Advertisement

ಸಂಗೊಳ್ಳಿ ರಾಯಣ್ಣನಿಗೂ ವಿಶೇಷ ಗೌರವ ಸಲ್ಲಿಸಿ

09:20 PM Jul 04, 2021 | Team Udayavani |

ಹೊಸಪೇಟೆ: ಜನವರಿ 26, ಆಗಸ್ಟ್‌ 15ರಂದು ಧ್ವಜಾರೋಹಣ ಕಾರ್ಯಕ್ರಮದ ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ವಿಶೇಷ ಗೌರವ ನೀಡಬೇಕು ಎಂದು ಒತ್ತಾಯಿಸಿ ನಗರದ ತಹಸೀಲ್ದಾರ್‌ ಕಚೇರಿ ಸ್ಥಾನಿಕಾಧಿಕಾರಿ ಮೂಲಕ ಸಚಿವ ಆನಂದ್‌ಸಿಂಗ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಸಂಗೊಳ್ಳಿ ರಾಯಣ್ಣನವರ 1796ರ ಆಗಸ್ಟ್‌ 15ರಂದು ಜನ್ಮದಿನ ಹಾಗೂ 1831ರ ಜನವರಿ 26ರಂದು ಹುತಾತ್ಮ ದಿನವಾಗಿದ್ದು, ಇವೆರಡು ದಿನ ಸ್ವಾತಂತ್ರÂ ದಿನ, ಗಣರಾಜ್ಯೋತ್ಸವ ದಿನಗಳಾಗಿ ಆಚರಿಸುತ್ತೇವೆ. ಆದ್ದರಿಂದ ಅವರ ಸ್ಮರಣಾರ್ಥವಾಗಿ ಸರಕಾರಿ ಹಾಗೂ ಎಲ್ಲ ಶಾಲಾ ಕಾಲೇಜು, ಕಚೇರಿಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನೀಡುವಂತೆ ಸರಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಜಿಲ್ಲಾಧ್ಯಕ್ಷ ದಾಸನಾಳ್‌ ಹನುಮಂತಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್‌. ಮಹೇಶ್‌, ಉಪಾಧ್ಯಕ್ಷರಾದ ಎನ್‌. ನಾಗರಾಜ, ಕೆ.ರವಿಕುಮಾರ್‌, ಪದಾ ಧಿಕಾರಿಗಳಾದ ಬಂದಿ ಸ್ವಾಮಿ, ಬಂದಿ ಭರ್ಮಪ್ಪ, ಬಿ.ಬಲ್ಲೂರೇಶ್‌, ಬಿಸಾಟಿ ತಾಯಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next