚಿವ ಪಾಟೀಲ್‌ ಪ್ರತಿಕೃತಿ ದಹನ

05:22 PM Jan 29, 2021 | Team Udayavani |

ಸಂಡೂರು: ದೇಶದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿರುವ ದುಸ್ಥಿತಿಯಲ್ಲಿಯೂ ಸಹ ರೈತರನ್ನು ಅವಮಾನಿಸುತ್ತಿರುವ ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಅಧ್ಯಕ್ಷ ಯು. ತಿಪ್ಪೇಸ್ವಾಮಿ ಎಚ್ಚರಿಸಿದರು.

Advertisement

ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಕೃಷಿ ನೀತಿ ಹಾಗೂ ಕೃಷಿ ಸಚಿವರ ಬಿ.ಸಿ.ಪಾಟೀಲ್‌ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಜನಪ್ರತಿನಿ ಧಿಗಳು ಗೆದ್ದ ತಕ್ಷಣವೇ ಜನರನ್ನು ಮರೆಯುವುದು ಸರಿಯಲ್ಲ. ರೈತರಿಗಾಗಿ ಎಂದು ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದ ಸಚಿವರು, ಇಂದು ರೈತರಿಗೆ ಮಾರಕವಾದ ಕಾಯಿದೆಗಳನ್ನು ಬೆಂಬಲಿಸಿ ರೈತರನ್ನು ಹೀಯಾಳಿಸುವಂತಹ ಕಾರ್ಯ ಮಾಡುತ್ತಿದ್ದಾರೆ. ಆದ್ದರಿಂದ ಇಂತಹ ಹೀನ ಹೇಳಿಕೆ ಕೈ ಬಿಡಬೇಕು. ರೈತರ ಕ್ಷಮೆಯಾಚಿಸಬೇಕು ಎಂದು
ಒತ್ತಾಯಿಸಿದರು.
ಘಿಕುರೇಕುಪ್ಪ ರೈತ ಮುಖಂಡ ಪಂಪನಗೌಡ ಮಾತನಾಡಿ, ರೈತರು ಎಂದರೆ ಸೇವಕರು ಎನ್ನುವಂತಹ ಮನೋಭಾವ ಜನಪ್ರತಿನಿಧಿ ಗಳಲ್ಲಿ ಉಂಟಾಗಿದೆ. ದೇಶದ ಜನತೆಗೆ ಅನ್ನ ಹಾಕುವವ ರೈತ. ಮಣ್ಣಿನಲ್ಲಿ ಮೈ ಮುರಿದು ದುಡಿಯುವವ ರೈತ. ಆದರೆ ಅದೇ ರೈತನ ಬೆನ್ನು ಮೂಳೆ
ಮುರಿಯುವಂತಹ ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ, ವಿದ್ಯುತ್‌ ಕಾಯ್ದೆಗಳನ್ನು ತರುವ ಮೂಲಕ ರೈತರನ್ನು ಭಿಕ್ಷುಕರನ್ನಾಗಿಸುವ ವ್ಯವಸ್ಥಿತ ತಂತ್ರಗಾರಿಕೆ ಇದಾಗಿದೆ. ಕೃಷಿ ಸಚಿವರ ತಕ್ಷಣ ತಮ್ಮ ಕೆಟ್ಟ ಹೇಳಿಕೆಗಳನ್ನು ಹಿಂಪಡೆಯಬೇಕು. ರೈತರನ್ನು ಗೌರವಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಕಟ್ಟಡ ಕಾರ್ಮಿಕ ಸಂಘದ ವಿ.ದೇವಣ್ಣ ಮಾತನಾಡಿ, ಕಾರ್ಮಿಕರನ್ನು ಶೋಷಿಸುವಂತಹ, ಬಂಡವಾಳ ಶಾಹಿಗಳಿಗೆ ರತ್ನಗಂಬಳಿ ಹಾಕಿ ಸ್ವಾಗತಿಸುವಂತಹ ಸರ್ಕಾರಕ್ಕೆ  ರೈತರ ಧಿಕ್ಕಾರವಿದೆ. ರೈತರು ಎಂದರೆ ಅಲ್ಪರು ಎನ್ನುವಂತಹ ಸ್ಥಿತಿ ತೊಲಗಲಿ. ರೈತರು ಈ ದೇಶದ ಸಂಪತ್ತು ಎನ್ನುವುದನ್ನು ಮರೆಯಬಾರದು. ಕಾರ್ಮಿಕರನಾಗಿ, ಅನ್ನದಾತನಾಗಿ ದುಡಿಯುವಂತಹ ರೈತರಿಗೆ ಅವಮಾನಿಸುವಂತಹ ಸಚಿವರ ಹೇಳಿಕೆ ಖಂಡನೀಯ. ಕೇಂದ್ರ ಸರ್ಕಾರ ಜನರಿಗಾಗಿ ಕಾಯ್ದೆ ತರುತ್ತಿಲ್ಲ. ಬಂಡವಾಳಶಾಹಿಗಳಿಗಾಗಿ ಕಾನೂನು ತರುತ್ತಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಇಂತಹ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದರು.

ಮುಖಂಡರಾದ ಕುಮಾರ್‌, ಹುಲುಗಪ್ಪ, ಪಂಪಾಪತಿ, ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಮೆರವಣಿಗೆ ನಡೆಸಿ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಓದಿ : “ಉತ್ಸವ ದಿ ಹಂಪಿ’ : ಇಂದಿನಿಂದ ಕಾರು-ಬೈಕ್‌ ರೇಸ್‌

Advertisement

Udayavani is now on Telegram. Click here to join our channel and stay updated with the latest news.

Next